ಜುಲೈ 02, ಮಂಗಳವಾರ: ಹಿದಾಯತ್ ಸೆಂಟರ್ ನಲ್ಲಿ ಹಜ್ಜ್ ತರಬೇತಿ ಶಿಬಿರ

0
996

ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು, ಇದರ ವತಿಯಿಂದ 2019 ಜುಲೈ 02, ಮಂಗಳವಾರ ಹಜ್ಜ್ ಗೆ ತೆರಳುವವರಿಗಾಗಿ ಹಜ್ಜ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಬೆಳಿಗ್ಗೆ 10.30 ರಿಂದ ಸಂಜೆ 4.00ರ ವರೆಗೆ ಮಂಗಳೂರು ನಗರದ ಬಂದರಿನ ಬೀಬಿ ಅಲಾಬಿ ರಸ್ತೆಯಲ್ಲಿರುವ ಹಿದಾಯತ್ ಸೆಂಟರ್ ನಲ್ಲಿ ಜರುಗಲಿರುವುದು.

ಈ ಕಾರ್ಯಕ್ರಮದಲ್ಲಿ ಮೌಲಾನ ಯಹ್ಯಾ ತಂಙಳ್ ಮದನಿ ಬ್ಯಾರಿ ಭಾಷೆಯಲ್ಲಿ, ಮೌಲಾನ ಮುಫ್ತಿ ಅಬ್ದುಲ್ ಮನ್ನಾನ್ ಸಾಹೇಬ್ ಉರ್ದು ಭಾಷೆಯಲ್ಲಿ, ಜನಾಬ್ ಮುಹಮ್ಮದ್ ಕುಂಞÂ ಕನ್ನಡ ಭಾಷೆಯಲ್ಲಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಅಲ್ಲದೆ, ಹಜ್ಜ್ ಪ್ರಾತ್ಯಕ್ಷಿಕೆಯ ಸಿ.ಡಿ. ಪ್ರದರ್ಶನವಿರುವುದು. ಹೆಚ್ಚಿನ ಮಾಹಿತಿಗಾಗಿ 9449470967, 9845665198 ಸಂಖ್ಯೆಯನ್ನು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.