ಸನ್ಮಾರ್ಗ ವಾರ್ತೆ
ಬಿಹಾರದಲ್ಲಿ ಮತ್ತೊಮ್ಮೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿಯರನ್ನು ಹುಡುಕಿ ಹುಡುಕಿ ಆ ದೇಶಕ್ಕೆ ಮರಳಿಸಲಾಗುವುದು ಎಂದು ಕೇಂದ್ರ ಸಚಿವ ಗಿರಿರಾಜ ಸಿಂಗ್ ಹೇಳಿದ್ದಾರೆ. 1971 ರ ಬಳಿಕ ಯಾರು ಬಿಹಾರ ಪ್ರವೇಶಿಸಿದರೋ ಅವರನ್ನು ಬಾಂಗ್ಲಾದೇಶಕ್ಕೆ ಅಟ್ಟಲಾಗುವುದು ಎಂದವರು ಹೇಳಿದ್ದಾರೆ. ಯೋಜನಾ ಆಯೋಗದ ಮಾಜಿ ಸದಸ್ಯೆ ಸಈದ ಹಮೀದ್ ಅವರ ಹೇಳಿಕೆಗೆ ಪ್ರತಿಯಾಗಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಬಾಂಗ್ಲಾದೇಶಿಯವರಾದರೆ ಏನು ತೊಂದರೆ? ಅವರು ಮನುಷ್ಯರು. ಈ ಭೂಮಿ ವಿಶಾಲವಾಗಿದೆ. ಅವರು ಇಲ್ಲಿ ಬದುಕಬಹುದು. ಅವರ ಬದುಕು ವ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಯಾರಿಗೂ ಹಕ್ಕಿಲ್ಲ ಎಂದು ಸಈದ ಹಮೀದ್ ಹೇಳಿದ್ದರು.
ನಿತೀಶ್ ಕುಮಾರ್ ಅವರು ಕಳೆದ 20 ವರ್ಷಗಳಿಂದ ಬಿಹಾರವನ್ನು ಆಳುತ್ತಿದ್ದಾರೆ. ಅವರ ಸಂಪುಟದ ಯಾರೊಬ್ಬರ ಮೇಲೆಯೂ ಭ್ರಷ್ಟಾಚಾರದ ಆರೋಪ ಇಲ್ಲ. ಆದರೆ ಲಾಲು ಪ್ರಸಾದ್ ಜೈಲು ಸೇರಿದ್ದಾರೆ. ವಿರೋಧ ಪಕ್ಷಗಳಿಗೆ ನಿತೀಶ್ ಕುಮಾರ್ ಸರಕಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಯಾವುದೇ ವಿಷಯವೇ ಇಲ್ಲ ಎಂದವರು ಹೇಳಿದ್ದಾರೆ.
ನರೇಂದ್ರ ಮೋದಿ ಅವರು 20 ಗಂಟೆಗಳ ಕಾಲ ಪ್ರತಿದಿನ ಕೆಲಸ ಮಾಡುತ್ತಾರೆ ರಾಹುಲ್ ಗಾಂಧಿ ನಾಟಕ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.












