ಸನ್ಮಾರ್ಗ ವಾರ್ತೆ
ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ಆಘಾತದಿಂದ ದೇಶ ಇನ್ನೂ ಹೊರಬರದೆ ಇರುವ ಈ ಸಂದರ್ಭದಲ್ಲಿ ಗುಜರಾತನ ಮಿಡ್ ಡೇ ಎಂಬ ಪತ್ರಿಕೆ ಪ್ರಕಟಿಸಿದ ಜಾಹೀರಾತೊಂದು ಭಾರಿ ಚರ್ಚೆಗೆ ಕಾರಣವಾಗಿದೆ. ಏರ್ ಇಂಡಿಯಾ ವಿಮಾನ ಪತನವಾಗುವುದಕ್ಕಿಂತ ಗಂಟೆಗಳ ಮೊದಲು ಈ ಪತ್ರಿಕೆ ಪ್ರಕಟವಾಗಿತ್ತು. ಏರ್ ಇಂಡಿಯಾ ವಿಮಾನದ ಪತನವನ್ನು ಈ ಜಾಹೀರಾತು ಸೂಚ್ಯವಾಗಿ ಹೇಳಿರುವುದು ಎಲ್ಲರ ಗಮನವನ್ನು ಸೆಳೆದಿದೆ.
ಏರ್ ಇಂಡಿಯ ವಿಮಾನ ಒಂದು ಕಟ್ಟಡದ ಒಳಗೆ ನುಗ್ಗಿ ಹೊರಬರುವುದು ಜಾಹೀರಾತಿನಲ್ಲಿದೆ.
ಕಾಕತಾಳೀಯ ಏನೆಂದರೆ ಅಹಮದಾಬಾದ್ ನಲ್ಲಿ ಪತನಗೊಂಡ ವಿಮಾನವು ಡಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನ ಒಳ ನುಗ್ಗಿ ಸ್ಪೋಟಿಸಿದೆ ಜಾಹೀರಾತಿನಲ್ಲಿ ಕೂಡ ಇದೇ ರೀತಿಯಲ್ಲಿ ಹೇಳಲಾಗಿದೆ. ವಿಮಾನ ಅಪಘಾತ ಕ್ಕಿಂತ ಗಂಟೆಗಳ ಮೊದಲು ಈ ಜಾಹೀರಾತು ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಕೌಟುಂಬಿಕವಾಗಿ ಮನೋರಂಜನೆ ಅನುಭವಿಸುವ ಕಿಡ್ಸಾನಿಯ ಎಂಬ ಸಂಸ್ಥೆಯ ಜಾಹೀರಾತು ಇದಾಗಿತ್ತು. ಆಕರ್ಷಕವಾಗಿ ಜಾಹೀರಾತನ್ನು ಪ್ರಕಟಿಸಲಾಗಿದೆ. ಏರ್ ಇಂಡಿಯಾ ಎಂಬ ಹೆಸರನ್ನು ತಪ್ಪಿಲ್ಲದೆ ಮತ್ತು ನೇರವಾಗಿಯೇ ಜಾಹಿರಾತಿನಲ್ಲಿ ಉಲ್ಲೇಖಿಸಲಾಗಿದೆ. ಕಿಡ್ಸ್ ಸಾನಿಯಾದಲ್ಲಿ ಏವಿಯೇಷನ್ ಅನುಭವವನ್ನು ವಿದ್ಯಾರ್ಥಿಗಳಿಗೆ ಅನುಭವಿಸಬಹುದು ಎಂದು ಹೇಳುವುದು ಈ ಜಾಹೀರಾತಿನ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಇಲ್ಲಿ ಮಕ್ಕಳಿಗೆ ಪೈಲೆಟ್ ಮತ್ತು ವಿಮಾನ ಪರಿಚಾರಿಕೆಯರ ಹೊಣೆಗಾರಿಕೆಗಳು ಏನು ಎಂಬುದು ದನ್ನು ತಿಳಿಯಬಹುದು ಎಂದು ಜಾಹೀರಾತಿನಲ್ಲಿ ಸ್ಪಷ್ಟಪಡಿಸಲಾಗಿದೆ. ಎರಡು ದಿನಗಳ ಕಾಲ ಏರ್ಪಡಿಸುವ ಕಿಡ್ಸಾನಿಯಾದ ಫಾದರ್ಸ್ ಡೇ ಕಾರ್ಯಕ್ರಮಕ್ಕೆ ಮುಂಚಿತವಾಗಿ ಈ ಜಾಹೀರಾತನ್ನು ಪ್ರಕಟಿಸಲಾಗಿದೆ.
ಇದೊಂದು ಕಲ್ಪನೆಯ ಜಾಹೀರಾತಾಗಿತ್ತು. ಆದರೆ ಅಪಘಾತಕ್ಕಿಂತ ಗಂಟೆಗಳ ಮೊದಲು ಪ್ರಕಟಿಸಲಾದ ಈ ಜಾಹೀರಾತು ನಿಜ ಘಟನೆಗೆ ಹೋಲಿಕೆಯಾಗಿದೆ ಅನ್ನೋದು ಕಾಕತಾಳೀಯ ಎಂದು ಜನರು ಹೇಳುತ್ತಿದ್ದಾರೆ.












