ಸನ್ಮಾರ್ಗ ವಾರ್ತೆ
ಉಮರ್ ಖಾಲಿದ್ ಮತ್ತು ಷರ್ಜಿಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿರುವ ಸುಪ್ರೀಂ ಕೋರ್ಟ್ ನ ತೀರ್ಪಿನ ಬಗ್ಗೆ ನಿವೃತ್ತ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿವೃತ್ತ ನ್ಯಾಯಾಧೀಶರಾದ ಮದನ್ ಬಿ ಲೋಕುರ್ ಮತ್ತು ಜಸ್ಟೀಸ್ ಸುಧಾಂಶ ದುಲಿಯ ಎಂಬುವರು ತೀರ್ಪಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಉಮರ್ ಖಾಲಿದ್ ಅವರ ಪರ ವಾದಿಸಿದ್ದ ಕಪಿಲ್ ಸಿಬಲ್ ಅವರ ಟಾಕ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಇಬ್ಬರು ನ್ಯಾಯಾಧೀಶರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಮರ್ ಖಾಲಿದ್ ಅವರ ದೀರ್ಘ ಜೈಲುವಾಸವನ್ನು ಪರಿಗಣಿಸದೆ ನೀಡಲಾದ ಈ ವಿಧಿ ಸರಿಯಲ್ಲ ಎಂದು ಜಸ್ಟಿಸ್ ಲೋಕುರ್ ಹೇಳಿದರು. 2020 ರಲ್ಲಿ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಜೈಲು ಪಾಲಾಗಿದ್ದಾರೆ. ಆದರೆ ಕ್ರಿಮಿನಲ್ ಪ್ರಕ್ರಿಯೆಯ ನಿಯಮದ ಸೆಕ್ಷನ್ 207ರ ಪ್ರಕಾರ ಮೂರು ವರ್ಷಗಳ ಬಳಿಕ ಇವರಿಗೆ ಪ್ರೋಸಿಕ್ಯೂಷನ್ ಸಾಮಗ್ರಿಗಳನ್ನು ಒದಗಿಸಲಾಗಿದೆ. ಈ ತೀರ್ಪಿನ ವಿಷಯದಲ್ಲಿ ತಾನು ಸಂತುಷ್ಟ ನಲ್ಲ. ಈ ತೀರ್ಪು ಸಂಪೂರ್ಣ ತಪ್ಪಾಗಿದೆ. ಎಂದು ಲೋ ಕುರ್ ಹೇಳಿದ್ದಾರೆ. ಪ್ರಾಸಿಕ್ಯೂಷನ್ ಸಾಮಗ್ರಿಗಳನ್ನು ಮೂರು ವರ್ಷಗಳ ಕಾಲ ಅವರಿಗೆ ಒದಗಿಸದೆ ಇರುವುದಕ್ಕೆ ಅವರು ಹೇಗೆ ತಪ್ಪಿತಸ್ಥರಾಗುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಅವರು ಮಾಡಿರುವ ತಪ್ಪೇನು? ಕೆಲವು ಸಭೆಗಳಲ್ಲಿ ಭಾಗಿಯಾಗಿದ್ದಾರೆ. ವಾಟ್ಸಪ್ ಗ್ರೂಪುಗಳನ್ನು ರಚಿಸಿದ್ದಾರೆ. ಭಾಷಣ ಮಾಡಿದ್ದಾರೆ.ಬರಹಗಳನ್ನು ಬರೆದಿದ್ದಾರೆ.ಇದು ಭಯೋತ್ಪಾದನೆಯೇ ಎಂದು ಲೋಕುರ್ ರ್ ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರು ಮೊದಲು ತೀರ್ಮಾನ ಮಾಡುತ್ತಾರೆ ಮತ್ತು ಆ ಬಳಿಕ ಅದಕ್ಕೆ ಅವರು ಕಾರಣಗಳನ್ನು ಸೃಷ್ಟಿಸುತ್ತಾರೆ ಎಂದು ಖ್ಯಾತ ನ್ಯಾಯವಾದಿ ದುಷ್ಯಂತ್ ದವೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡುತ್ತಾ ಹೇಳಿದ್ದಾರೆ.












