ಸಿಪಿಎಂನಿಂದ ಮೀಡಿಯಾ ಒನ್ ಮ್ಯಾನೇಜಿಂಗ್ ಎಡಿಟರ್ ಸಿ. ದಾವೂದ್ ಕೈ ಕತ್ತರಿಸುವ ಬೆದರಿಕೆ: ದೂರು ದಾಖಲು

0
485

ಸನ್ಮಾರ್ಗ ವಾರ್ತೆ

ಕೇರಳದ ಮೀಡಿಯಾ ವನ್ ಟಿವಿ ಚಾನೆಲ್ ನ ಮ್ಯಾನೇಜಿಂಗ್ ಎಡಿಟರ್ ಸಿ. ದಾವುದ್ ಅವರ ಕೈ ಕತ್ತರಿಸುವುದಾಗಿ ಸಿಪಿಎಂ ಬೆದರಿಕೆ ಹಾಕಿದ್ದು ಇದರ ವಿರುದ್ಧ ಮೀಡಿಯಾ ವನ್ ದೂರು ದಾಖಲಿಸಿದೆ. ರಾಜ್ಯ ಪೊಲೀಸ್ ಮುಖ್ಯಸ್ಥರು, ಮಲಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ಒಂಡೂರು ಎಸ್ ಎಚ್ ಓ ಮುಂತಾದವರಿಗೆ ಮೀಡಿಯಾ ವನ್ ದೂರು ಸಲ್ಲಿಸಿದೆ.

ಸಿಪಿಎಂ ನ ವಂಡೂರ್ ಏರಿಯಾ ಕಾರ್ಯದರ್ಶಿ ಪಿ ಅಬ್ದುಲ್ ರಜಾಕ್, ಮಾಜಿ ವಂಡೂರ್ ಎಂಎಲ್ಎ ಎನ್ ಕಣ್ಣನ್, ಸಿಪಿಎಂ ಮಲಪುರ ಜಿಲ್ಲಾ ಕಮಿಟಿ ಸದಸ್ಯ ಅಡ್ವಕೇಟ್ ಟಿ ಶೀನಾ ರಾಜನ್, ಸಿಪಿಎಂ ವಂಡೂರ್ ಏರಿಯಾ ಕಮಿಟಿ ಸದಸ್ಯರಾದ ಝಕರಿಯ ಕಾಳಿಕಾವ್, ಎಂಟಿ ಅಹಮ್ಮದ್,ವಿ ಅರ್ಜುನ್, ಕೇಟಿ ಸಮೀರ್ ವಂಡೂರ್ ಮತ್ತು ಇತರ 50 ಮಂದಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೋರಿ ದೂರು ದಾಖಲಿಸಲಾಗಿದೆ.

ಜುಲೈ ಹತ್ತರಂದು ಸಿಪಿಎಂ ಪ್ರಾದೇಶಿಕ ಕಮಿಟಿಯ ನೇತೃತ್ವದಲ್ಲಿ ವಂಡೂರ್ನಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಸಿ ದಾವುದ್ ವಿರುದ್ಧ ಬೆದರಿಕೆಯ ಘೋಷಣೆಯನ್ನು ಕೂಗಲಾಗಿತ್ತು. ಕೇಟಿ ಸಮೀರ್ ಎಂಬವರು ಈ ಘೋಷಣೆಯನ್ನು ಕೂಗಿದ್ದರು. ಸಿ ದಾವುದ್ ಅವರ ಕೈ ಕತ್ತರಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಸಿ ದಾವೂದ್ ವಿರುದ್ಧ ಮತ್ತು ಮೀಡಿಯಾ ಒನ್ ಚಾನೆಲ್ ವಿರುದ್ಧ ಅಪಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.