ಬೆಳ್ಳಿಯ ಪ್ಲೇಟು, ಒಬ್ಬೊಬ್ಬ ಅತಿಥಿಗೂ 5000 ರೂಪಾಯಿಯ ಊಟ: ಸಂಸತ್ತಿನ ಅಂದಾಜು ಸಮಿತಿಯ ಸಭೆ ವಿವಾದದಲ್ಲಿ

0
441

ಸನ್ಮಾರ್ಗ ವಾರ್ತೆ

ಮುಂಬೈಯ ವಿಧಾನ ಭವನ್ ಕಾಂಪ್ಲೆಕ್ಸ್ ನಲ್ಲಿ ನಡೆದ ಸಂಸತ್ತಿನ ಅಂದಾಜು ಸಮಿತಿಯ ಪ್ಲಾಟಿನಂ ಸಭೆ ವಿವಾದಕ್ಕೆ ಗುರಿಯಾಗಿದೆ. ಈ ಸಭೆಯಲ್ಲಿ 600 ಮಂದಿ ಅತಿಥಿಗಳು ಭಾಗವಹಿಸಿದ್ದು ತಲಾ 5,000 ರೂಪಾಯಿಯ ಊಟವನ್ನು ಬಡಿಸಲಾಗಿದೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಆರೋಪಿಸಿದೆ. ಇವರಲ್ಲಿ ಪ್ರತಿಯೊಬ್ಬರಿಗೂ 550 ರೂಪಾಯಿ ಬಾಡಿಗೆಯ ಬೆಳ್ಳಿ ತಟ್ಟೆಯಲ್ಲಿ ಊಟವನ್ನು ಒದಗಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಮಹಾರಾಷ್ಟ್ರ ತೀವ್ರ ಆರ್ಥಿಕ ತೊಂದರೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಈ ದುಬಾರಿ ಖರ್ಚು ಮಾಡಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಸ್ಪೀಕರ್ ಓಂ ಬಿರ್ಲಾ ಅವರು ಈ ಸಭೆಯನ್ನು ಉದ್ಘಾಟಿಸಿದರು.

ಈ ದುಬಾರಿ ಖರ್ಚನ್ನು ಮಹಾರಾಷ್ಟ್ರದ ಕಾಂಗ್ರೆಸ್ ಪ್ರಶ್ನಿಸಿದೆ. ಒಂದು ಕಡೆ ರೈತರ ಸಾಲವನ್ನು ಮನ್ನಾ ಮಾಡುವುದಕ್ಕೆ ಸರಕಾರ ನಿರಾಕರಿಸುತ್ತಿದೆ. ಅಧಿಕಾರಿಗಳಿಗೆ ಬೋನಸ್ ನೀಡುವುದಕ್ಕೂ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳುತ್ತಿದೆ. ಮತ್ತೊಂದು ಕಡೆ ಒಬ್ಬೊಬ್ಬ ಅತಿಥಿಗೂ 5000 ರೂಪಾಯಿಗಿಂತಲೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.