ರೋಗಿ ಸಂದರ್ಶನ: ಇರಬೇಕಾದ ಎಚ್ಚರಿಕೆಗಳು

0
2

✍️ ಕೆ.ಕೆ. ಶರಫುದ್ದೀನ್ 

ಇತ್ತೀಚೆಗೆ ಸಂಭವಿಸಿದ ಒಂದು ವಾಹನಾಪಘಾತದ ಕಾರಣದಿಂದ 2 ತಿಂಗಳು ಮಂಚದಲ್ಲೂ ವೀಲ್‌ಚೇರ್‌ನಲ್ಲೇ ಕಳೆಯಬೇಕಾಗಿ ಬಂತು. ಬಂಧುಗಳು, ಅಕ್ಕಪಕ್ಕದವರು, ಊರಿನವರು, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಪ್ರಮುಖ ವ್ಯಕ್ತಿಗಳು, ಸಹಕಾರ್ಮಿಕರು ಹೀಗೆ ಹಲವಾರು ಜನರು ಸಂದರ್ಶಿಸಲು ಬಂದರು. ಬರಲು ಸಾಧ್ಯವಾಗದೆ ಫೋನ್ ಮಾಡಿದವರು, ವಾಟ್ಸಪ್ ಸಂದೇಶಗಳನ್ನು ಕಳುಹಿಸಿದವರೂ ಅನೇಕರು.

ಈ ಸಂದರ್ಶನಗಳ ಮತ್ತು ಕ್ಷೇಮಾನ್ವೇಷಣೆಯ ಅನುಭವಗಳನ್ನು ಮುಂದಿಟ್ಟುಕೊಂಡು ರೋಗಿ ಸಂದರ್ಶನದ ಸಂದರ್ಭದಲ್ಲಿ ಪಾಲಿಸಬೇಕಾದ ಮರ್ಯಾದೆಗಳನ್ನು ಕುರಿತು ಪುನರ್ಚಿಂತನೆ ನಡೆಸಲು ಸಾಧ್ಯವಾಯಿತು. ರೋಗಿಯನ್ನು ವಿಚಾರಿಸುವುದು (ಇಯಾದತುಲ್ ಮರ್ಳಾ – ಅಂದರೆ ರೋಗಿಯನ್ನು ವಿಚಾರಿಸುವುದು) ಇಸ್ಲಾಮಿನಲ್ಲಿ ಅತ್ಯಂತ ಪುಣ್ಯಕರವಾದ ಕಾರ್ಯವಾಗಿದೆ. ರೋಗಿಯ ಶಾರೀರಿಕ ಕಷ್ಟಗಳಲ್ಲಿ ಆಶ್ವಾಸನೆ ನೀಡುವುದು, ರೋಗದಿಂದ ಗುಣಮುಖರಾಗುವುದನ್ನು ಕುರಿತು ಪ್ರತೀಕ್ಷೆ ನೀಡುವುದು ಎಂಬುದು ಇದರ ಪ್ರಮುಖ ಲಕ್ಷ್ಯ. ಕುಟುಂಬ, ಸ್ನೇಹಿತರ ಸಂಬಂಧಗಳ ಸ್ನೇಹ-ಸಂಬಂಧಗಳನ್ನು ವರ್ಧಿಸಲು ಅದು ಕಾರಣವಾಗುವುದು.

ಇಸ್ಲಾಮಿನಲ್ಲಿ ರೋಗಿ ಸಂದರ್ಶನ ಪ್ರವಾದಿ ಚರ್ಯೆಯು ರೋಗಿಯ ಭೇಟಿಯಾಗಿದೆ. ಪ್ರವಾದಿ ಮುಹಮ್ಮದ್‌(ಸ)ರವರು ರೋಗಿಗಳನ್ನು ಸಂದರ್ಶಿಸುವುದೂ ಅವರ ಕ್ಷೇಮ ಸಮಾಚಾರವನ್ನು ವಿಚಾರಿಸುವುದೂ ಮಾಡುತ್ತಿದ್ದರು. ಪ್ರವಾದಿವರ್ಯರು(ಸ) ಹೇಳಿದರು: “ಒಬ್ಬ ವ್ಯಕ್ತಿಯು ರೋಗಿಯನ್ನು ಸಂದರ್ಶಿಸಲು ಹೋದರೆ, ಅವನು ವಾಪಸ್ ಬರುವವರೆಗೂ ಸ್ವರ್ಗದ ಹಣ್ಣಿನ ತೋಟದಲ್ಲಿರುವವನಂತೆ ಇರುತ್ತಾನೆ” (ಮುಸ್ಲಿಂ). ‘ಇಯಾದ್’ (عيادة) ಎಂಬ ಪದಕ್ಕೆ ಕ್ಲಿನಿಕ್ ಎಂಬ ಅರ್ಥವಿದೆ. ಕೇವಲ ಭೇಟಿ ನೀಡುವುದರ ಹೊರತಾಗಿ ರೋಗಿಗೆ ಆಶ್ವಾಸನೆ ನೀಡುವುದು ಸಂದರ್ಶನದ ಪ್ರಯೋಜನವಾಗಿದೆ. ನಮ್ಮ ಸಾನ್ನಿಧ್ಯ ತಿಳಿಸುವುದಲ್ಲ, ರೋಗಿಗೆ ನಮ್ಮ ಸಾನ್ನಿಧ್ಯ ಆಶ್ವಾಸನೆಯಾಗುವುದು ಅತ್ಯಂತ ಮುಖ್ಯವಾಗಿದೆ. ರೋಗಿಯಾಗಿರುವಾಗ ಮನಸ್ಸಿನಲ್ಲಿ ಭಯ, ನಿರಾಶೆ ತುಂಬಿಕೊಂಡಿರಬಹುದು. ಹಾಸಿಗೆ ಹಿಡಿದ ರೋಗಿಗಳಿಗೆ ಒಂಟಿತನದ ಭಯಾನಕತೆ ಕಾಡುತ್ತಿರಬಹುದು. ಇಂತಹವರಿಗೆ ಆಶ್ವಾಸನೆ ನೀಡಲು ಮಾನಸಿಕವಾಗಿ ಶಕ್ತಿಯನ್ನೂ ಬೆಂಬಲವನ್ನೂ ನೀಡಲೂ ಸ್ನೇಹ ತುಂಬಿರುವ ಕ್ರಿಯಾತ್ಮಕವಾದ ಸಂದರ್ಶನಗಳ ಮೂಲಕ ಸಾಧ್ಯವಾಗುತ್ತದೆ. ಸಂದರ್ಶನಗಳು ಆಶ್ವಾಸನೆ ನೀಡುವುದು ಹೇಗೋ ಹಾಗೆ ಬೇಕಾಗದವರು ಸಂದರ್ಶಿಸದೆ ಇರುವುದು ಕೂಡ ರೋಗಿಗೆ ಮಾನಸಿಕ ಒತ್ತಡಗಳು ಉಂಟಾಗಲು ಕಾರಣವಾಗಬಹುದು.

ಸಂದರ್ಶನಕ್ಕಾಗಿ ಆಯ್ಕೆ ಮಾಡುವ ಸಮಯಕ್ಕೆ ದೊಡ್ಡ ಪ್ರಾಮುಖ್ಯತೆಯಿದೆ. ಬೆಳಗ್ಗೆ ಪ್ರಾಥಮಿಕ ಕೃತ್ಯಗಳಿಗಾಗಿ ಮೀಸಲಿಡುವ ಸಮಯ, ಹಗಲು ನಿದ್ರೆ ಮಾಡುವುದಕ್ಕಾಗಲಿ ವಿಶ್ರಾಂತಿಗಾಗಲಿ ಇರುವ ಸಮಯ, ರಾತ್ರಿ ಮಲಗಲು ಆರಂಭಿಸಿದ ಸಮಯವನ್ನು ಸಂದರ್ಶನಕ್ಕಾಗಿ ಆಯ್ಕೆ ಮಾಡಿಕೊಳ್ಳಬಾರದು. ಯಾವ ಕಾರಣಕ್ಕೂ ನಿದ್ರೆಯಲ್ಲಿರುವ ರೋಗಿಯನ್ನು ಎಬ್ಬಿಸಬಾರದು. ರೋಗಿಯ ಸೌಕರ್ಯಕ್ಕಾಗಿ ಮೊದಲ ಪ್ರಾಶಸ್ತ್ಯ ನೀಡಬೇಕು. ಮನೆಯವರನ್ನು ಕರೆದು ವಿಷಯಗಳನ್ನು ತಿಳಿದ ನಂತರ ಸಂದರ್ಶಿಸುವುದು ಉಚಿತ.

ಸಂದರ್ಶನದ ವೇಳೆಯಲ್ಲಿ ದೀರ್ಘ ಸಮಯ ಕಳೆದು ರೋಗಿಯನ್ನು ತೊಂದರೆಗೊಳಿಸದಂತೆ ಜಾಗ್ರತೆ ವಹಿಸಬೇಕು. ರೋಗಿಗೆ ವಿಶ್ರಾಂತಿ ಅವಶ್ಯವಿರುವಾಗ ತುಂಬಾ ಹೊತ್ತು ಕುಳಿತು ಮಾತನಾಡುವುದು ಶಿಷ್ಟಾಚಾರವಲ್ಲ. ಸ್ವಲ್ಪ ಸಮಯ ಸ್ನೇಹದಿಂದ ಮಾತನಾಡಿ ಮರಳುವುದು ಉತ್ತಮ. ಅನೇಕ ಜನರು ಒಟ್ಟಾಗಿ ರೋಗಿಯನ್ನು ನೋಡಲು ಬರುವುದು ರೋಗಿಗೆ ಅಸ್ವಸ್ಥತೆ ಉಂಟಾಗುವ ಸಾಧ್ಯತೆಯಿದೆ. ಸಂದರ್ಶಕರ ಸಂಖ್ಯೆಯನ್ನು ರೋಗಿಯ ಅವಸ್ಥೆಗೆ ತಕ್ಕಂತೆ ಕ್ರಮಪಡಿಸುವುದು ಉತ್ತಮ.

ರೋಗದ ಕುರಿತು ಆತಂಕವನ್ನುಂಟುಮಾಡುವ ವಿಷಯಗಳನ್ನು ಹೇಳದಂತೆ ಶ್ರಮಿಸಬೇಕು. ಅದೇ ರೀತಿಯ ರೋಗದಿಂದ ಮರಣ ಹೊಂದಿದವರ ಕುರಿತು ಭೀತಿಯನ್ನೂ ಇವರಿಗೆ ವಿವರಿಸಬಾರದು. ಅನಾವಶ್ಯಕ ಪ್ರಶ್ನೆಗಳು, ವಿವರಾಂಶಗಳು, ಚಿಕಿತ್ಸಾ ವಿಧಾನಗಳು ಮೊದಲಾದ ಸಂಬಂಧಿಸಿದಂತೆ ರೋಗಿ ಬಹಿರಂಗಪಡಿಸಲು ಹಿಂಜರಿಯುವ ವಿಷಯಗಳನ್ನು ಎತ್ತಿ ತೋರಿಸಬಾರದು. ಅವಶ್ಯವಿರುವ ಚಿಕಿತ್ಸಾ ನಿರ್ದೇಶನಗಳು, ಔಷಧಿಗಳನ್ನು ಕುರಿತಾದ ನಿರಂತರವಾಗಿ ಹೇಳುವುದು ರೋಗಿಗೂ ಕುಟುಂಬಕ್ಕೂ ಒತ್ತಡ ಉಂಟಾಗಲು ಸಾಧ್ಯತೆಯಿದೆ.

ರೋಗಿಗೆ ಮಾತನಾಡಲು ಶಕ್ತಿಯಿಲ್ಲದಿದ್ದರೆ ಮಾತನಾಡಲು ನಿರ್ಬಂಧಿಸಬಾರದು. ಕೆಲವೊಮ್ಮೆ ಹತ್ತಿರ ಕುಳಿತು ಕೊಳ್ಳುವುದೇ ದೊಡ್ಡ ಆಶ್ವಾಸನೆಯಾಗುತ್ತದೆ. ರೋಗಿಯ ಆರೋಗ್ಯಸ್ಥಿತಿಗೆ ಹೊಂದಾಣಿಕೆಯಾಗದ ಆಹಾರವನ್ನು ಸೇವಿಸಲು ನಿರ್ಬಂಧಿಸಬಾರದು. ವೈದ್ಯರ ಮತ್ತು ಕುಟುಂಬದವರ ನಿರ್ದೇಶನಗಳು ಈ ವಿಷಯಗಳಲ್ಲಿ ಪರಿಗಣಿಸಬೇಕು.

ರೋಗಿಯ ಆರ್ಥಿಕ ಪರಿಸ್ಥಿತಿಯನ್ನು ಕುರಿತು ವಿಚಾರಿಸುವುದು ಒಳ್ಳೆಯದು. ಮನೆಯವರ ಬಳಿಯೂ ಸಂಬಂಧಪಟ್ಟು ವಿಚಾರಿಸಬೇಕು. ಚಿಕಿತ್ಸೆಗೆ ಕಷ್ಟಪಡುವವರಿಗೆ, ಸಾಧ್ಯವಾದರೆ ಆರ್ಥಿಕ ಸಹಾಯ ನೀಡಲು ಶ್ರಮಿಸಬೇಕು. ಸ್ವಂತವಾಗಿ ಮಾಡುವುದು ಮಾತ್ರವಲ್ಲ, ಜೊತೆಗಾರಿಕೆಯಿಂದ ಇತರರನ್ನು ಸೇರಿಸಿ ಇದರಲ್ಲಿ ಭಾಗೀದಾರರನ್ನಾಗಿಸಲು ಶ್ರಮಿಸಬೇಕು. ರೋಗಿಯ ಸಮೀಪದ ಬಂಧುಗಳಿಗೆ ಈ ವಿಷಯದಲ್ಲಿ ಹೆಚ್ಚಿನ ಕಾಳಜಿ ಇರಬೇಕು

‘ಬೈ ಸ್ಟ್ಯಾಂಡರ್’ ಎಂಬ ಮಟ್ಟದಲ್ಲಿ ರೋಗಿಯನ್ನು ಪರಿಚರಿಸುವ ಕುಟುಂಬದವರನ್ನು ಬೆಂಬಲಿಸುವುದು ಎಂಬುದು ಅತ್ಯಂತ ಪ್ರಮುಖವಾಗಿದೆ. ಕುಟುಂಬದವರಿಗೆ ಮಾನಸಿಕವಾಗಿಯೂ ಆರ್ಥಿಕ ರೂಪದ ದೊಡ್ಡ ಭಾರ ಉಂಟಾಗಬಹುದು. ಅವರನ್ನು ಆಶ್ವಾಸನೆ ನೀಡುವುದೂ ಅವಶ್ಯಕವಾದ ಸಹಾಯ ನೀಡುವುದೂ ರೋಗಿಯನ್ನು ಉಪಚರಿಸುವುದರ ಭಾಗವಾಗಿದೆ. ರೋಗಿಯನ್ನು ಸ್ನಾನ ಮಾಡಿಸುವುದು, ಊಟವನ್ನೂ ಔಷಧವನ್ನೂ ನೀಡಲು ಸಹಾಯ ಮಾಡುವುದು, ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ವಾಪಸ್ ಕರೆತರುವುದು, ಸಹಾಯಕ್ಕೆ ಯಾರು ಇಲ್ಲದ ರೋಗಿಯ ಜೊತೆಯಲ್ಲಿ ಕುಳಿತುಕೊಳ್ಳುವುದು ಮುಂತಾದ ಸೇವೆಗಳನ್ನು ನಮಗೆ ಸಾಧ್ಯವಿರುವಷ್ಟು ಮಾಡಲು ಸಾಧ್ಯವಾದರೆ ರೋಗಿ ಉಪಚರಿಸುವ ಕುಟುಂಬಗಳಿಗೆ ದೊಡ್ಡ ಸಾಂತ್ವನವಾಗುತ್ತದೆ

ಗುಣಮುಖರಾಗುತ್ತೇವೆಂಬ ಆಸೆಯಿಲ್ಲದ ಸ್ಥಿತಿಯಲ್ಲಿ ಇರುವ ರೋಗಿಗಳಿಗೆ ವಿಶೇಷವಾದ ಪ್ರೀತಿಯ ಉಪಚಾರಗಳ ಅಗತ್ಯವಿದೆ. ರೋಗಿಯ ಮತ್ತು ಕುಟುಂಬದವರ ವಿಶ್ರಾಂತಿ, ಸ್ವಂತ ಕೆಲಸ, ಮಾನಸಿಕ ಸ್ಥಿತಿ ಮೊದಲಾದವುಗಳನ್ನು ಪರಿಗಣಿಸದೆ ನಡೆಸುವ ಸಂದರ್ಶನ ದೊಡ್ಡ ತೊಂದರೆಯಾಗಿ ಬದಲಾಗಲು ಸಾಧ್ಯತೆಯಿದೆ ಎಂದೂ ನೆನಪಿನಲ್ಲಿಡಬೇಕು.