ತ್ರಿಪುರಾದ ಮಸೀದಿಯೊಳಗೆ ಮದ್ಯದ ಬಾಟಲಿಯನ್ನು ಇಟ್ಟು ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳು

0
411

ಸನ್ಮಾರ್ಗ ವಾರ್ತೆ

ತ್ರಿಪುರಾದ ಮೈನಾಮ ಜುಮಾ ಮಸೀದಿಯನ್ನು ಅಪವಿತ್ರ ಗೊಳಿಸಲು ಮತ್ತು ಮಸೀದಿಯ ಒಂದು ಭಾಗವನ್ನು ಬೆಂಕಿ ಕೊಟ್ಟು ಸುಡಲು ಡಿಸೆಂಬರ್ 24ರಂದು ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಮಸೀದಿಯ ಒಳಗಡೆ ಮಧ್ಯದ ಬಾಟಲಿಗಳನ್ನು ಇಟ್ಟಿರುವುದು ಕೂಡ ಬಯಲಾಗಿದೆ. ಸ್ಥಳೀಯವಾಗಿ ಗಲಭೆ ಎಬ್ಬಿಸಲು ಈ ಪ್ರಯತ್ನ ನಡೆಸಲಾಗಿದೆ ಎಂದು ಅನುಮಾನ ಪಡಲಾಗಿದೆ. ಈ ಬಗ್ಗೆ ಮಕ್ತೂಬ್ ಮೀಡಿಯಾ ವಿಸ್ತೃತ ವರದಿಯನ್ನು ಮಾಡಿದೆ.

ಇಮಾಮರು ಮಸೀದಿ ಪ್ರವೇಶಿಸಿದಾಗ ಮದ್ಯದ ಬಾಟಲಿಗಳು ಇರುವುದನ್ನು ಗಮನಿಸಿದರು. ಹಾಗೆಯೇ ಕೈಯಲ್ಲಿ ಬರೆದ ಬೆದರಿಕೆ ಪತ್ರವೂ ಕೂಡ ಮಸೀದಿಯ ಒಳಗಡೆ ಇತ್ತು.

ಇದು ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಮುಂದಿನ ಬಾರಿ ಇದಕ್ಕಿಂತಲೂ ದೊಡ್ಡದಾದ ಘಟನೆ ಸಂಭವಿಸಲಿದೆ ಎಂದು ಈ ಪತ್ರದಲ್ಲಿ ಬರೆಯಲಾಗಿದ್ದು ಜೈ ಶ್ರೀ ರಾಮ್ ಎಂದು ಕೂಡ ಬರೆಯಲಾಗಿದೆ.

ಇದು ಭಯವನ್ನು ಹಬ್ಬಿಸುವ ವ್ಯವಸ್ಥಿತ ಪ್ರಯತ್ನ ಎಂದು ಮಸೀದಿ ಇಮಾಮ್ ಹೇಳಿದ್ದಾರೆ.

ಈ ಪ್ರದೇಶದಲ್ಲಿ ಕ್ರೈಸ್ತರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಆ ಬಳಿಕ ಬೌದ್ಧರ ಜನಸಂಖ್ಯೆ ಇದೆ , ಮುಸ್ಲಿಮರು ತೀರ ಕಡಿಮೆ ಇದ್ದಾರೆ. ಹಿಂದುಗಳು ಇದ್ದಾರೆ.

ನಾವೆಲ್ಲ ಅನ್ಯೋನ್ಯತೆಯಿಂದ ಬದುಕುತ್ತಿದ್ದೇವೆ ಎಂದು ಮಸೀದಿ ಇಮಾಮರು ಹೇಳಿದ್ದಾರೆ.