ಸನ್ಮಾರ್ಗ ವಾರ್ತೆ
ಕಾಪು: ನೈಸರ್ಗಿಕ ಆಹಾರ ಉತ್ಪನ್ನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಮ್ದ್ ಫುಡ್ಸ್ ಕಂಪನಿ, ತನ್ನ ನಾಲ್ಕನೇ ಶೋರೂಮ್ ನ್ನು ಕಾಪು ನಗರದಲ್ಲಿ ಗುರುವಾರ ವಿಜೃಂಭಣೆಯಿಂದ ಉದ್ಘಾಟಿಸಿತು.
ಈ ಮೊದಲು ಫಲ್ನೀರ್, ಕೃಷ್ಣಾಪುರ ಮತ್ತು ತೋಕ್ಕೊಟ್ಟು ಪ್ರದೇಶಗಳಲ್ಲಿ ಯಶಸ್ವಿಯಾಗಿ ಶೋರೂಮ್ಗಳನ್ನು ಆರಂಭಿಸಿದ್ದ ಹಮ್ದ್ ಫುಡ್ಸ್, ಗ್ರಾಹಕರ ಪ್ರಚಂಡ ಬೆಂಬಲವನ್ನು ಹೊಂದಿದ್ದು, ಇದೀಗ ಕಾಪು ಶಾಖೆ ಸಹ ಗ್ರಾಹಕರ ಬೆಂಬಲದಿಂದ ಕಾರ್ಯಾರಂಭ ಮಾಡಿದೆ.
150ಕ್ಕೂ ಹೆಚ್ಚು ನೈಸರ್ಗಿಕ ಆಹಾರ ಹಾಗೂ ವೈಯಕ್ತಿಕ ಉಪಯೋಗದ ಉತ್ಪನ್ನಗಳು ಇಲ್ಲಿ ಲಭ್ಯವಿದ್ದು, ಮಸಾಲಾ ಮಿಶ್ರಣ, ಫ್ರೋಝನ್ ಆಹಾರ, ಸೌಂದರ್ಯ ತೈಲಗಳು ಮುಂತಾದವುಗಳನ್ನು ಗ್ರಾಹಕರು ಖರೀದಿಸಬಹುದು. ಕೃತಕ ಬಣ್ಣ, ಪ್ರಿಸರ್ವೇಟಿವ್ಗಳಿಂದ ಮುಕ್ತವಾಗಿರುವ ಈ ಉತ್ಪನ್ನಗಳು, ಆರೋಗ್ಯದ ಮೇಲೆ ವಿಶೇಷ ಗಮನ ಹರಿಸುತ್ತವೆ.
ಸಂಸ್ಥಾಪಕಿ ಶಾಹಿದಾ ಎ. ಮಾತನಾಡುತ್ತಾ, “ಇಂದಿನ ದಿನಚರಿಯಲ್ಲಿ ಬಹುಮಂದಿಗೆ ಆರೋಗ್ಯಕರ ಆಹಾರ ತಯಾರಿಸಲು ಸಮಯವಿಲ್ಲ. ಹೀಗಾಗಿ ನಮಗೆಲ್ಲರಿಗೂ ಸಹಜವಾಗಿ ಬಳಸಬಹುದಾದ ಆರೋಗ್ಯಕರ, ತ್ವರಿತ ಉತ್ಪನ್ನಗಳನ್ನು ತಲುಪಿಸುವ ಬದ್ಧತೆಯೊಂದಿಗೆ ಈ ಶೋರೂಮ್ ಪ್ರಾರಂಭಿಸಿದ್ದೇವೆ,” ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಮರಿಯಮ್ ಶಹೀರ, ಪ್ರಮುಖ ಅತಿಥಿಗಳಾಗಿ ಪ್ರಖ್ಯಾತ ಮಹಿಳಾ ನಾಯಕರು, ಶಿಕ್ಷಕರು, ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಅತಿಥಿಗಳಲ್ಲಿ ಶ್ರೀಮತಿ ರೆಷ್ಮಾ ಥೋಟಾ, ಪ್ರಮೀಲಾ ಜತನ್ನಾ, ಅಲಿಯಾ ಸಯ್ಯದ್, ನಿಲೋಫರ್ ಪರ್ವೀನ್, ಮೊದಲಾದವರು ಉಪಸ್ಥಿತರಿದ್ದು ಸಂಸ್ಥೆಯ ಏಳಿಗೆಗಾಗಿ ಶುಭ ಹಾರೈಸಿದರು. ಸಂಸ್ಥೆಯ ನಿರ್ವಾಹಕಿ ಖೈರುನ್ನೀಸ ಅಭಿನಂದಿಸಿ ಧನ್ಯವಾದವಿತ್ತರು.












