ಹೆತ್ತವರ ನಿರ್ಲಕ್ಷ : ಮಕ್ಕಳ ವೇತನದಿಂದ ಹಣ ಮುರಿದು ಹೆತ್ತವರ ಅಕೌಂಟಿಗೆ ವರ್ಗಾವಣೆ

0
315

ಸನ್ಮಾರ್ಗ ವಾರ್ತೆ

ಹೆತ್ತವರನ್ನು ಆರೈಕೆ ಮಾಡದ ಮಕ್ಕಳು ಸರಕಾರಿ ಉದ್ಯೋಗದಲ್ಲಿದ್ದರೆ ಅವರ ವೇತನದಿಂದ ಪ್ರತಿ ತಿಂಗಳು 10 ಶೇಕಡ ಹಣವನ್ನು ಅವರ ಹೆತ್ತವರ ಅಕೌಂಟಿಗೆ ವರ್ಗಾಯಿಸಲಾಗುವುದು ಎಂದು ತೆಲಂಗಾಣದ ಮುಖ್ಯಮಂತ್ರಿ ಹೇಳಿದ್ದಾರೆ.

ವೃದ್ಧ ಹೆತ್ತವರು ತಮ್ಮ ಮಕ್ಕಳ ಬಗ್ಗೆ ದೂರು ನೀಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಆ ಬಗ್ಗೆ ಪರಿಶೀಲನೆ ನಡೆಸಬೇಕು ಮಾತ್ರ ಅಲ್ಲ ಅವರ ಮಕ್ಕಳು ಸರಕಾರಿ ಉದ್ಯೋಗದಲ್ಲಿ ಇದ್ದರೆ ಅವರ ವೇತನದಿಂದ ಹತ್ತು ಶೇಕಡ ಹಣವನ್ನು ವೃದ್ಧರ ಬ್ಯಾಂಕ್ ಅಕೌಂಟ್ ಗೆ ವರ್ಗಾಯಿಸ ಬೇಕು ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದಾರೆ.

ವೃದ್ಧ ಹೆತ್ತವರನ್ನು ಅನಾಗರಿಕವಾಗಿ ನಡೆಸಿಕೊಳ್ಳುವ ಮಕ್ಕಳ ಸುದ್ದಿಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದರ ನಡುವೆಯೇ ತೆಲಂಗಾಣ ಸರಕಾರದಿಂದ ಈ ಐತಿಹಾಸಿಕ ನಿರ್ಧಾರ ಬಹಿರಂಗವಾಗಿದೆ.