ಸೌದಿ ಉದ್ಯೋಗ ನಿಯಮ ಬಿಗಿ: ವೀಸಾ ಸ್ಟಾಪಿಂಗಿಗಾಗಿ ಪರೀಕ್ಷೆ ಎದುರಿಸಲೇಬೇಕು

0
627

ಸನ್ಮಾರ್ಗ ವಾರ್ತೆ

ಸೌದಿಯಲ್ಲಿ ಉದ್ಯೋಗ ವಿಸಾ ಸ್ಟ್ಯಾಂಪಿಂಗ್ ಗಾಗಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಲೇಬರ್ ಲೋಡಿಂಗ್ ಅನ್ಲೋಡಿಂಗ್ ಮುಂತಾದ ವಿಸಾಗಳಿಗೂ ಈ ಹೊಸ ನಿಯಮ ಅನ್ವಯವಾಗಲಿದೆ. ಪರೀಕ್ಷೆಗಳಿಗಾಗಿ ಕರ್ನಾಟಕದವರು ಬಹುತೇಕ ತಮಿಳುನಾಡಿಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ವರದಿಯಾಗಿದೆ.

ಎಣಿಕೆಯ ಸಂಖ್ಯೆಯ ಪ್ರೊಫೆಶನ್ ಗೆ ಮಾತ್ರ ಈಗ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಉದ್ಯೋಗ ಕ್ಷೇತ್ರವನ್ನು ನವೀಕರಿಸುವುದರ ಭಾಗವಾಗಿ ಸೌದಿ ಸಚಿವಾಲಯ ಈ ನಿಯಮ ಜಾರಿಗೆ ತಂದಿದೆ ಈ ಮೊದಲು ವಿವಿಧ ಪ್ರೊಫೆಶನ್ ಗಳಿಗೆ ಕೇರಳ ಸಹಿತ ವಿವಿಧ ರಾಜ್ಯಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಟ್ರೈನಿಂಗ್ ಕೇಂದ್ರಗಳನ್ನು ತೆರೆಯಲಾಗಿತ್ತು. ಎಲೆಕ್ಟ್ರಿಷಿಯನ್ ಪ್ಲಂಬರ್ ವೆಲ್ದರ್ ಮುಂತಾದ ಉದ್ಯೋಗಕ್ಕಿರುವ ಪರೀಕ್ಷಾ ಕೇಂದ್ರಗಳು ಈ ಮೊದಲು ಕೇರಳದಲ್ಲೂ ಇತ್ತು.

ಸದ್ಯ ಅನೇಕ ಪ್ರೊಫೆಷನ್ ಗೆ ಮುಂಬೈ ಡೆಲ್ಲಿ ಕೊಲ್ಕತ್ತಾ ಮುಂತಾದ ನಗರಗಳಲ್ಲಿ ಸೆಂಟರ್ ಗಳಿವೆ. ಕನ್ಸ್ಟ್ರಕ್ಷನ್, ವರ್ಕ್ಶಾಪ್, ಫುಡ್ ಡೆಲಿವರಿ ಮುಂತಾದ 22 ಪ್ರೊಫೆಷನ್ ಗೆ ಕೇರಳದಲ್ಲಿ ಪರೀಕ್ಷಾ ಕೇಂದ್ರಗಳಿವೆ. ಈವರೆಗೆ ಏಜೆನ್ಸಿಗಳ ಮುಖಾಂತರ ಪರೀಕ್ಷಾ ಪ್ರಕ್ರಿಯೆಗಳನ್ನು ಪೂರ್ತಿ ಮಾಡಲಾಗುತ್ತಿತ್ತು. ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ವಿ ಎಫ್ ಎಸ್ ಮೂಲಕ ಬಯೋಮೆಟ್ರಿಕ್ ಪೂರ್ತಿಗೊಳಿಸಿ ಸ್ಟಾಂಪ್ ಮಾಡಲಾಗುತ್ತದೆ.ತೇರ್ಗಡೆ ಯಾದವರಿಗೆ ಪ್ರತ್ಯೇಕ ಸರ್ಟಿಫಿಕೇಟ್ ಲಭ್ಯವಿದೆ.