“ಫೆಲಸ್ತೀನ್ ವಿಚಾರದಲ್ಲಿ ವ್ಯರ್ಥ ಆದ ವಿಶ್ವಸಂಸ್ಥೆಯ ಭದ್ರತಾ ಸಮಿತಿ”

0
252

✍️ ಶಾಝಿಲ್ ಉಸ್ಮಾನ್

ಗಾಝದಲ್ಲಿ ಶಾಂತಿ ಯೋಜನೆಯನ್ನು ಈ ಯೋಜನೆಗೆ ಒಪ್ಪಿಕೊಂಡು ಒಂದು ವಾರವಾಗಿದೆ. ಈ ಯೋಜನೆಗೆ ಅಂಗೀಕಾರವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ ನೀಡಿದೆ. ಆದರೆ ಇದರಿಂದ ಫೆಲಸ್ತೀನಿನ ಸಂತ್ರಸ್ತರಿಗೆ ಯಾವುದೇ ಶಾಂತಿ ಸಮಾಧಾನಗಳು ಆಗಿಲ್ಲ. ಒಪ್ಪಂದಗಳನ್ನು ಬಹಳಷ್ಟು ರೂಪಿಸಬಹುದು. ಜಾರಿಗೆ ತರುವ ಶಕ್ತಿ ಅದಕ್ಕಿಲ್ಲ ಎಂಬುದು ಈಗ ಗುಟ್ಟಾಗಿಲ್ಲ.

ಫೆಲೆಸ್ತೀನಿನಲ್ಲಿ ಯುದ್ಧ ವಿರಾಮ ಒಪ್ಪಂದ. ತುರ್ತಾಗಿ ಜಾರಿಗೊಳ್ಳಬೇಕಾಗಿತ್ತು. ಒಂದಿನವೂ ಜಾರಿಗೆ ಬರಲಿಲ್ಲ. ಅಕ್ಟೊಬರ್ 11ಕ್ಕೆ ಯುದ್ಧ ವಿರಾಮವನ್ನು ಘೋಷಿಸಲಾಗಿತ್ತು. ಅದರ ನಂತರ ನವೆಂಬರ್ 23ರ ವರೆಗೆ ಇಸ್ರೇಲ್ 338 ಫೆಲಸ್ತೀನಿಯರನ್ನು ಕೊಂದು ಹಾಕಿದೆಯೆಂದ್ರೆ! ಅದರಲ್ಲಿ ಕನಿಷ್ಠ 69 ಮಕ್ಕಳು ಸೇರಿದ್ದಾರೆ! ಅಂದರೆ ನಲ್ವತ್ತನಾಲ್ಕು ದಿವಸಗಳಲ್ಲಿ 395 ಬಾರಿ ಯುದ್ಧ ವಿರಾಮವನ್ನು ಇಸ್ರೇಲ್ ಉಲ್ಲಂಘಿಸಿ ದೆಂದರ್ಥ. ಭದ್ರತಾ ಸಮಿತಿ ಸಾಮೂಹಿಕ ವಂಶ ಹತ್ಯೆಯನ್ನು ವೀಕ್ಷಿಸಲಿಕ್ಕೆ ಈಗ ಗ್ಯಾಲರಿ ಹತ್ತಿ ಕೂತಿದೆ. ಅಪರಾಧಿ ದೇಶವಾದ ಇಸ್ರೇಲಿನೊಂದಿಗೆ ಸಮಾಲೋಚಿಸಿ.

ಫೆಲಸ್ತೀನನ್ನು ಸಂಪೂರ್ಣವಾಗಿ ಕಡೆಗಣಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿದ ವಸಾಹತುಶಾಹಿತ್ವದ ಯೋಜನೆಗೆ ಭದ್ರತಾ ಸಮಿತಿ ಅಂಗೀಕಾರ ನೀಡಿದ್ದು. ಅದನ್ನು ತಾನೇ ರದ್ದುಪಡಿಸುವ ಕೆಲಸವನ್ನು ಅದು ಮಾಡಿದೆಯೆಂದ್ರೆ? ಹೌದು, ಇಸ್ರೇಲ್ ವಂಶಹತ್ಯೆಯಲ್ಲಿ ಅದು ಸುಖ ಅನುಭವಿಸುತ್ತಿದೆ. ಎರಡು ವರ್ಷ ಯುದ್ಧ ವಿರಾಮ ಪ್ರಸ್ತಾವ ಭದ್ರತಾ ಸಮಿತಿಯಲ್ಲಿ ಬಂದಾಗ ಇದೇ ಅಮೆರಿಕ ವೀಟೋ ನೀಡಿತ್ತು. ಜಗತ್ತು ಅಮೆರಿಕದ ಈ ಆಟವನ್ನು ಮರೆಯುವುದಿಲ್ಲ.

ಇಸ್ರೇಲ್ ಈ ರೀತಿ ಯುದ್ಧ ವಿರಾಮ ಉಲ್ಲಂಘಿಸುತ್ತಿರುವಾಗ ಭದ್ರತಾ ಸಮಿತಿಯು ವಿರೋಧಿಸುವ ಗೋಜಿಗೆ ಹೋಗುತ್ತಿಲ್ಲ. ಯುದ್ಧ ವಿರಾಮ ಉಲ್ಲಂಘನೆಯೊಂದಿಗೆ ಗಾಝಕ್ಕೆ ನೆರವಿಗೆ ಕಳುಹಿಸುವ ವಸ್ತುಗಳಿಗೆ ಅಡ್ಡಿಪಡಿಸುವ ಕೆಲಸವನ್ನು ಮುಂದುವರಿಸುತ್ತಿದೆ. ಯುದ್ಧ ವಿರಾಮದಲ್ಲಿ ದಿನಾಲೂ 600 ಲೋಡ್ ಸಾಮಾನುಗಳನ್ನು ಕಳುಹಿಸುವ ಒಪ್ಪಂದ ಆಗಿತ್ತು. ಆದರೆ 117 ಲೋಡ್ ವಸ್ತುಗಳನ್ನು ಮಾತ್ರವೇ ಗಾಝಕ್ಕೆ ಪ್ರತಿದಿನ ಕಳುಹಿಸಿಕೊಡಲಾಗುತ್ತಿದೆ.

ವಾಸ್ತವದಲ್ಲಿ ವಂಶಹತ್ಯೆ ವಿರುದ್ಧ ಜಗತ್ತಿನ ಉದ್ದಗಲಕ್ಕೆ ಹರಡಿದ ಆಕ್ರೋಶವನ್ನು ತಣ್ಣಗೆ ಗೊಳಿಸಲು ಮಾತ್ರ ಯುದ್ಧ ವಿರಾಮದಿಂದ ಪ್ರಯೋಜನವಾಗಿದೆ. ಭದ್ರತಾ ಸಮಿತಿಯ ಪರಿಗಣನೆಗೆ ಯೋಜನೆಯನ್ನು ನೀಡುವ ಮೊದಲು 36 ಅಂತಾರಾಷ್ಟ್ರೀಯ ಮಾನವಹಕ್ಕುಗಳ ತಜ್ಞರು ಯಾವುದೇ ಯೋಜನೆಯಲ್ಲಿ ಇರಬೇಕಾದ ಮೂಲಭೂತ ತತ್ವಗಳನ್ನು ವಿವರಿಸಿದ್ದರು. ಅಂತಾರಾಷ್ಟ್ರೀಯ ಕಾನೂನುಗಳನ್ನು ಅಂತಾರಾಷ್ಟ್ರೀಯ ಕೋರ್ಟಿನ ತೀರ್ಪುಗಳ ಆಧಾರದಲ್ಲಿ ಶಾಂತಿ ಯೋಜನೆಗೆ ಅಗತ್ಯವಿರುವ ಘಟಕಗಳನ್ನು ಅವರು ಬೆಟ್ಟು ಮಾಡಿ ತೋರಿಸಿದರು. ಆದರೆ ಭದ್ರತಾ ಸಮಿತಿಗೆ ಈ ಜಾಗತಿಕ ನ್ಯಾಯವನ್ನು ಪಾಲಿಸಲ್ಪಡದ ಒಂದು ಯೋಜನೆಯನ್ನು ಅಂಗೀಕರಿಸಲು ಸಾಧ್ಯವಾಯಿತು. ಆದುದರಿಂದ ಈ ಭದ್ರತಾ ಸಮಿತಿಯು ಸಂಪೂರ್ಣ ಅಪ್ರಾಮುಖ್ಯಗೊಂಡಿದೆ.

ವಿಶ್ವಸಂಸ್ಥೆ ನೀಡಿದ ಫೆಲಸ್ತೀನಿಗೆ ಸ್ವಯಂ ನಿರ್ಣಯ ಹಕ್ಕು ಮತ್ತು ಇಸ್ರೇಲಿನ ಅತಿಕ್ರಮಣಗಳನ್ನು ಕೊನೆಗೊಳಿಸುವುದು, ಅದರಂತೆ ಗಾಝದಿಂದ ವೆಸ್ಟ್ ಬ್ಯಾಂಕಿನಿಂದ ಇಸ್ರೇಲ್ ಹಿಂದೆ ಸರಿಯಬೇಕೆಂದು ಅಂತಾರಾಷ್ಟ್ರೀಯ ಕೋರ್ಟು ಆದೇಶಿಸಿ ಒಂದು ವರ್ಷವಾಗಿದೆ. ಈಗ ಭದ್ರತಾ ಸಮಿತಿ ಜಾರಿಗೆ ತಂದ ಯೋಜನೆ ಇದಕ್ಕೆ ತದ್ವಿರುದ್ಧವಾಗಿದೆ. ಅತಿಕ್ರಮಣವನ್ನು ಕೊನೆಗೊಳಿಸುವುದರ ಕುರಿತೋ? ಫೆಲಸ್ತೀನ್ ಸ್ವಯಮಾಡಳಿತ ವನ್ನು ದೃಢಪಡಿಸದಿರುವ ಮತ್ತು ಅದರ ಕುರಿತು ಏನು ಹೇಳದಿರುವ ಒಂದು ಯೋಜನೆಯನ್ನು ಅಂಗೀಕರಿಸುವ ಅಧಿಕಾರ ವಿಶ್ವಸಂಸ್ಥೆಗೆ ಎಲ್ಲಿಂದ ಬಂತು? ಫೆಲಸ್ತೀನಿನ ಸ್ವಯಂ ಆಡಳಿತದ ಕುರಿತು ಅದೀಗ ಮೌನ ಪಾಲಿಸುತ್ತಿದೆ. ಮಾತ್ರವಲ್ಲ ಅದು ಇಸ್ರೇಲಿನ ಪಕ್ಷಪಾತಿಯೂ ಆಗಿದೆ. ಹೊರಗಿನ ಸೈನ್ಯಗಳಿಗೆ ಆಡಳಿತ ವ್ಯವಸ್ಥೆಯನ್ನು ವಹಿಸಿ ಕೊಟ್ಟು ಫೆಲಸ್ತೀನನ್ನು ವಸಾಹತುಶಾಹಿತ್ವದ ಕಾಲಕ್ಕೆ ಮತ್ತೆ ದೂಡಿ ತರಲಾಗುತ್ತಿದೆ. ವಿಶ್ವಸಂಸ್ಥೆ ಚಾರ್ಟರಿನ 24(2) ಸೆಕ್ಷನ್‌ಗೆ ಇದು ವಿರುದ್ಧವೂ ಆಗಿದೆ.

ಯುದ್ಧ ವಿರಾಮ ಜಾರಿಗೆ ಬಂದಿಲ್ಲ. ಆದರೆ ಇಸ್ರೇಲಿನ ಕ್ರೌರ್ಯ ಮತ್ತು ದುಷ್ಟತನ ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಫೆಲಸ್ತೀನಿಯರಿಗೆ ಇದು ಮಾತ್ರ ಆಗಿದ್ದು. ವಿಶ್ವಸಂಸ್ಥೆಯ ಇಸ್ರೇಲಿನ ಮಮತೆಯನ್ನೇ ಇವೆಲ್ಲವೂ ತೋರಿಸುತ್ತಿದೆ. ಪ್ರತಿರೋಧ, ಸ್ವಾತಂತ್ರ್ಯ ಹೋರಾಟ ನಡೆಸಲು ಅತಿಕ್ರಮಣದಿಂದ ಬಸವಳಿದ ಜನರ ಹಕ್ಕುಗಳ ಕುರಿತು ಜಿನಿವಾ ಒಪ್ಪಂದ ಇದೆ. ಇದರ ಉಲ್ಲಂಘನೆ ನಡೆದಿದೆ. ದೌರ್ಜನ್ಯಕ್ಕೊಳಗಾಗುತ್ತಿರುವ ಜನರ ಪ್ರತಿಭಟಿಸುವ ಹಕ್ಕನ್ನು ನಿಷೇಧಿಸುತ್ತಿದೆ. ವಂಶಹತ್ಯೆ ನಡೆಸುವವರನ್ನು ಏನೂ ಮಾಡುವುದಿಲ್ಲ. ಇದು ಇಸ್ರೇಲಿಗೆ ಇನ್ನಷ್ಟು ಅತಿಕ್ರಮಣಕ್ಕೆ ಪುಷ್ಠಿ ನೀಡುತ್ತಿದೆ. ಇನ್ನೊಂದು ರೀತಿ ಹೇಳಿದರೆ ಇಸ್ರೇಲಿಗೆ ಬೇಕಾಬಿಟ್ಟಿಯಾಗಿ ವರ್ತಿಸಲು ಅನುಮೋದನೆ ನೀಡಿದಂತಾಗಿದೆ.

ಅದುದರಿಂದ ಅತಿಕ್ರಮಣವನ್ನು ಕೊನೆಗೊಳಿಸುವ ಸಾಧ್ಯತೆಗಳನ್ನೇ ಭದ್ರತಾ ಸಮಿತಿ ಯೋಜನೆ ಅಂಗೀಕರಿಸುವ ಮೂಲಕ ಮಾಡಿದ್ದು ಅಂದರೆ ಭದ್ರತಾ ಸಮಿತಿ ಇಸ್ರೇಲಿನ ಅಪರಾಧ ಕೃತ್ಯಗಳಿಗೆ ಕಾನೂನು ಉಲ್ಲಂಘನೆಗೆ ಸಾಥ್ ನೀಡುತ್ತಿದೆ. ಭದ್ರತಾ ಸಮಿತಿ ಝಿಯೊನಿಸ್ಟ್ ಆಡಳಿತದ ಕೈ ಗೊಂಬೆಯಾಗಿದೆ. ಸ್ವಯಂ ತನ್ನನ್ನು ರಕ್ಷಿಸಿಕೊಳ್ಳಲು ಕೂಡ ಈ ಸಮಿತಿಗೆ ಸಾಧ್ಯವಿಲ್ಲ ಎನ್ನಬಹುದು.