ಸನ್ಮಾರ್ಗ ವಾರ್ತೆ
ಅಹಮದಾಬಾದ್ ವಿಮಾನ ದುರಂತದ ಪ್ರದೇಶದಲ್ಲಿ ಮತ್ತು ಆರ್ ಜೆ ಮೆಡಿಕಲ್ ಕಾಲೇಜಿನಲ್ಲಿ ಗಾಯಾಳುವಾಗಿರುವವರಿಗೆ ಹಾಗೂ ಅವರನ್ನು ನೋಡಿಕೊಳ್ಳುತ್ತಿರುವವರಿಗೆ ಜಮಾಅತೆ ಇಸ್ಲಾಮಿ ಹಿಂದ್ ಸಹಿತ ವಿವಿಧ ಸಂಘಟನೆಗಳು ಸೇವಾ ಕಾರ್ಯದಲ್ಲಿ ನಿರತವಾಗಿವೆ. ವಿಮಾನ ಅಪಘಾತದಲ್ಲಿ ಸಾವಿಗೀಡಾದವರು ಮತ್ತು ಗಾಯಾಳುಗಳ ಕುಟುಂಬಸ್ಥರು ಇಲ್ಲಿ ನೆರೆದಿದ್ದು ಇವರಿಗೆ ನೀರು ಆಹಾರ ಚಾ ಇತ್ಯಾದಿಗಳನ್ನು ಸ್ವಯಂಸೇವಕರು ನೀಡುತ್ತಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ನ ಹಫೀಝ್ ನಿಝಾಮ್ ಅವರು ಸಂತ್ರಸ್ತರು ಮತ್ತು ಅವರ ಕುಟುಂಬಿಕರ ನಡುವೆ ನೀರು ಆಹಾರ ಇತ್ಯಾದಿಗಳನ್ನು ವಿತರಿಸುತ್ತಿರುವ ಚಿತ್ರವನ್ನು ವಿವಿಧ ಮಾಧ್ಯಮಗಳು ಪ್ರಕಟಿಸಿವೆ.
ನಿಝಾಮ್ ಅವರು ಅಹಮದಾಬಾದ್ ಸ್ಥಳೀಯ ವ್ಯಾಪಾರಸ್ಥರಾಗಿದ್ದು ಅವರು ಸಹಿತ 26 ಮಂದಿಯ ತಂಡ ಸಂತ್ರಸ್ತರ ಸೇವೆಯಲ್ಲಿ ನಿರತವಾಗಿದೆ. ಜಮಾಅತ್ನ ಮೂರು ಆಂಬುಲೆನ್ಸ್ ಗಳು ಕೂಡ ಸೇವಾ ನಿರತವಾಗಿವೆ.
ಇಲ್ಲಿ ಎಲ್ಲಾ ಧರ್ಮದ ಸ್ವಯಂಸೇವಕರು ಒಂದಾಗಿದ್ದಾರೆ ಇದು ಭಾರತದ ನಿಜವಾದ ಗುಣವಾಗಿದೆ ಇಲ್ಲಿಯ ಏಕತೆ ಇದೆ. ಇದು ಎಂದೆಂದೂ ಹೀಗೆ ಉಳಿಯಲಿ ಎಂದು ಅಲ್ಲಾಹನಲ್ಲಿ ನಾನು ಪ್ರಾರ್ಥಿಸುತ್ತೇನೆ. ನಾವೆಲ್ಲರೂ ಜೊತೆಗೂಡಿ ಕೆಲಸ ಮಾಡುತ್ತೇವೆ ಎಂದು ನಿಝಾ ಮ್ ಹೇಳಿದ್ದಾರೆ.
ಇಲ್ಲಿ ತಾಲಿ ಯುವ ಸಂಘ, ವಿಶ್ವ ಉಮಿಯಾ ಫೌಂಡೇಶನ್, ರಾಮ್ ಶ್ಯಾಮ್ ಚಾರಿಟೇಬಲ್ ಟ್ರಸ್ಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಕೂಡ ಇಲ್ಲಿ ಸೇವಾ ನಿರತರಾಗಿದ್ದಾರೆ.












