ಸನ್ಮಾರ್ಗ ವಾರ್ತೆ
ತಾವು ದಯವಿಟ್ಟು ಗಾಝಾಕ್ಕೆ ಹೋಗಿ. ಅಲ್ಲಿ ನಿಮ್ಮ ಬೆಳಕನ್ನು ಮಕ್ಕಳಿಗೆ ಹರಡಿ ಎಂದು ಪೋಪ್ ಲಿಯೋ ಅವರೊಂದಿಗೆ ಪ್ರಸಿದ್ಧ ಪಾಪ್ ಗಾಯಕಿ ಮಡೋನ್ನ ಆಗ್ರಹಿಸಿದ್ದಾರೆ. ತನ್ನ ಮಗ ರೋಕೋನ 25ನೇ ಜನ್ಮದಿನಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಮಡೋನ್ನ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಓರ್ವ ತಾಯಿ ಎಂಬ ನೆಲೆಯಲ್ಲಿ ಅಲ್ಲಿನ ಮಕ್ಕಳ ದಯನೀಯ ಸ್ಥಿತಿಯನ್ನು ನನಗೆ ನೋಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಜಗತ್ತಿನ ಎಲ್ಲರಿಗೂ ಪ್ರಿಯ ವ್ಯಕ್ತಿಗಳಾಗಿದ್ದಾರೆ. ಅಲ್ಲಿಗೆ ಪ್ರವೇಶ ನಿಷೇಧವಿಲ್ಲದ ವ್ಯಕ್ತಿ ನೀವು ಒಬ್ಬರೇ ಆಗಿದ್ದೀರಿ. ನಮಗೆ ಮಾನವೀಯ ಬಾಗಿಲನ್ನು ತೆರೆದಿಡಬೇಕಿದೆ. ಗಾಝಾದ ಮಕ್ಕಳನ್ನು ರಕ್ಷಿಸಬೇಕಿದೆ.ಇನ್ನು ಕಾಲ ವಿಳಂಬವಾಗಿಲ್ಲ. ಆದ್ದರಿಂದ ದಯವಿಟ್ಟು ನೀವು ಗಾಝಾ ಕ್ಕೆ ಹೋಗಿ ಎಂದು ಪೋಪ್ ಲಿಯೋ ಅವರಿಗೆ ಮಡೋನ ವಿನಂತಿಸಿದ್ದಾರೆ.
ಈ ಯುದ್ಧದಲ್ಲಿ ನಾನು ಯಾರ ಪರವೂ ನಿಲ್ಲುವುದಿಲ್ಲ. ನಾನು ಯಾರ ವಿರುದ್ಧವೂ ಬೆರಳು ತೋರಿಸುವುದಿಲ್ಲ. ಯಾರನ್ನೂ ಕಟ-ಕಟೆಯಲ್ಲಿ ನಿಲ್ಲಿಸುವುದಿಲ್ಲ ಎಲ್ಲಾ ತಾಯಂದಿರು ದುಃಖಿಸುತ್ತಿದ್ದಾರೆ. ಬಂಧನದಲ್ಲಿರುವವರ ತಾಯಂದಿರೂ ದುಃಖಿಸುತ್ತಿದ್ದಾರೆ. ಅವರೆಲ್ಲರೂ ಆದಷ್ಟು ಬೇಗ ಸ್ವತಂತ್ರವಾಗಬೇಕು. ಹಸಿವಿನಿಂದ ಬಳಲುತ್ತಿರುವ ಮಕ್ಕಳು ಸಾಯದಂತೆ ಮಾಡುವುದಕ್ಕೆ ನನ್ನಿಂದ ಏನೆಲ್ಲ ಸಾಧ್ಯವೋ ಅವೆಲ್ಲವನ್ನೂ ಮಾಡುತ್ತಿದ್ದೇನೆ ಎಂದು ಪೋಪ್ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಮಡೋನ ಹೇಳಿದ್ದಾರೆ.
ಗಾಝಾದಲ್ಲಿ ಕದನ ವಿರಾಮ ಏರ್ಪಡಿಸಬೇಕು ಎಂದು ಇತ್ತೀಚಿಗೆ ಪೋಪ್ ಲಿಯೋ ಆಗ್ರಹಿಸಿದ್ದರು ಮಾನವ ಹಕ್ಕುಗಳನ್ನು ಗೌರವಿಸಬೇಕು, ಸಾಮಾನ್ಯ ನಾಗರಿಕರ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದ್ದರು.












