ಮಂಗಳೂರು: ಹಿರಾ ಮಹಿಳಾ ಸಂಯುಕ್ತ ಪದವಿಪೂರ್ವ ಕಾಲೇಜು ಬಬ್ಬುಕಟ್ಟೆ, ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮವು ದಿನಾಂಕ 17-06-2019 ರಂದು ಹಿರಾ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಜನಾಬ್ ಸಯ್ಯದ್ ಮೊಹಮ್ಮದ್ ಬ್ಯಾರಿ ಆಗಮಿಸಿದ್ದರು. ಇವರು ಮಾತಾಡುತ್ತಾ,
ಸಮಾಜದ ಆರೋಗ್ಯ ನಿರ್ಮಿಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರವಿದೆ. ಆದರೆ ಇಂದಿನ ಸಮಾಜವು ಯಾವ ಸ್ಥಾನಮಾನ ನೀಡಬೇಕಾಗಿತ್ತೋ ಅದರಲ್ಲಿ ವಿಫಲವಾಗಿದೆ ಎಂದರು.
ಜನಾಬ್ ಕೆ.ಮೊಹಮ್ಮದ್ (ಮಾಜಿ ಕಾರ್ಯದರ್ಶಿ ಶಾಂತಿ ಎಜ್ಯುಕೇಶನ್ ಟ್ರಸ್ಟ್ )ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿದ ಪದವಿ ಪೂರ್ವ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿನಿಯರನ್ನು ಅಬಿನಂಧಿಸಲಾಯಿತು. ಅಭಿನಂದನಾ ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ಮಂಜುಳ ಹಾಗೂ ಶಿಕ್ಷಕಿ ಶ್ರೀಮತಿ ಪ್ರೀತಿ ನೆರವೇರಿಸಿದರು.ವಿದ್ಯಾರ್ಥಿನಿಯರಾದ ಕೈರುನ್ನೀಸ, ಫಾತಿಮ ಅನ್ಸಾ , ಕದೀಜ ಹನ್ನಾ ಹಾಗೂ ಫಾತಿಮಾ ನಿಮ್ರ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಶಾಂತಿ ಎಜ್ಯುಕೇಶನ್ ಟ್ರಸ್ಟ್ ನ ಸದಸ್ಯೆ ಶ್ರೀಮತಿ ಸಮೀನ ಮಾತನಾಡಿದರು.
ಕಾರ್ಯಕ್ರಮದಲ್ಲ್ಲಿ ಜನಾಬ್ ಶಾಹಿರ್ ಕಮಾಲ್ ,ಜನಾಬ್ ಉಸ್ಮಾನ್ ಹಂಗ್ಲೂರ್, ಕಾಲೇಜಿನ ಅಧ್ಯಕ್ಷರಾದ ಜನಾಬ್ ಅಬ್ದುರ್ರಹ್ಮಾನ್, ಸಂಚಾಲಕರಾದ ಜನಾಬ್ ರಹಮತುಲ್ಲಾ ,ಶಾಂತಿ ಎಜ್ಯುಕೇಶನ್ ಟ್ರಸ್ಟನ ಮಾಜಿ ಅದ್ಯಕ್ಷರಾದ ಜನಾಬ್ ಕೆ.ಎಮ್ ಶರೀಫ್, ಟ್ರಸ್ಟಿ ಸಮೀನ ಅಫ್ಶಾನ್ ,ಹಿರಾ ಸಂಸ್ಥೆಯ ಎಲ್ಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವು ಶಾಂತಿ ಎಜ್ಯುಕೇಶನ್ ಟ್ರಸ್ಟಿನ ಕೆ.ಎಮ್. ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಪಿ.ಯು. ವಿಭಾಗದ ವಿದ್ಯಾರ್ಥಿನಿಯರಾದ ಹಲೀಮ ರ ಮತ್ತು ಸಿಹಾಂ ಶೇಖ್ ಕುರ್ ಆನ್ ಪಪಠಿಸಿ, ಭಾಷಾಂತರಿಸಿದರು.
ಉಪನ್ಯಾಸಕಿ ಅನಿಟಾ ಡಯನ ಸ್ವಾಗತಿಸಿದರು. ಉಪನ್ಯಾಸಕಿ ದಿಲ್ನವಾಜ್ ಮತ್ತು ವಿದ್ಯಾರ್ಥಿನಿ ಹಲೀಮ ಅಫ್ರೀರೀನ್ ಕಾರ್ಯಕ್ರಮವನ್ನು ನಿರೂಪಿಸಿದರು.












