ಉಮ್ರಾ ವೀಸಾ: ಇನ್ನು ಮುಂದೆ 48 ಗಂಟೆಗಳ ಕಾಲ ಕಾಯಲೇಬೇಕು

0
484

✍️ ಮಿಷಲ್

ಉಮ್ರಾ ಮಾಡಲು ಬಯಸಿದ್ದೀರಾ? ಹಾಗಿದ್ರೆ ಬದಲಾದ ನಿಯಮದ ಬಗ್ಗೆ ನಿಮಗೆ ಗೊತ್ತಿರಲೇಬೇಕು.

ಈ ಮೊದಲು ನೀವು ಉಮ್ರಾ ವೀಸಕ್ಕೆ ಅರ್ಜಿ ಹಾಕಿದ ತಕ್ಷಣ ಅದು ಲಭ್ಯ ಆಗ್ತಾ ಇತ್ತು. ಆನ್ಲೈನ್ ನಲ್ಲಿ ವೀಸಾ ಇಶ್ಯೂ ಆಗ್ತಾ ಇತ್ತು. ಆದರೆ ಇನ್ನು ಮುಂದೆ ಇಷ್ಟು ಸುಲಭವಾಗಿ ನಿಮಗೆ ಉಮ್ರಾ ವೀಸಾ ಸಿಗೋದಿಲ್ಲ. ಬದಲಾದ ಹೊಸ ನಿಯಮವನ್ನು ಸೌದಿ ಅರೇಬಿಯಾ ಇದೀಗ ಘೋಷಿಸಿದೆ.

ವಿದೇಶದಿಂದ ಉಮ್ರಾ ಮಾಡುವುದಕ್ಕಾಗಿ ಬರುವ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಿದ ತಕ್ಷಣ ವಿಸಾ ಇನ್ನು ಮುಂದೆ ಸಿಗುವುದಿಲ್ಲ ಎಂದು ಸೌದಿ ಅರೇಬಿಯಾ ತಿಳಿಸಿದೆ. ವಿಸಾಕ್ಕೆ ಅರ್ಜಿ ಸಲ್ಲಿಸಿದರೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 48 ಗಂಟೆಗಳು ಬೇಕಾಗುತ್ತದೆ ಎಂದು ಸೌದಿ ಅರೇಬಿಯಾ ಹಜ್ಜ್ ಮತ್ತು ಉಮ್ರ ಸಚಿವಾಲಯದ ಅಡಿಯಲ್ಲಿರುವ ನುಸುಕ್ ಫ್ಲಾಟ್ ಫಾರ್ಮ್ ತಿಳಿಸಿದೆ. ವೀಸಾ ಅರ್ಜಿಯನ್ನು ಪರಿಶೀಲಿಸಿ ಅನುಮತಿ ನೀಡುವುದಕ್ಕೆ ಕನಿಷ್ಠ 48 ಗಂಟೆಗಳು ಬೇಕಾಗುತ್ತದೆ ಎಂದು ಉಮ್ರ ಸರ್ವಿಸ್ ಕಂಪನಿಗಳಿಗೆ ನೀಡಿದ ಸರ್ಕ್ಯುಲರ್ ನಲ್ಲಿ ನುಸುಕ್ ಫ್ಲಾಟ್ ಫಾರಂ ಸ್ಪಷ್ಟಪಡಿಸಿದೆ.

ಆಗಸ್ಟ್ 31ರಂದು ಹೊಸ ನಿಯಮ ಜಾರಿಗೆ ಬಂದಿದೆ.

ಉಮ್ರ ಮಾಡಬಯಸುವವರು ಸೌದಿ ಅರೇಬಿಯಾಕ್ಕೆ ಯಾತ್ರೆ ಮಾಡುವುದಕ್ಕಿಂತ ಮೊದಲು ವೀಸಾ ಪ್ರಕ್ರಿಯೆಗಳು ಕಂಪ್ಲೀಟ್ ಆಗಿದೆ ಎಂಬುದನ್ನು ಉಮ್ರ ಕಂಪನಿಗಳು ಸ್ಪಷ್ಟಪಡಿಸಿಕೊಳ್ಳಬೇಕು. ಯಾತ್ರಾರ್ತಿಗಳನ್ನು ಗುಂಪುಗಳಾಗಿ ಕಳುಹಿಸುವಾಗ ಮತ್ತು ವಿಮಾನ ಟಿಕೆಟ್ ಗಳನ್ನು ಬುಕಿಂಗ್ ಮಾಡುವುದಕ್ಕಿಂತ ಮೊದಲು ಈ ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ನುಸುಕ್ ಉಮ್ರಾ ಪ್ಲಾಟ್ಫಾರಂ ತಿಳಿಸಿದೆ.

ಈ ಮೊದಲು ಹೀಗಿರಲಿಲ್ಲ. ಅರ್ಜಿ ಸಲ್ಲಿಸಿದ ತಕ್ಷಣ ಉಮ್ರಾ ವೀಸಾ ಸಿಗ್ತಾ ಇತ್ತು. ಆದರೆ ಇನ್ನು ಮುಂದೆ ಅರ್ಜಿ ಸಲ್ಲಿಸಿ 48 ಗಂಟೆಗಳವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸಿ ತಕ್ಷಣ ಸೌದಿ ಅರೇಬಿಯಾಕ್ಕೆ ಹೋಗಬಹುದು ಎಂದು ಅಂದುಕೊಳ್ಳುವವರಿಗೆ ಇದರಿಂದ ನಿರಾಶೆಯಾಗಲಿದೆ.