ಸನ್ಮಾರ್ಗ ವಾರ್ತೆ
ದೆಹಲಿಯಲ್ಲಿ ನಡೆದ ಫೆಲಸ್ತೀನಿ ಸೋಲಿಡಾರಿಟಿ ಕಾನ್ಫರೆನ್ಸ್ ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಆದತುಲ್ಲ ಹುಸೇನಿ ಮಾಡಿರುವ ಭಾಷಣ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಇಂಡಿಯನ್ ಮುಸ್ಲಿಮ್ಸ್ ಫಾರ್ ಸಿವಿಲ್ ರೈಟ್ಸ್ ಹಾಗೂ ಇಂಡಿಯಾ ಫೆಲಸ್ತೀನ್ ಫ್ರೆಂಡ್ಶಿಪ್ ಫಾರಂ ಜಂಟಿಯಾಗಿ ಏರ್ಪಡಿಸಿದ್ದ ಈ ಸಭೆಯಲ್ಲಿ ಫೆಲಸ್ತೀನಿ ಭಾರತದಲ್ಲಿರುವ ಫೆಲಸ್ತೀನಿ ರಾಯಭಾರಿ ಡಾಕ್ಟರ್ ಅಬ್ದುಲ್ಲ ಅಬು ಶವೇಝ್, ಇರಾನಿನ ರಾಯಭಾರಿ ಡಾಕ್ಟರ್ ಇರಾಜ್ ಇಲಾಹಿ ಮತ್ತು ಮಣಿ ಶಂಕರ್ ಅಯ್ಯರ್, ಸಲ್ಮಾನ್ ಖುರ್ಶಿದ್, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ಮಾಜಿ ಸಂಸದ ಮೊಹಮ್ಮದ್ ಅಧೀಬ್ ಭಾಗವಹಿಸಿದ್ದರು.
ಈ ಸಭೆಯಲ್ಲಿ ನಾನು ಭಾಗವಹಿಸುತ್ತಿರುವುದು ಕೇವಲ ಬೆಂಬಲದ ದೃಷ್ಟಿಯಿಂದ ಮಾತ್ರ ಅಲ್ಲ ಇಂಥ ಸಂಕ್ರಮಣ ಕಾಲದಲ್ಲೂ ಅತ್ಯಂತ ತಲೆ ಎತ್ತಿ ನಿಂತ ಫೆಲಸ್ತೀನ್ ಇರಾನ್ ಮತ್ತು ಸೌತ್ ಆಫ್ರಿಕಗಳಿಗೆ ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿಯೂ ನಾನು ಈ ವೇದಿಕೆಯಲ್ಲಿ ನಿಂತಿದ್ದೇನೆ ಎಂದು ಸಆದತುಲ್ಲಾ ಹುಸೇನಿ ಹೇಳಿದ್ದಾರೆ.
ನಾವು ಯಾವುದೇ ರಾಷ್ಟ್ರವನ್ನು ಅಥವಾ ವ್ಯಕ್ತಿಯನ್ನು ಸುಖಾ ಸುಮ್ಮನೇ ಮೆಚ್ಚಿಕೊಳ್ಳುತ್ತಿಲ್ಲ. ನಾವು ಯಾವ ನಿಲುವನ್ನು ಹೊಂದಿದ್ದೇವೆಯೋ , ಆ ನಿಲುವಿನ ಪರವಾಗಿ ಸಂಭ್ರಮಿಸುತ್ತೇವೆ. ಘನತೆ ನ್ಯಾಯ ಸ್ವಾತಂತ್ರ್ಯ ಮತ್ತು ಪ್ರತಿರೋಧ ಈ ನಿಲುವಿನ ಪರವಾಗಿ ನಾವು ಸಂಭ್ರಮಿಸುತ್ತೇವೆ. ದುರಂತ ಏನೆಂದರೆ ಜಾಗತಿಕ ರಾಜಕೀಯಕ್ಕೆ ಗಾಝಾ ಬಲಿಯಾಗಿರುವುದು ದುಃಖಕರ ಎಂದು ಅವರು ಹೇಳಿದ್ದಾರೆ.
ಫೆಲೆಸ್ತೀನಿಯರ ಹೋರಾಟವು ಜಾಗತಿಕ ಸಾಮ್ರಾಜ್ಯ ಶಾಹಿತ್ವ ದ ವಿರುದ್ಧ ಹೋರಾಡುವ ಎಲ್ಲರಿಗೂ ನೈತಿಕ ಉದಾಹರಣೆಯಾಗಿದೆ. ಅದೊಂದು ಕೇವಲ ರಾಷ್ಟ್ರೀಯ ಚಳುವಳಿ ಅಲ್ಲ. ಮಧ್ಯೇಶಿಯ ಮತ್ತು ದಕ್ಷಿಣ ಜಗತ್ತಿನ ಮೇಲೆ ಜಾಗತಿಕ ಸಾಮ್ರಾಜ್ಯ ಶಾಹಿತ್ವವನ್ನು ಎದುರಿಸಿ ನಿಂತಿರುವ ಹೋರಾಟದ ಪ್ರತಿಬಿಂಬ ಎಂದು ಅವರು ಹೇಳಿದ್ದಾರೆ.
ಗಾಝಾದಲ್ಲಿ ನಾವೇನನ್ನು ನೋಡ್ತಾ ಇದ್ದೇವೋ ಇದು ಏಕ ಮಾತ್ರ ಘಟನೆ ಅಲ್ಲ. ಇದು ಅತ್ಯಂತ ಯೋಜನಾ ಬದ್ಧವಾಗಿ ಸಾರ್ವಭೌಮ ರಾಷ್ಟ್ರಗಳ ಗಡಿಗಳನ್ನು ಅಳಿಸುವ ಮತ್ತು ಪ್ರತಿರೋಧ ಚಳವಳಿಗಳನ್ನು ದಮನಿಸುವ ರಾಜಪ್ರಭುತ್ವ ಮಾದರಿಯ ಕ್ರೌರ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಸುಮಾರು 56 ಸಾವಿರಕ್ಕಿಂತಲೂ ಅಧಿಕ ಮಂದಿ ಗಾಝಾದಲ್ಲಿ ಹತ್ಯೆಗೀಡಾಗಿದ್ದಾರೆ. ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರನ್ನೂ ಹತ್ಯೆ ಮಾಡಲಾಗಿದೆ. ಆಸ್ಪತ್ರೆಗಳನ್ನು ದ್ವಂಸ ಮಾಡಲಾಗಿದೆ. ಇಷ್ಟೆಲ್ಲಾ ಆಗಿಯೂ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳು ಬಾಯಿಗೆ ಬೀಗ ಹಾಕಿ ಕುಳಿತಿವೆ. ಇದು ಬೌದ್ಧಿಕ ವೈಫಲ್ಯ ಅಲ್ಲ. ಇದು ರಾಜತಾಂತ್ರಿಕತೆಯ ವೈಫಲ್ಯ. ಇದು ಸಂವೇದನೆಯ ಸಾವು. ಇದು ಮಾನವೀಯತೆಯ ವೈಫಲ್ಯ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಈ ಪ್ರತಿರೋಧದಲ್ಲಿ ಫೆಲಸ್ತೀನಿಯರು ಸೋತರೆ ಸರ್ವ ಮರ್ದಿತ ರಾಷ್ಟ್ರಗಳ ಪ್ರತಿರೋಧವೂ ವಿಫಲವಾದಂತೆ.ಒಂದು ವೇಳೆ ಈ ಪ್ರತಿರೋಧದಲ್ಲಿ ಫೆಲಸ್ತೀನ್ ಜಯಶಾಲಿ ಆದರೆ ಸ್ವಾತಂತ್ರ್ಯವು ಅಸಾಧ್ಯದ ಮಾತಲ್ಲ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿ ದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಾವು ಇರಾನ್ ಗೆ ಸೆಲ್ಯೂಟ್ ಹೇಳುತ್ತೇವೆ. ದಶಕಗಳಿಂದ ವಿವಿಧ ರೀತಿಯ ಒತ್ತಡ ಬಹಿಷ್ಕಾರವನ್ನು ಎದುರಿಸಿದ ಹೊರತಾಗಿಯೂ ಅದು ಫೆಲಸ್ತೀನಿಯರ ಪರ ಬಲವಾಗಿ ನಿಂತಿದೆ ಎಂದು ಅವರು ಹೇಳಿದ್ದಾರೆ. ನಾವು ದಕ್ಷಿಣ ಆಫ್ರಿಕಾಕ್ಕೆ ಮನ ತುಂಬಿ ಚಪ್ಪಾಳೆ ತಟ್ಟುತ್ತೇವೆ. ಅದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜನಾಂಗ ಹತ್ಯೆಯನ್ನು ಅತ್ಯಂತ ಪ್ರಬಲವಾಗಿ ಮತ್ತು ನ್ಯಾಯಿಕವಾಗಿ ಖಂಡಿಸಿದೆ. ಇತರ ರಾಷ್ಟ್ರಗಳು ಈ ಕೆಲಸದಿಂದ ದೂರ ನಿಂತಾಗ ಅತ್ಯಂತ ಪ್ರಬಲವಾಗಿ ನ್ಯಾಯದ ಪರ ಅದು ನಿಂತಿದೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.












