ಫೆಲೆಸ್ತೀನಿಯರ ಭೂಮಿಯನ್ನು ಕಬಳಿಸುತ್ತಿರುವ ಇಸ್ರೇಲಿ ಅತಿಕ್ರಮಣಕಾರರು

0
574

ಸನ್ಮಾರ್ಗ ವಾರ್ತೆ

ಆಕ್ರಮಿತ ಪಶ್ಚಿಮ ದಂಡೆಯ ಮಝಾಫರ್ ಯಾಟ್ಟ ಎಂಬ ಪ್ರದೇಶದಿಂದ ಫೆಲಸ್ತೀನಿಯರನ್ನು ಸಂಪೂರ್ಣವಾಗಿ ಹೊರ ಹಾಕುವ ಯೋಜನೆಗೆ ಇಸ್ರೇಲ್ ಚಾಲನೆ ನೀಡಿದೆ. ಮುಹಮ್ಮದ್ ಯೂಸುಫ್ ಎಂಬ ಫೆಲಸ್ತೀನಿ ನಾಗರಿಕನ ಕೈಗಳನ್ನು ಬೆನ್ನಿಗೆ ಕಟ್ಟಿ ಇಸ್ರೇಲ್ ಯೋಧರು ಕ್ಯಾಂಪಿಗೆ ಸಾಗಿಸಿರುವುದು ವರದಿಯಾಗಿದೆ ಈ ಯೂಸುಫ್ ರ ತಾಯಿ ಪತ್ನಿ ಮತ್ತು ಇಬ್ಬರು ಸಹೋದರರನ್ನು ಇಸ್ರೇಲ್ ಯೋಧರು ಈಗಾಗಲೇ ಬಂಧಿಸಿದ್ದಾರೆ. ತಮ್ಮ ಭೂಮಿಯನ್ನು ಅತಿಕ್ರಮಿಸಲು ಬಂದ ಆಯುಧಧಾರಿ ಅತಿಕ್ರಮಣ ಕೋರರನ್ನು ಎದುರಿಸಿದ್ದಕ್ಕಾಗಿ ಈ ಬಂಧನ ನಡೆದಿದೆ.

ಈ ಪ್ರದೇಶದಲ್ಲಿ ಅನಧಿಕೃತ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಿ ಫೆಲೆಸ್ತೀನಿಯರು ತಮ್ಮ ಕೃಷಿ ಭೂಮಿಯನ್ನು ಪ್ರವೇಶಿಸದಂತೆ ಮತ್ತು ತಮ್ಮ ಸಾಕುಪ್ರಾಣಿಗಳನ್ನು ಮೇಯಿಸದಂತೆ ಇಸ್ರೇಲ್ ಸೇನೆ ತಡೆಯುತ್ತಿದೆ. ತಮ್ಮ ಭೂಮಿಯನ್ನು ಬಲವಂತದಿಂದ ಕಿತ್ತುಕೊಳ್ಳುವುದನ್ನು ತಡೆಯಲು ಶ್ರಮಿಸಿದ್ದಕ್ಕಾಗಿ ಯೂಸುಫ್ ಮತ್ತು ಅವರ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನೂ ಎಷ್ಟು ಸಮಯ ಇವರ ಅತಿಕ್ರಮಣವನ್ನು ತಡೆದು ನಿಲ್ಲಲು ನಮಗೆ ಸಾಧ್ಯ ಎಂದು ಗೊತ್ತಿಲ್ಲ ಎಂದು ಯೂಸುಫ್ ಹೇಳಿದ್ದಾರೆ. ಈ ಬಗ್ಗೆ ಅಲ್ ಜಝೀರಾ ವಿಸ್ತೃತ ವರದಿ ಮಾಡಿದೆ.