ಕೇರಳದ ರಹಮತ್ ಗೆ ಎರಡೂವರೆ ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಬೇಕೆಂದು ತೀರ್ಪಿತ್ತ ದುಬೈ ನ್ಯಾಯಾಲಯ

0
753

ಸನ್ಮಾರ್ಗ ವಾರ್ತೆ

ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಕೇರಳ ಕಣ್ಣೂರಿನ ರಹಮತ್ ಬಿ ಎಂಬವರಿಗೆ ದುಬೈಯಲ್ಲಿ ಭಾರಿ ಮೊತ್ತದ ನಷ್ಟ ಪರಿಹಾರ ಲಭಿಸಿದೆ. ಅಲ್ ವಹಿದ್ ಬಾಂಗ್ಲಾದೇಶ್ ಕೌನ್ಸಿಲ್ ಹತ್ತಿರ 2023 ಏಪ್ರಿಲ್ 24ರಂದು ನಡೆದ ವಾಹನ ಅಪಘಾತದಲ್ಲಿ ರಹಮತ್ ಬಿಗೆ ಗಂಭೀರ ಗಾಯಗಳಾಗಿತ್ತು. ಜೀಬ್ರಾ ಲೈನ್ ಬಿಟ್ಟು ಬೇರೆ ಕಡೆ ರಸ್ತೆ ದಾಟುತ್ತಿದ್ದಾಗ ಯುಎಇ ನಾಗರಿಕನ ನಿಸ್ಸಾನ್ ಪೆಟ್ರೋನ್ ಕಾರು ಡಿಕ್ಕಿ ಹೊಡೆದಿತ್ತು. ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎಂದು ನ್ಯಾಯಾಲಯ ಕಂಡುಕೊಂಡಿದೆ ಮತ್ತು ರಹಮತ್ ಬಿಗೆ ಎರಡು ಕೋಟಿ 37 ಲಕ್ಷ ರೂಪಾಯಿ ಪರಿಹಾರಕ್ಕೆ ಆದೇಶಿಸಿದೆ.

ಇದೇ ವೇಳೆ ದಾಟಬಾರದ ಕಡೆ ರಸ್ತೆಯನ್ನು ದಾಟಿ ರುವುದಕ್ಕೆ ರೆಹ್ಮತ್ ಅವರನ್ನು ಕೂಡ ನ್ಯಾಯಾಲಯ ತಪ್ಪಿತಸ್ತೆ ಎಂದು ಹೇಳಿದೆ.

ಅಪಘಾತದಲ್ಲಿ ರಹಮತ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ಸೊಂಟಕ್ಕೂ ಬಲವಾದ ಪೆಟ್ಟು ಬಿದ್ದಿತ್ತು. ಮೆದುಳಿನ ಮೇಲೆ ಆಘಾತವಾದ್ದರಿಂದ ದೇಹ ಬಲವನ್ನು ಕಳೆದುಕೊಂಡಿತು. ಬಲ ಕೈ ಮತ್ತು ಬಲಗಾಲು ಪಕ್ಷಪಾತಕ್ಕೆ ಒಳಗಾಯಿತು. ಅವರು ದುಬೈ ರಾಶಿದೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಈ ಎಲ್ಲಾ ಹಿನ್ನೆಲೆಯಲ್ಲಿ ನ್ಯಾಯಾಲಯವು ದುಬೈ ನಾಗರಿಕನಿಗೆ ರೂ.3,000 ದಿರ್ಹಂ ದಂಡ ವಿಧಿಸಿತು. ಮಾತ್ರ ಅಲ್ಲ ರಹಮತ್ ಬಿ ಅವರಿಗೆ 1000 ದಿರ್ಹಮ್ ದಂಡ ವಿಧಿಸಿದೆ.

ಅಪಘಾತದ ಬಳಿಕ ದುಬೈಯ ಪ್ರಮುಖ ಲೀಗಲ್ ಸರ್ವಿಸ್ ಸಂಸ್ಥೆಯ ಸಹಾಯದೊಂದಿಗೆ ರಹಮತ್ ಬಿ ಅವರು ನಷ್ಟ ಪರಿಹಾರಕ್ಕಾಗಿ ಕೋರ್ಟಿಗೆ ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಗಣಿಸಿದ ದುಬೈ ನ್ಯಾಯಾಲಯವು ಇನ್ಸೂರೆನ್ಸ್ ಕಂಪನಿಯು 10 ಲಕ್ಷ ದಿರ್ಹಂ ನಷ್ಟ ಪರಿಹಾರ ನೀಡಬೇಕು ಎಂದು ತೀರ್ಪಿತ್ತಿತ್ತು. ಈ ತೀರ್ಪಿನ ವಿರುದ್ಧ ಇನ್ಶೂರೆನ್ಸ್ ಕಂಪನಿಯು ಅಪೀಲ್ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ.