ಹೆಚ್ಚುತ್ತಿರುವ ಕೋಮು ಧ್ರುವೀಕರಣ: ಜಮಾಅತೆ ಇಸ್ಲಾಮಿ ಹಿಂದ್ ಕಳವಳ

0
708

ಸನ್ಮಾರ್ಗ ವಾರ್ತೆ

ದೇಶದಲ್ಲಿ ಕೋಮು ಧ್ರುವೀಕರಣ ಹೆಚ್ಚಾಗುತ್ತಿರುವುದು ಚಳಿಯ ವಾತಾವರಣದಿಂದಾಗಿ ಬಡವರು ಕಷ್ಟ ಅನುಭವಿಸುತ್ತಿರುವುದು ಮತ್ತು ಅಲ್ಪಸಂಖ್ಯಾತರನ್ನು ಗುರಿ ಮಾಡಿ ನಡೆಸುತ್ತಿರುವ ಹಲ್ಲೆಗಳ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್ ತೀವ್ರ ಆತಂಕ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊಫೆಸರ್ ಸಲೀಂ ಇಂಜಿನಿಯರ್ ಈ ಬಗ್ಗೆ ತೀವ್ರ ಕಲಾವಲ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತರ ಮೇಲೆ ನಡೆಯುವ ಹಿಂಸೆ ಮತ್ತು ದಾಳಿಗಳಲ್ಲಿ 2025ರಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹಾಗೆಯೇ ಹತ್ಯೆಗಳಲ್ಲಿಯೂ ಹೆಚ್ಚಳವಾಗಿದೆ. ದ್ವೇಷ ಭಾಷಣಗಳು ಹೆಚ್ಚಾಗಿವೆ, ಹಾಗೆಯೇ ಬಲವಂತದಿಂದ ಬಾಂಗ್ಲಾದೇಶಕ್ಕೆ ಅಟ್ಟುವ ಕೃತ್ಯಗಳಲ್ಲಿಯೂ ಹೆಚ್ಚಳವಾಗಿದೆ. ದೆಹಲಿ ಬಾಂಬು ಸ್ಫೋಟದ ಬಳಿಕ ಮುಸ್ಲಿಮರ ಮೇಲಿನ ಹಿಂಸಾಚಾರದಲ್ಲಿ ತೀವ್ರತೆ ಉಂಟಾಗಿದ್ದು ಗೋ ಹತ್ಯೆಯ ಹೆಸರಲ್ಲೂ ಮುಸ್ಲಿಮರ ಮೇಲೆ ದಾಳಿಗಳು ನಡೆದಿವೆ ಎಂದು ಇಂಜಿನಿಯರ್ ಹೇಳಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಮಾಲಿಕ್ ಮುಹತಸಿಮ್ ಖಾನ್ ಅವರು ಕ್ರೈಸ್ತರ ಮೇಲೆ ನಡೆದಿರುವ ದಾಳಿ ಯ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. 2026 ನೇ ಇಸವಿಯು ಕೋಮು ಘರ್ಷಣೆಗಳಿಲ್ಲದ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅನ್ಯಾಯಗಳು ಆಗದ ಇಸವಿಯಾಗಿ ಮಾರ್ಪಡಲಿ ಎಂದವರು ಹಾರೈಸಿದ್ದಾರೆ.