ಬೆಳಗಾವಿ ಝೋನ್‌: ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ತರಬೇತಿ ಶಿಬಿರ

0
345

ಸನ್ಮಾರ್ಗ ವಾರ್ತೆ

ಬೆಳಗಾವಿ: ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ಬೆಳಗಾವಿ ಝೋನ್‌ನ ಮಹಿಳೆಯರಿಗಾಗಿ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಹುಬ್ಬಳ್ಳಿಯ ದಾವತ್ ಘರ್ ಸಭಾಂಗಣದಲ್ಲಿ ಜರುಗಿತು.

ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಯ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು.

ತುರ್ತು ಸಂದರ್ಭಗಳಲ್ಲಿ ರಕ್ಷಣಾ ಹಾಗೂ ಪಾರುಗಾಣಿಕೆಯ ವಿಧಾನ, ಅಪಘಾತ, ಬೆಂಕಿ, ನೀರು ಮುಂತಾದ ಅವಘಡಗಳ ಸಂದರ್ಭಗಳಲ್ಲಿ ಪಾಲಿಸಬೇಕಾದ ನಿಯಮಗಳು, ಮುಂಜಾಗ್ರತಾ ಕ್ರಮಗಳು ಹಾಗೂ ಪ್ರಥಮ ಚಿಕಿತ್ಸಾ ವಿಧಾನಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ಬೆಂಕಿ ನಂದಿಸುವ ವಿಧಾನವನ್ನು ಸಹ ಪ್ರಾಯೋಗಿಕವಾಗಿ ತೋರಿಸಲಾಯಿತು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಗೆ ಮೋ. ಫಿರ್ದೌಸ್ ಸಾಹಿಬ ಹಾಗೂ ಧಾರವಾಡಕ್ಕೆ ನುಸ್ರತ್ ಸೋನೇಕಾನ್ ಇವರನ್ನು ಮಹಿಳಾ ತರಬೇತುದಾರರ ಗುಂಪಿನ ನಾಯಕರಾಗಿ ನೇಮಿಸಲಾಯಿತು.

HRSನ ಕಮಾಂಡರ್ ಅಮೀರ್ ಸಿದ್ದೀಕಿ, ಅಸಿಸ್ಟೆಂಟ್ ಕಮಾಂಡರ್ ಅಬ್ರಾರ್ ಅಹ್ಮದ್ ಮತ್ತು ಟ್ರೈನರ್ ಸಲೀಮ್ ತರಬೇತಿ ನೀಡಿದರು.

ಜೆ.ಐ.ಎಚ್. ಸ್ಥಳೀಯ ಅಧ್ಯಕ್ಷ ಅಹ್ಮದ್ ಅಲಿ ಗಹಲೋಟ್ ಸಮಾರೋಪ ಭಾಷಣ ಮಾಡಿದರು. ಝೋನಲ್ ಲೀಡರ್ ಅಬ್ದುಲ್ ರಶೀದ್ ನದಾಫ್ ಹಾಗೂ ಗ್ರೂಪ್ ಲೀಡರ್ ಅಬ್ದುಲ್ ಖಾದರ್ ಪೀರ್ಜಾದೆ ಉಪಸ್ಥಿತರಿದ್ದರು.