ಹೊಸದಿಲ್ಲಿ, ಜು.1: ಭಾರತದ ಕ್ರಿಕೆಟ್ ತಂಡದ ಜರ್ಸಿಯ ಬಣ್ಣದಲ್ಲಿ ಬದಲಾವಣೆ ಮಾಡಿದುದು ತಂಡದ ನಿರಂತರ ಗೆಲುವಿಗೆ ತಡೆಯಾಯಿತು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಟ್ವೀಟ್ ಮಾಡಿ ಟೀಕಿಸಿದ್ದಾರೆ. ನನ್ನನ್ನು ಅಂಧವಿಶ್ವಾಸಿಯೆಂದು ಕರೆಯಿರಿ. ಆದರೆ ಭಾರತದ ಗೆಲುವಿನ ಬಯಕೆಯನ್ನು ಹೊಸ ಜರ್ಸಿ ಇಲ್ಲದಾಗಿಸಿದೆ ಎಂದು ಮೆಹಬೂಬ ಟ್ವೀಟ್ ಮಾಡಿ ಹೇಳಿದರು.
ಭಾರತ ತಂಡದ ಕೇಸರಿ ಜರ್ಸಿಯನ್ನು ಕ್ರಿಕೆಟಿನ ಕೇಸರಿಕರಣವೆಂದು ಕರೆದು ಈ ಮೊದಲು ವ್ಯಾಪಕ ಟೀಕೆ ವ್ಯಕ್ತಪಡಿಸಲಾಗಿತ್ತು. ಭಾರತವು ಇಂಗ್ಲೆಂಡ್ ವಿರುದ್ಧ ಆರೆಂಜ್ ಜರ್ಸಿಯಲ್ಲಿ ಅಂಗಣಕ್ಕಿಳಿದು ಆಡಿತ್ತು. ಮಾತ್ರವಲ್ಲ, ಇಂಗ್ಲೆಂಡ್ ವಿರುದ್ಧ 31 ರನ್ ಗಳ ಸೋಲಿಗೂ ಗುರಿಯಾಯಿತು. ಇಂಗ್ಲೆಂಡಿನ ಜರ್ಸಿ ಆಗಿದ್ದುದರಿಂದ ಆಗಿದ್ದರಿಂದ ಭಾರತಕ್ಕೆ ಐಸಿಸಿ ನಿಬಂಧನೆ ಪ್ರಕಾರ ಎರಡನೆ ಜರ್ಸಿಯಲ್ಲಿ ಅಂಗಣಕ್ಕಿಳಿಯುವುದು ಅನಿವಾರ್ಯವಾಗಿತ್ತು.












