ಸನ್ಮಾರ್ಗ ವಾರ್ತೆ
ನೀವು ಸೌದಿ ಅರೇಬಿಯಾದಲ್ಲಿ ಇದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ.
ಸೌದಿ ಅರೇಬಿಯಾದಲ್ಲಿ ಮುಂಚಿತವಾಗಿ ಅನುಮತಿ ಪಡೆಯದೆ ವಾಹನಗಳಲ್ಲಿ ಸ್ಟಿಕ್ಕರ್ಗಳನ್ನೋ ಜಾಹೀರಾತುಗಳನ್ನೋ ಅಂಟಿಸಿದರೆ ಭಾರಿ ದಂಡವನ್ನು ತೆರ ಬೇಕಾಗಬಹುದು. ಇತ್ತೀಚಿನ ದಿನಗಳಲ್ಲಿ ರಿಯಾದ್ ನಲ್ಲಿ ಅನೇಕ ಮಂದಿ ಈ ತಪ್ಪಿಗಾಗಿ ಬಾರಿ ದಂಡವನ್ನು ತೆತ್ತಿದ್ದಾರೆ. ಟ್ರಾಫಿಕ್ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ , ಸ್ಟಿಕ್ಕರ್ ತೆರವುಗೊಳಿಸಲು ಹೇಳುತ್ತಾರಲ್ಲದೆ ದಂಡವನ್ನೂ ವಿಧಿಸುತ್ತಿದ್ದಾರೆ.
ನೂರು ರಿಯಾಲ್‌ನಿಂದ ಸಾವಿರ ರಿಯಾಲ್ ವರೆಗೆ ದಂಡ ವಿಧಿಸಲಾಗುವುದು ಎಂದು ಸೌದಿ ಅರೇಬಿಯಾ ತಿಳಿಸಿದೆ.
ಸ್ಟಿಕರ್ ಅಂಟಿಸುವುದಕ್ಕೆ ಮತ್ತು ವಾಹನದ ಸ್ವರೂಪದಲ್ಲಿ ಬದಲಾವಣೆ ತರುವುದಕ್ಕಿಂತ ಮೊದಲು ಸಂಬಂಧಿತ ಇಲಾಖೆಯ ಅನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ.
ಅನಧಿಕೃತವಾಗಿ ಸ್ಟಿಕ್ಕರ್‌ಗಳನ್ನು ಅಂಟಿಸಿದರೆ ದಂಡದ ಹೊರತಾಗಿ ವಾರ್ಷಿಕ ವಾಹನ ಪರಿಶೀಲನೆ ಅಥವಾ ಫಹಸ್‌ನಲ್ಲಿ ಅನುತ್ತೀರ್ಣವಾಗುವುದಕ್ಕೂ ಅವಕಾಶ ಇದೆ. ಆದ್ದರಿಂದ ವಾಹನ ಮಾಲೀಕರು ಈ ಬಗ್ಗೆ ಗಂಭೀರವಾಗಿರಬೇಕು ಎಂದು ಎಚ್ಚರಿಸಲಾಗಿದೆ.












