ತನಿಖೆಯನ್ನು ಸ್ಥಗಿತಗೊಳಿಸಿ: ಇಸ್ರೇಲ್ ಕೋರಿಕೆಯನ್ನು ತಿರಸ್ಕರಿಸಿದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ

0
488

ಸನ್ಮಾರ್ಗ ವಾರ್ತೆ

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ಗೆ ಹಿನ್ನಡೆಯಾಗಿದೆ. ಗಾಝ ವಂಶಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಯನ್ನು ಸ್ಥಗಿತಗೊಳಿಸಬೇಕು ಎಂದು ಕೋರಿ ಇಸ್ರೇಲ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇಸ್ರೇಲಿ ನಾಯಕರ ವಿರುದ್ಧ ದ ತನಿಖೆಯನ್ನು ತಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಇಸ್ರೇಲ್ ಪ್ರಧಾನಿ, ನೇತನ್ಯಾಹು, ಮಾಜಿ ರಕ್ಷಣಾ ಸಚಿವ ಗ್ಯಾಲೆಂಟ್ ಮುಂತಾದವರ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಲ್ಲಿದೆ. ಇದರ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.

ಇದೆ ವೇಳೆ ಕದನ ವಿರಾಮ ಜಾರಿಯಲ್ಲಿ ಇರುವುದರ ಹೊರತಾಗಿಯೂ ಹಮಾಸ್ ಕಮಾಂಡರ್ ರಈದ್ ಸಅದ್ ಅವರನ್ನು ಇಸ್ರೇಲ್ ಹತ್ಯೆ ಮಾಡಿರುವುದಕ್ಕೆ ಅಮೆರಿಕ ಪ್ರಬಲ ವಿರೋಧ ವ್ಯಕ್ತಪಡಿಸಿರುವುದಾಗಿ ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಇಸ್ರೇಲ್‌ಗೆ ಈ ಎಚ್ಚರಿಕೆಯನ್ನು ನೀಡಿರುವುದಾಗಿ ವರದಿಗಳು ತಿಳಿಸಿವೆ.

ಡಿಸೆಂಬರ್ 29 ರಂದು ವೈಟ್ ಹೌಸ್ ನಲ್ಲಿ ಅಮೆರಿಕಾದ ಅಧ್ಯಕ್ಷರ ಜೊತೆ ನೆತ ನ್ಯಾಹು ಮಾತುಕತೆ ನಡೆಸಲಿದ್ದು ಅದಕ್ಕಿಂತ ಮುಂಚಿತವಾಗಿ ಈ ಕದನ ವಿರಾಮ ಒಪ್ಪಂದ ಉಲ್ಲಂಘನೆಯಾಗಿದೆ. ಕದನ ವಿರಾಮದ ಎರಡು ತಿಂಗಳ ಅವಧಿಯಲ್ಲಿ 150ಕ್ಕಿಂತಲೂ ಅಧಿಕ ಬಾರಿ ಇಸ್ರೇಲ್ ಈ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಹೇಳಲಾಗುತ್ತಿದೆ. ನಾನೂರಕ್ಕಿಂತಲೂ ಅಧಿಕ ಫೆಲಸ್ತೀನಿಯರನ್ನು ಈ ಅವಧಿಯಲ್ಲಿ ಇಸ್ರೇಲ್ ಹತ್ಯೆ ಮಾಡಿದೆ.