ಸನ್ಮಾರ್ಗ ವಾರ್ತೆ
ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಕಿಂಗ್ ಅಬ್ದುಲ್ ಅಝೀ ಝ್ ಅಂತಾರಾಷ್ಟ್ರೀಯ ಕುರ್ ಅನ್ ಪಠಣ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯು ಕಿಂಗ್ ಅಬ್ದುಲ್ ಅಝೀ ಝ್ ಅವರ ಕಾಲದಿಂದ ಆರಂಭವಾಗಿದೆ. ಇದು 45ನೇ ಸ್ಪರ್ಧೆಯಾಗಿದೆ. ಜಗತ್ತಿನ ವಿವಿಧ ದೇಶಗಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸುತ್ತಾರೆ.
ಈ ಸ್ಪರ್ಧೆಯಲ್ಲಿ 128 ರಾಷ್ಟ್ರಗಳಿಂದ 179 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈ ಬಾರಿ ಅತ್ಯಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈವರೆಗಿನ ಸ್ಪರ್ಧೆಗಳಲ್ಲಿಯೇ ಅತಿ ಹೆಚ್ಚು ಸ್ಪರ್ದಾಳುಗಳು ಈ ಬಾರಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಮೊದಲು ಅರ್ಹತಾ ಸುತ್ತು ನಡೆಯುತ್ತದೆ. ಬೆಳಗ್ಗೆ ಮತ್ತು ಸಂಜೆ ಎರಡು ವಿಭಾಗಗಳಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೊದಲ ದಿನ 14 ಸ್ಪರ್ಧಾಳುಗಳ ಪಾರಾಯಣ ಸ್ಪರ್ಧೆ ಏರ್ಪಡುತ್ತದೆ. ಅಂತಾರಾಷ್ಟ್ರೀಯ ತೀರ್ಪುಗಾರರ ಒಂದು ತಂಡ ಈ ಸ್ಪರ್ಧಾಳುಗಳನ್ನು ಆಯ್ಕೆ ಮಾಡುತ್ತದೆ.
ಐದು ಭಿನ್ನ ವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಗೆದ್ದವರಿಗೆ40 ಲಕ್ಷಕ್ಕಿಂತಲೂ ಅಧಿಕ ರಿಯಾಲ್ ಮೊತ್ತದ ಬಹುಮಾನವನ್ನು ನೀಡಲಾಗುವುದು. ಒಂದನೇ ವಿಭಾಗದಲ್ಲಿ ಮೊದಲ ಸ್ಥಾನ ಪಡೆಯುವ ಸ್ಪರ್ದಿಗೆ 5 ಲಕ್ಷ ರಿಯಾಲ್ ಸಿಗಲಿದೆ.












