ಸನ್ಮಾರ್ಗ ವಾರ್ತೆ
15 ವರ್ಷವನ್ನು ಮೀರಿದ ಹಳೆಯ ವಾಹನಗಳ ಜಪ್ತಿಗೆ ರಾಜ್ಯ ಸರಕಾರ ಮುಂದಾಗಿದೆ. ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ವಾಹನ ಒಂದನ್ನು ಹದಿನೈದು ವರ್ಷಗಳವರೆಗೆ ಸುಸ್ಥಿತಿಯಲ್ಲಿಟ್ಟುಕೊಂಡು ಓಡಿಸಬಹುದು. ಕೇಂದ್ರ ಸರಕಾರದ ಪ್ರಕಾರ ಕಮರ್ಷಿಯಲ್ ವಾಹನಗಳಿಗೆ ಐದು ವರ್ಷ ವಿನಾಯಿತಿ ನೀಡಲಾಗಿದೆ ಆದರೆ ಸರ್ಕಾರಿ ವಾಹನಗಳಿಗೆ ಈ ವಿನಾಯಿತಿ ಇಲ್ಲ ಎಂದವರು ಹೇಳಿದ್ದಾರೆ.
ಆಯುಸ್ಸು ಮೀರಿದ ಒಂದು ಕೋಟಿ 38 ಲಕ್ಷ ವಾಹನಗಳನ್ನು ಗುಜರಿಗೆ ಹಾಕಬೇಕೆಂಬ ಒತ್ತಾಯ ಕೇಳಿ ಬಂದಿದೆ. 15 ವರ್ಷ ಮೀರಿದ ಬಸ್ ಗಳು ನಿಗಮದಲ್ಲಿ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರಕಾರದ ನೀತಿಯಂತೆ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವಾಗಿದೆ. ಆದರೆ 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳಿಗೆ ಫಿಟ್ನೆಸ್ ಟೆಸ್ಟ್ ಕಡ್ಡಾಯವಾಗಿದ್ದು ಇದರಲ್ಲಿ ಉತ್ತೀರ್ಣವಾಗದ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮವಿದೆ. ಹೊಸ ವಾಹನ ಖರೀದಿಯಲ್ಲಿ ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹ ಧನ ಕೂಡ ಸಿಗಲಿದೆ ಎಂದವರು ಹೇಳಿದ್ದಾರೆ.












