✍️ ನಜೀರ್ ಖಾನ್, ಹೊಸಪೇಟೆ
ಪ್ರತಿಯೊಬ್ಬರೂ ಆಲೋಚಿಸಬೇಕಾದಂತಹ ವಿಚಾರ ತಾನೇ ಇದು? ಶಾಸನ ಸಭೆಗಳು ಎಂದರೆ, ಅಲ್ಲಿ ಜನರಿಂದ ಪ್ರತ್ಯಕ್ಷ, ಅಪ್ರತ್ಯಕ್ಷವಾಗಿ ಆಯ್ಕೆಯಾದಂತಹ ಜನಪ್ರತಿನಿಧಿಗಳು ಅಂದರೆ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಸಭೆ ಸದಸ್ಯರು ಮತ್ತು
ವಿಧಾನಪರಿಷತ್ ಸದಸ್ಯರು ಹೀಗೆ ರಾಜ್ಯ ಮಟ್ಟದಲ್ಲಿ ವಿಧಾನಪರಿಷತ್ತು, ವಿಧಾನಸಭೆ ಇರುತ್ತವೆ ರಾಷ್ಟ್ರಮಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಇರುತ್ತದೆ.
ಇಲ್ಲಿ ಆಯ್ಕೆಯಾಗುವ ಸದಸ್ಯರು ಬಹುತೇಕ ರಾಜಕೀಯ, ಸಾಮಾಜಿಕ, ಆರ್ಥಿಕ ವಿಚಾರಗಳು, ರಾಜ್ಯದ, ದೇಶದ ಮತ್ತು ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳುವಳಿಕೆ ಉಳ್ಳವರಾಗಿರುತ್ತಾರೆ.
ಒಬ್ಬ ಕ್ರಿಶ್ಚಿಯನ್ ಜನಪ್ರತಿನಿಧಿ ಬೈಬಲ್ ನ ಬಗ್ಗೆ, ಸಂಪೂರ್ಣವಾಗಿ ತಿಳುವಳಿಕೆ ಇರುವುದಿಲ್ಲ. ಒಬ್ಬ ಹಿಂದೂ ಪ್ರತಿನಿಧಿಯಾಗಿ ಭಗವದ್ಗೀತೆ, ವೇದ ಉಪನಿಷತ್ತುಗಳ ಬಗ್ಗೆ ರಾಮಾಯಣ ಮತ್ತು ಮಹಾಭಾರತಗಳ ಬಗ್ಗೆ ಸಂಪೂರ್ಣ ಜ್ಞಾನ ಇರುವುದಿಲ್ಲ. ಅದೇ ರೀತಿ ಒಬ್ಬ ಮುಸ್ಲಿಂ ಜನ ಪ್ರತಿನಿಧಿಗೂ ಕುರಾನಿನ ಮತ್ತು ಹದೀಸಿನ ವಿಚಾರಗಳು ಸಂಪೂರ್ಣವಾಗಿ ಗೊತ್ತಿರುವುದಿಲ್ಲ.
ಈ ವಿಚಾರಗಳು ನಾನು ಏಕೆ ಬರೆಯುತ್ತಿದ್ದೇನೆ ಎಂದರೆ, ಈ ಶಾಸನ ಸಭೆಗಳಲ್ಲಿ ಚರ್ಚಿಸ ಬೇಕಾಗಿರುವ ವಿಚಾರಗಳು ರಾಜ್ಯದ ಮತ್ತು ದೇಶದ ಕುಂದು ಕೊರತಗಳ ಬಗ್ಗೆ ಸಂವಿಧಾನದ ಅಧೀನದಲ್ಲಿ ಚರ್ಚಿಸ ಬೇಕಾದಂತ ಅನೇಕ ವಿಚಾರಗಳು ಉದಾಹರಣೆ ರಸ್ತೆ, ಚರಂಡಿ, ಪರಿಸರ ಅಭಿರುದ್ದಿಗಳ ಬಗ್ಗೆ, ಇಲಾಖೆಗಳ ಕಾರ್ಯನಿರ್ವಹಣೆ, ಮೂಲಭೂತ ಸಮಸ್ಯೆಗಳು, ರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹದ ಬಗ್ಗೆ, ಹೊಸ ಕಾಯಿದೆ ಜಾರಿಯಾಗುವ ಕುರಿತು ಚರ್ಚೆಗಳು ಮಾಡಬೇಕಾದಂತ ವಿಚಾರಗಳ ಪಟ್ಟಿಯನ್ನೇ ಮಾಡಬಹುದಾಗಿದೆ.
ಅದನ್ನೆಲ್ಲ ಬಿಟ್ಟು ಇಂದು ಈ ಶಾಸನ ಸಭೆಗಳಲ್ಲಿ ತಾನೇ ಯಾವುದೋ ಗ್ರಂಥದ ಒಂದೆರಡು ಪದಗಳನ್ನು, ತತ್ವಗಳನ್ನು ಓದಿಕೊಂಡು ಬಂದು ಇದಕ್ಕೆ ವಿವರಣೆ ಕೊಡಿ ಎಂದು ಪ್ರಶ್ನಿಸುತ್ತಾರೆ ಇದಕ್ಕೆ ಸ್ಪಷ್ಟ ವಿವರಣೆ ಸಾಧ್ಯನ? ಮೊನ್ನೆ ವಿಧಾನ ಪರಿಷತ್ ಸದಸ್ಯರೋಬ್ಬರು ಜಿಹಾದ್, ಫೀಸಬೀಲುಲ್ಲಾಹ್ ಮತ್ತು ಕಾಫರ್ ವಿಚಾರಗಳ ಬಗ್ಗೆ ಪ್ರಶ್ನೆಗಳು ಮಾಡುತ್ತಾರೆ ಸಾಮಾನ್ಯ ಜ್ಞಾನ ಕೂಡ ಇಲ್ಲದ ಶಾಸಕರು ಇನ್ನೊಂದು ಕೋಮಿನ ಬಗ್ಗೆ ಯಾವ ರೀತಿ ಪ್ರಶ್ನೆ ಮಾಡಬೇಕು ಎನ್ನುವ ಸಣ್ಣ ಅರಿವು ಇಲ್ಲದಾಗಿದೆ. ಇಂತಹ ಗ್ರಂಥಗಳ ವಿಚಾರಗಳು ಆಯಾ ಧರ್ಮ ಪಂಡಿತರಿಗೆ ಮಾತ್ರ ಗೊತ್ತಿರುತ್ತದೆ ಎನ್ನುವುದು ಸಾಮಾನ್ಯ ಜ್ಞಾನ ತಾನೆ? ಇಂತಹ ಪ್ರಶ್ನೆಗಳು ಈ ಶಾಸನ ಸಭೆಗಳಲ್ಲಿ ಚರ್ಚೆ ಮಾಡುವುದಕ್ಕೆ ಅನುಮತಿ ಕೊಡುವುದು ಸೂಕ್ತವೆ? ಇದು ಇತ್ತೀಚಿಗೆ ಸಿಕ್ಕಾಪಟ್ಟೆ ಚರ್ಚೆಗಳು ಜಾಸ್ತಿಯಾಗಿ ಬಿಟ್ಟಿವೆ.
ಒಂದರ್ಧ ಈ ಗ್ರಂಥಗಳ ವಿವರಣೆ ಬೇಕೇ ಬೇಕು ಎಂದರೆ ಉಲಮಗಳನ್ನು ಧರ್ಮ ಪಂಡಿತರನ್ನು ಮತ್ತು ಚರ್ಚ್ ನ ಫಾದರ್ ಗಳನ್ನು ಸರ್ಕಾರ ನೇಮಿಸಿಕೊಂಡು ಅವರಿಂದ ವಿವರಣೆ ಪಡೆದರೆ ಸೂಕ್ತವಲ್ಲವೇ? ಧರ್ಮ ಗ್ರಂಥಗಳ ಜ್ಞಾನವೇ ಗೊತ್ತಿಲ್ಲದ ಶಾಸಕರಿಗೆ ಉತ್ತರ ಹೇಳಲು ಹೇಗೆ ಬರುತ್ತದೆ?
ನಾನು ಈ ವಿಚಾರ ಯಾಕೆ ಇಲ್ಲಿ ಬರೆಯುತ್ತಿದ್ದೇನೆ ಎಂದರೆ ಈ ಶಾಸನ ಸಭೆಗಳ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯುವುದಿಲ್ಲ ಸೀಮಿತ ಅವಧಿಗೆ ಮಾತ್ರ ನಡೆಯುತ್ತವೆ ಸೀಮಿತ ಅವಧಿನೇ ಈ ರೀತಿ ಸಮಯ ವ್ಯರ್ಥ ಮಾಡಿದರೆ ಜನ ಸಾಮಾನ್ಯರಿಗೆ ಮಾಡುವ ದ್ರೋಹವಲ್ಲವೇ?
ಒಟ್ಟಾರೆಯಾಗಿ ಸಾಮಾನ್ಯ ಜನರ ಕುಂದು ಕೊರತೆಗಳ ಬಗ್ಗೆ ಚರ್ಚೆ ಮಾಡಿ ಕಾಯಿದೆಗಳನ್ನು ರೂಪಿಸುವ ಸದನಗಳಲ್ಲಿ ಇಂತಹ ವಿಚಾರಗಳು ಅಪ್ರಸ್ತುತ ಎಂಬುದು ನನ್ನ ಅಭಿಪ್ರಾಯ.












