ಇಸ್ರೇಲ್ ದಾಳಿಯನ್ನು ಖಂಡಿಸಿ ಇರಾನ್‌ಗೆ ಬೆಂಬಲ ಸೂಚಿಸಿದ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್

0
1618

ಸನ್ಮಾರ್ಗ ವಾರ್ತೆ

ಇರಾನ್ ಮೇಲೆ ಇಸ್ರೇಲ್ ನಡೆಸಿರುವ ದಾಳಿಯನ್ನು ಸೌದಿ ಅರೇಬಿಯಾದ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ದೂಷಿಸಿದ್ದಾರೆ. ಇರಾನ್ ಮೇಲಿನ ದಾಳಿಯು ಪರಿಸ್ಥಿತಿಯನ್ನು ಹದಗೆಡಿಸಿದೆ ಮತ್ತು ಮಾತುಕತೆಯ ಅವಕಾಶವನ್ನು ತಡೆಹಿಡಿದಿದೆ ಎಂದವರು ಹೇಳಿದ್ದಾರೆ. ಇರಾನ್ ಅಧ್ಯಕ್ಷ ಡಾಕ್ಟರ್ ಮಸೂದ್ ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸುತ್ತಾ ರಾಜಕುಮಾರ ತನ್ನ ಇಸ್ರೋಲ್ ವಿರೋಧಿ ಧೋರಣೆಯನ್ನು ಸ್ಪಷ್ಟಪಡಿಸಿದ್ದಾರೆ.

ಬಲವಂತದಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಇಸ್ರೇಲ್ ಪ್ರಬಲವಾಗಿ ವಿರೋಧಿಸುತ್ತದೆ. ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಮಾತುಕತೆ ಮಾತ್ರ ಪರಿಹಾರ ಎಂದು ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ. ಇದೇ ವೇಳೆ ಇಸ್ರೇಲ್ ದಾಳಿಯಿಂದ ಮೃತಪಟ್ಟವವರಿಗೂ ಮತ್ತು ಅವರ ಕುಟುಂಬದವರಿಗೂ ರಾಜಕುಮಾರ ಸಾಂತ್ವನ ಹೇಳಿದ್ದಾರೆ. ಇರಾನ್ ನ ಸಾರ್ವಭೌಮತ್ವ ಮತ್ತು ಸುರಕ್ಷಿತತೆಗೆ ಈ ದಾಳಿ ಸವಾಲನ್ನು ಎಸೆದಿದೆ ಮತ್ತು ಅಂತಾರಾಷ್ಟ್ರೀಯ ನಿಯಮಗಳ ಕಟು ಉಲ್ಲಂಘನೆಯಾಗಿದೆ ಎಂದು ಇಸ್ರೇಲ್ ದಾಳಿಯನ್ನು ರಾಜಕುಮಾರ ಖಂಡಿಸಿದ್ದಾರೆ.

ಇದೇ ವೇಳೆ ಸೌದಿ ಅರೇಬಿಯಾವು ಇರಾನ್ ಜೊತೆ ಮತ್ತು ಅದರ ನಾಗರಿಕರ ಜೊತೆ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.