ಶಿವಮೊಗ್ಗ: ಹೆಚ್.ಆರ್.ಎಸ್. ವತಿಯಿಂದ ರಕ್ತದಾನ ಶಿಬಿರ

0
269

ಸನ್ಮಾರ್ಗ ವಾರ್ತೆ

ಶಿವಮೊಗ್ಗ: “ರಕ್ತದಾನ ಮಾಡಿದವನೇ ನಿಜವಾದ ಹೀರೋ, ಯಾಕೆಂದರೆ ಆತನು ಇನ್ನೊಬ್ಬರ ಪ್ರಾಣವನ್ನು ಉಳಿಸುತ್ತಾನೆ,” ಎಂದು ಮೆಡಿಕಲ್ ಸುಪರಿಂಟೆಂಡೆಂಟ್ ಡಾ| ಎಮ್.ಎಸ್. ವಿನಯ ಭಟ್ ಅವರು ಹೇಳಿದರು.

ಅವರು ಶಿವಮೊಗ್ಗದ ಕೆ.ಆರ್.ಪುರದ ಶಾಂತಿ ಸದನದಲ್ಲಿ, ಸುಬ್ಬಯ್ಯ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹೆಚ್.ಆರ್.ಎಸ್. ವತಿಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

“ ರಕ್ತದಾನ ಮಾಡಿದವರಿಗೆ ಸುಬ್ಬಯ್ಯ ಆಸ್ಪತ್ರೆಯ ವತಿಯಿಂದ health ಕಾರ್ಡ್‌ಗಳನ್ನು ನೀಡಲಾಗುತ್ತದೆ,” ಎಂದು ಅವರು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಯಾಹ್ಯ ಅಲಿ ಬೇಗ್ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಜೆ.ಐ.ಹೆಚ್ ಮುಖಂಡರಾದ ಹಾಮಿದ್ ಉಮರಿ ಮತ್ತು ಮುಸ್ತಫಾ ಅಲಿ ಬೇಗ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೆಚ್.ಆರ್.ಎಸ್. ಗ್ರೂಪ್ ಲೀಡರ್ ಫಯಾಝ್ ಅಹ್ಮದ್ ಸಮಾರೋಪ ಭಾಷಣ ನೀಡಿದರು.

ಶಿಬಿರದಲ್ಲಿ ಹಲವಾರು ಮಂದಿ ವಿಭಿನ್ನ ಧರ್ಮದವರು ಭಾಗವಹಿಸಿ ರಕ್ತದಾನ ಮಾಡಿದರು. ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಯಿತು. ಸ್ಥಳೀಯ ಸಂಸ್ಥೆಗಳಾದ ಎಸ್.ಐ.ಓ., ಜಿ.ಐ.ಓ., ಸೋಲಿಡಾರಿಟಿ ಮುಂತಾದ ಸಂಘಟನೆಗಳ ಸ್ವಯಂಸೇವಕರು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.