ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ವಿಶೇಷ ಚೇತನರಿಗೆ ಹಾಗೂ ಹಿರಿಯರಿಗೆ ಪ್ರತ್ಯೇಕ ದಾರಿಯ ವ್ಯವಸ್ಥೆ

0
497

ಸನ್ಮಾರ್ಗ ವಾರ್ತೆ

ವಿಶೇಷ ಬೆಳವಣಿಗೆಯೊಂದರಲ್ಲಿ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ವಿಶೇಷ ಚೇತನರಿಗೆ ಮತ್ತು ಹಿರಿಯರಿಗೆ ಪ್ರತ್ಯೇಕ ದಾರಿಯನ್ನು ಮಾಡಲಾಗಿದೆ.

ಸಾಮಾನ್ಯವಾಗಿ ವಿಶೇಷ ಚೇತನರು ಮತ್ತು ಹಿರಿಯರು ಮಸ್ಜಿದುಲ್ ಹರಾಮ್ ನಲ್ಲಿ ನಡೆದಾಡಲು ತೊಂದರೆ ಪಡುತ್ತಿದ್ದರು. ಇತರರ ನಡುವೆ ದಾರಿ ಮಾಡಿಕೊಂಡು ಹೋಗುವ ಸವಾಲನ್ನು ಎದುರಿಸುತ್ತಿದ್ದರು. ಇದೀಗ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಮಸ್ಜಿದುಲ್ ಹರಾಮ್ ಆಡಳಿತ ಮಂಡಳಿ ನಿರ್ಧರಿಸಿದೆ.

ಮುಖ್ಯವಾಗಿ ಅತ್ಯಂತ ಜನನಿಬಿಡ ಸಮಯದಲ್ಲಿ ವಿಶೇಷ ಚೇತನರು ಮತ್ತು ಹಿರಿಯರನ್ನು ಸುಲಭವಾಗಿ ಮಸ್ಜಿದುಲ್ ಹರಾಮ್ ಪ್ರವೇಶಿಸುವುದಕ್ಕೆ ಇದು ಅವಕಾಶ ಒದಗಿಸಿ ಕೊಡಲಿದೆ. ಈ ಬಗ್ಗೆ ಗಮನಹರಿಸುವುದಕ್ಕೆ ಪೂರ್ಣ ವ್ಯವಸ್ಥೆಯನ್ನು ಮಾಡಲಾಗಿದೆ.

ಮಸ್ಜಿದುಲ್ ಹರಾಮ್ ಪ್ರತಿ ವರ್ಷ ಕೋಟ್ಯಾಂತರ ಮಂದಿ ಭೇಟಿ ನೀಡುತ್ತಿದ್ದು ಇವರಲ್ಲಿ ಹಿರಿಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತವಾಫ್ ಮಾಡುವಾಗಲೂ ಈ ಸಮಸ್ಯೆ ಎದುರಾಗುತ್ತದೆ. ಹಿರಿಯರಿಗೆ ಆರಾಮವಾಗಿ ತವಾಫ್ ಮಾಡುವುದಕ್ಕೂ ಕಷ್ಟವಾಗುತ್ತದೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಇದೀಗ ಹಿರಿಯರು ಮತ್ತು ವಿಶೇಷ ಚೇತನರಿಗೆ ಪ್ರತ್ಯೇಕ ದಾರಿಯ ವ್ಯವಸ್ಥೆಯನ್ನು ಮಾಡಲಾಗಿದೆ.