✍️ ಡಾ. ತಾಜ್ ಅಲುವ
ಚಾರ್ಲಿ ಕಿರ್ಕ್ ಭಯಾನಕ ಕೊಲೆಯು ಅಮೆರಿಕನ್ ಸಮಾಜವನ್ನು ದೊಡ್ಡ ಸಾಮಾಜಿಕ ಸಾಂಸ್ಕೃತಿಕ ದುರಂತಕ್ಕೆ ದೂಡಿ ಹಾಕಿದೆ. ಡೆಮಾಕ್ರಾಟ್ಗಳ ಎಡಪಕ್ಷ ತೀವ್ರವಾದಿಗಳು ಕೊಲೆ ಮಾಡಿದ್ದೆಂದು, ಆರೋಪಿಸಿ ರಾಜಕೀಯವಾಗಿ ಈ ಕೊಲೆಯನ್ನು ಉಪಯೋಗಿಸಲು ಡೊನಾಲ್ಡ್ ಟ್ರಂಪ್ ಸಹಿತ ಬಲಪಂಥೀಯರು ಪ್ರಯತ್ನಿಸಿದರು. ಇನ್ನೊಂದು ಕಡೆ, ಅಮೆರಿಕನ್ ಸಮಾಜ ತಲುಪಿದ ರಾಜಕೀಯ ದುರಂತವಂತೂ ವಿವರಿಸಲಾಗದ ಸ್ಥಿತಿಗೆ ತಲುಪಿದೆ.
ವದಂತಿಗಳ ಬಿರುಗಾಳಿ:
ಇನ್ನೊಂದು ಕಡೆ ಹಿಂದೆಂದೂ ಆಗದಷ್ಟು ವದಂತಿಗಳು ಎಲ್ಲ ಸಂವಾದವನ್ನು ಮೀರಿಸಿದವು. ಸಾಯುವ ಮೊದಲು ಚಾರ್ಲಿ ಕಿರ್ಕ್ ತನಗೆ ಫಂಡ್ ಕೊಡುವ ಇಸ್ರೇಲ್ ಬೆಂಬಲಿತ ಲಾಬಿಯಿಂದ ದೂರವಾಗಿದ್ದರು ಎಂದು ಪ್ರಮುಖ ಪತ್ರಕರ್ತ ಮಾಕ್ಸ್ಬ್ಯೂ ಮೆಂಥಾಲ್ ಬಹಿರಂಗ ಪಡಿಸಿದ್ದಾರೆ. ಇಸ್ರೇಲನ್ನು ನಿಶ್ಶರ್ತ ಬೆಂಬಲಿಸುವುದಕ್ಕಾಗಿ ಝಿಯೊನಿಸ್ಟ್ ಬೆಂಬಲಿಗ ಗ್ರೂಪ್ಗಳಿಂದ ಚಾರ್ಲಿ ಗಣನೀಯ ಫಂಡ್ ಸ್ವೀಕರಿಸುತ್ತಿದ್ದರು. ಆದರೆ ಗಾಝದ ಇಸ್ರೇಲಿ ಕೃತ್ಯಗಳ ವಿರುದ್ಧ ಯುವ ಮೂಲಭೂತವಾದಿ ವಿಭಾಗದಿಂದ ಜನಪರ ದಂಗೆಯನ್ನು ಎದುರಿಸಿದ ಕಿರ್ಕ್ ಬಹಿರಂಗವಾಗಿ ಇಸ್ರೇಲನ್ನು ಟೀಕಿಸಲು ತೊಡಗಿದರು. 2025 ಜುಲೈಯ ಸ್ಟೂಡೆಂಟ್ ಆಕ್ಷನ್ ಶೃಂಗದಲ್ಲಿ ಕಿರ್ಕ್ ಅತಿಥಿಯಾಗಿ ಬಂದ ಟಕ್ಕರ್ ಕಾರ್ಲ್ಸನ್ ನಂತಹವರು ಇಸ್ರೇಲ್ನ ವಿರುದ್ಧ ಹೇಳಿಕೆ ನೀಡಿದರು. ಝಿಯೋನಿಸಂ ಅನ್ನು ಬಹಿರಂಗವಾಗಿ ಟೀಕಿಸಿದರು. ಈ ಬದಲಾವಣೆಯಲ್ಲಿ ಕೋಪಗೊಂಡು ಫಂಡ್ ಕೊಡುವವರು ಕಿರ್ಕ್ ಸಂಘಟನೆಗೆ ಹಣ ಕೊಡುವುದು ನಿಲ್ಲಿಸುತ್ತೇವೆ ಎಂದು ಬೆದರಿಕೆಯೊಡ್ಡಿದರು. ನೆತನ್ಯಾಹುರ ದೊಡ್ಡ ಆರ್ಥಿಕ ಸಹಾಯವನ್ನು ಕಿರ್ಕ್ ತಿರಸ್ಕರಿಸಿದರು. ಈ ಪರಿಸ್ಥಿತಿಯಲ್ಲಿ ಕಿರ್ಕ್ ಊಹೆಗೂ ನಿಲುಕದ ರೀತಿ ಕೊಲ್ಲಲ್ಪಟ್ಟರು.
ನೆತನ್ಯಾಹುರ ಕಣ್ಣಾ ಮುಚ್ಚಾಲೆ:
ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹುರಿಗೆ ಕಿರ್ಕ್ ಕೊಲೆಯಲ್ಲಿ ಇಸ್ರೇಲು ನಿರಪರಾಧಿ ಎಂದು ಹೇಳ ಬೇಕಾಯಿತು. ಕಿರ್ಕ್ರೊಂದಿಗೆ ತನಗಿದ್ದ ದೀರ್ಘ ಕಾಲದ ಸೌಹಾರ್ದ ಸಂಬಂಧವನ್ನು ನೆತನ್ಯಾಹು ಪದೇ ಪದೇ ಹೇಳಬೇಕಾಯಿತೆಂದರೆ ಅಂತಹ ವದಂತಿಗಳು ಎಷ್ಟು ಬಲಿಷ್ಠವಾಗಿತ್ತು ಎಂಬುದು ನಿಮಗೂ ಮನವರಿಕೆಯಾಗಬಹುದಾಗಿದೆ.
ಗಡಿಯಾಚೆಯ ಕೊಲೆ ಕೃತ್ಯಗಳ ದೀರ್ಘ ಇತಿಹಾಸ ಇಸ್ರೇಲಿಗಿದೆ. ಇದು ವರೆಗೆ ಅದನ್ನು ಅಷ್ಟು ಲೆಕ್ಕ ಮಾಡಿರಲಿಲ್ಲ. ಇದಕ್ಕಿಂತ ಮೊದಲು ಜಾನ್ ಎಫ್ ಕೆನಡಿಯ ಕೊಲೆ, 9-11 ಘಟನೆಗಳ ಹಿಂದೆ ಝಿಯೊನಿಸ್ಟ್ ದೇಶದ ಹಸ್ತ ಇದೆ. ಆರೋಪಗಳು ಎದ್ದಾಗ ಅದು ಕೆಲವು ಫ್ರಂಚ್ ವ್ಯಕ್ತಿಗಳ ವದಂತಿ ಎಂದು ಸೀಲು ಒತ್ತಲಾಗಿತ್ತು. ಆದರೆ ಇಂದು ವಿಷಯ ಹಾಗಿಲ್ಲ. ಕಿರ್ಕ್ ಕೊಲೆ ಮಾತ್ರವಲ್ಲ, 9/11 ಘಟನೆ ಹಾಗೂ ಮರೆತು ಬಿಟ್ಟ ಇಂತಹ ಘಟನೆಗಳು ಬಸಿದು ತೆಗೆಯಲು ಒಂದು ಕಾಲದಲ್ಲಿ ಪೂರ್ಣವಾಗಿ ಬಲಪಂಥೀಯ ಮೂಲಭೂತ ವಾದಿಯಾದ ಫ್ಯಾಕ್ಸ್ ನ್ಯೂಸ್ ಜರ್ನಲಿಸ್ಟ್ ಆಗಿದ್ದ ಟಕ್ಕರ್ ಕಾರ್ಲ್ಸನ್ ಮತ್ತು ಮಾಕ್ಸ್ಟ್ಲಿಯೂರಂತಹವರು ರಂಗಪ್ರವೇಶಿಸುವುದರೊಂದಿಗೆ ಹಲವರು ಮೂಗಿನ ಮೇಲೆ ಬೆರಳು ಇರಿಸಿದರು. ನೆತನ್ಯಾಹು ಮತ್ತು ಬಿಲ್ ಅಮನ್ರಂತಹವರು ಈ ಹಾನಿಯನ್ನು ತಡೆಯುವುದಕ್ಕೆ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ.
ಕಿರ್ಕ್ ಮನಪರಿವರ್ತನೆ ನಿಜವೇ?
ಈ ಗಲಾಟೆಯಲ್ಲಿ ಕಳಕೊಳ್ಳಬೇಕಾ ಗುತ್ತಿರುವ ಮುಖ್ಯ ವಸ್ತು, ಚಾರ್ಲಿ ಕಿರ್ಕ್ ಇಸ್ರೇಲಿನ ಕುರಿತ ದೃಷ್ಟಿಕೋನಗಳಲ್ಲಿ ಮೂಲಭೂತವಾದ ಬದಲಾವಣೆ ಆಗಿತ್ತು. ಆದರೆ, ನೆತನ್ಯಾಹು ಹೇಳಿದಂತೆ ಅವರು ಒಮ್ಮೆ ಇಸ್ರೇಲಿಗೆ ಅಪಾರ ಬೆಂಬಲಕೊಟ್ಟ ವ್ಯಕ್ತಿಯೂ ಆಗಿದ್ದರು. ಆದರೆ ಕೊನೆ ಕಾಲದಲ್ಲಿ ಕಿರ್ಕ್ ಮನಪರಿವರ್ತನೆ ಆರಂಭವಾಗಿತ್ತೆಂದು ತನ್ನ ಪೊಡೊಕಾಸ್ಟ್ನಲ್ಲಿ ಟಕ್ಕರ್ ಕಾರ್ಲಸನ್ರೆ ಹೇಳಿದ್ದಾರೆ. ಈಗ ಹಲವು ಅಮೆರಿಕನ್ನರೂ ಹೀಗೆ ಹೇಳ ತೊಡಗಿದ್ದಾರೆ.
ಝಿಯೊನಿಸ್ಟ್ ಲಾಬಿಯ ಪಾತ್ರ:
ಕಿರ್ಕ್ ಹತ್ಯೆಯ ನಂತರ ಎದ್ದ ವಿವಾದಗಳ ಹಿನ್ನೆಲೆಯಲ್ಲಿ ಗುಟ್ಟಾಗಿ ಉಳಿದಿರುವುದು ಇನ್ನೊಂದು ದೊಡ್ಡ ಸಮಸ್ಯೆಯ ಲಕ್ಷಣವಾಗಿದೆ. ಅದೆಂದರೆ ಇಸ್ರೇಲ್ ಅನ್ನು ಟೀಕಿಸುವ ಯಾವುದೇ ಸಂವಾದವನ್ನು ದಮನಿಸುವ ತೀವ್ರ ಪ್ರಯತ್ನ.
ಈ ವಿಷಯದಲ್ಲಿ ಬರೆದ ಕೃತಿಗಳಲ್ಲೇ ಪ್ರಧಾನವಾದದ್ದು ದ ಇಸ್ರೇಲ್ ಲಾಬಿ. ಇದರ ಸಹ ರಚನೆಕಾರ ಪ್ರಮುಖ ಅಮೆರಿಕಲ್ ಪೊಲಿಟಿಕಲ್ ವಿಜ್ಞಾನಿ ಪ್ರೋ. ಜಾನ್ ಮಿರ್ ಶೈಮರ್. ಅಮೆರಿಕದ ಇಸ್ರೇಲ್ ವಿರುದ್ಧ ಚರ್ಚೆಗಳನ್ನು ದಮನಿಸಲು ಝಿಯೊನಿಸ್ಟ್ ಲಾಬಿ ಎಷ್ಟರವರೆಗೆ ಹೋಗುವುದೆಂದು ತನ್ನ ಗ್ರಂಥಗಳಲ್ಲಿ ವಿವರವಾಗಿ ವಿವರಿಸಿದ್ದಾರೆ. ತಮ್ಮನ್ನು ವಿರೋಧಿಸು ವವರೊಡನೆ ದ್ವೇಷದ ವಿಚಾರದಲ್ಲಿ ಝಿಯೊನಿಸ್ಟ್ ಲಾಬಿಗಿಂತ ಕೆಟ್ಟವರನ್ನು ನಾನು ನೋಡಿಲ್ಲ ಎಂದು ಟಕ್ಕರ್ ಕಾರ್ಲಸನ್ ಒಮ್ಮೆ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಅಮೆರಿಕದ ಇಸ್ರೇಲಿನ ನೀತಿಯ ಕುರಿತು ಬಹಿರಂಗ ಮತ್ತು ಪ್ರಾಮಾಣಿಕ ಸಂವಾದ ನಡೆಯುವುದಾದರೆ ಅಮೆರಿಕದ ಸಾರ್ವಜನಿಕ ಅಭಿಪ್ರಾಯ ಬದಲಾಗುತ್ತದೆ ಎಂಬುದು ಇದಕ್ಕೆ ಕಾರಣವಾಗಿದೆ.
ಕಠಿಣ ಕ್ರಮಗಳಿಗೆ ಸುವರ್ಣಾವಕಾಶ:
ಮಿರ್ಶೈಮರ್ರ ಅಭಿಪ್ರಾಯದಲ್ಲಿ ಯಹೂದಿ ಲಾಬಿಯ ರೀತಿಯು ಅಮೆರಿಕನ್ ಸಂಸ್ಥೆಗಳನ್ನು ಹೆಚ್ಚೆಚ್ಚು ನಾಶಪಡಿಸುತ್ತಿದೆ. ಇದನ್ನು ಯುನಿವರ್ಸಿಟಿ ಕ್ಯಾಂಪಸ್ಗಳಲ್ಲಿ ನಾವು ಕಾಣುತ್ತಿದ್ದೇವೆ. ಅಲ್ಲಿ ಗಾಝದ ವಂಶ ಹತ್ಯೆಯ ವಿರುದ್ಧ ಕಾನೂನಾತ್ಮಕ ಪ್ರತಿ ಭಟನೆಗಳನ್ನು ಸೆಮಿಟಿಕ್ ವಿರೋಧಿಯಾಗಿ ಸೀಲು ಹೊಡೆಯಲಾಗುತ್ತದೆ. ಈ ಸರಕಾರಕ್ಕೆ ಅಕಾಡಮಿಕ್ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕಲು ವಿಶ್ವ ವಿದ್ಯಾನಿಲಯಗಳನ್ನು ದುರ್ಬಲಗೊಳಿಸಲು ಈ ಸೆಮೆಟಿಕ್ ವಿರೋಧಿ ಎಂಬುದು ಸಮರ್ಥನೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಿರಂತರ ಮುಂದುವರಿಯುತ್ತಿದೆ. ಇದಲ್ಲದೆ ಕಿರ್ಕ್ ಹತ್ಯೆಯ ನಂತರ ಟ್ರಂಪ್ ಸರಕಾರ ತೆಗೆದುಕೊಂಡ ಕೆಲವು ಕ್ರಮಗಳನ್ನು ನೋಡಬಹುದು.
ಭಯೋತ್ಪಾದಕರಿಗೆ ಬೆಂಬಲ ಎಂದು ಆರೋಪಿಸಲ್ಪಟ್ಟವರ ಪೌರತ್ವ ರದ್ದುಪಡಿಸುವ ಅಧಿಕಾರವನ್ನು ಸ್ಟೇಟ್ ಸೆಕ್ರಟರಿಗೆ ಕೊಡಲಾಗಿದೆ. ಕಿರ್ಕ್ ಸಾವನ್ನು ಕ್ಷುಲ್ಲಕ ಎಂದು ಮಾತು ಆಡುವವರು ಮತ್ತು ಅವರ ಟೀಕಾಕಾರರ ವೈಯಕ್ತಿಕ ವಿವರಗಳು ಹೊರಬಿಡಲಾಗುತ್ತಿದೆ. ಇಸ್ರೇಲ್ ವಿರೋಧಿ ಚಟುವಟಿಕೆಗಳನ್ನು ಕ್ರಿಮಿನಲ್ ಮಾಡಲಾಗುತ್ತಿದೆ. ಎಡಪಕ್ಷಗಳವರು ಎತ್ತುವ ವಿರೋಧವನ್ನು ದಮನಿಸುವುದು, ಅವರನ್ನು ಸಮಾಜದಲ್ಲಿ ಒಂಟಿಯಾಗಿ ಮಾಡುವುದು ನಡೆಯುತ್ತಿದೆ.
ಈಗಲೇ ಇಸ್ರೇಲ್ ವಿರೋಧಿ ಪೊಫೆಸರ್ಗಳ ಲೀಸ್ಟ್ಗಳನ್ನು ಕೊಡುವಂತೆ ಒತ್ತಾಯಿಸುವುದಕ್ಕೂ ಫೆಲಸ್ತೀನ್ ಬೆಂಬಲಿಗ ಗ್ರೂಪ್ಗಳ ಫಂಡ್ ನಿಲ್ಲಿಸುವುದಕ್ಕೂ ಪ್ರಯತ್ನಿಸಲಾಗುತ್ತಿವೆ. ಮಾಧ್ಯಮ ಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಹೆಚ್ಚು ದಾಳಿ ಮಾಡುವಂತಹ ಚಾರ್ಲಿ ಕಿರ್ಕ್ ಆಕ್ಟ್ ಬಗ್ಗೆ ನಿರೀಕ್ಷೆ ವ್ಯಕ್ತವಾಗುತ್ತಿದೆ. ಫ್ಯಾಶಿಸ್ಟ್ ವಿರೋಧಿ ಸಂಘಟನೆಯಾದ ಆಂಟಿಫ ಭಯೋತ್ಪಾದಕ ಸಂಘಟನೆ ಎಂದು ಲೀಸ್ಟ್ಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇದು ಎಡಪಕ್ಷಕ್ಕೆ ಸೇರಿದ ಯಾರನ್ನೂ ಭಯೋತ್ಪಾದಕ ಲೇಬಲ್ ಹಚ್ಚಲು ಕಾರಣವಾಗಬಹುದು.
ಪ್ರಜಾಪ್ರಭುತ್ವ ಮೌಲ್ಯಗಳ ಭವಿಷ್ಯ:
ಗಾಝ ಮತ್ತು ವೆಸ್ಟ್ ಬ್ಯಾಂಕಿನಲ್ಲಿ ನಡೆಯುವ ವಂಶಹತ್ಯೆಯನ್ನು ಸಮರ್ಥಿಸಲು ಯಹೂದಿ ಲಾಬಿ ಅಮೆರಿಕದ ಪ್ರಜಾಪ್ರಭುತ್ವ ಮೌಲ್ಯಗಳನ್ನೂ ಶೋಷಣೆ ಮಾಡುತ್ತಿದೆ ಎಂದು ತಿಳಿಯುವವರು ಅಮೆರಿಕದಲ್ಲಿ ಹೆಚ್ಚುತ್ತಿದ್ದಾರೆ.
ಚಾರ್ಲಿ ಕಿರ್ಕ್ ಕೊಲೆ ಅಮೆರಿಕನ್ ಸಮಾಜವನ್ನು ಮರು ಚಿಂತನೆಗೆ ಹಚ್ಚಿದೆ ಎಂಬುದು ಸತ್ಯ. ಯುದ್ಧದ ಮೊದಲ ಬಲಿ ಸತ್ಯವಾಗಿರುತ್ತದೆ.












