ಗುಂಪು ಹತ್ಯೆ ನಡೆಯುತ್ತಿಲ್ಲ: ಅದು ಸಂಘಪರಿವಾರ ಅಜೆಂಡಾ- ಉವೈಸಿ

0
1069

ಹೊಸದಿಲ್ಲಿ, ಜು. 1: ಮುಸ್ಲಿಮರು ಮತ್ತು ದಲಿತರ ವಿರುದ್ಧ ಹಲವು ಕಡೆ ನಡೆಯುತ್ತಿರುವ ಗುಂಪು ದಾಳಿಗಳ ಹಿಂದೆ ಸಂಘಪರಿವಾರದ ಅಜೆಂಡಾ ಇದೆ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸದುದ್ದೀನ್ ಉವೈಸಿ ಹೇಳಿದರು. ಬಿಜೆಪಿ ಮತ್ತು ಆರೆಸ್ಸೆಸ್ ದ್ವೇಷದ ರಾಜಕೀಯವನ್ನು ಪ್ರಚಾರ ಮಾಡುತ್ತಿರುವವರೆಗೆ ಜನರ ಗುಂಪು ದಾಳಿ ನಿಲ್ಲದು ಎಂದು ಅವರು ಹೇಳಿದರು. ಜೈಶ್ರೀರಾಂ, ವಂದೇಮಾತರಂ ಹೇಳದಿದ್ದರೆ ಜನರು ಹೊಡೆಯುತ್ತಿದ್ದಾರೆ. ದಲಿತರೂ ಇಂತಹ ದಾಳಿಗೊಳಗಾಗುತ್ತಿದ್ದಾರೆ. ಇದರ ಹಿಂದೆ ಕೆಲವು ಸಂಘಟನೆಗಳಿವೆ. ಅವರಿಗೆ ಸಂಘಪರಿವಾರದೊಂದಿಗೆ ಸಂಬಂಧ ಇದೆ.

ಝಾರ್ಖಂಡ್ ನಲ್ಲಿ ಯುವಕನಿಗೆ ಹೊಡೆದು ಕೊಂದದ್ದು ಒಂದು ಮಾದರಿಯಾಗಿ ತೆಗೆದುಕೊಳ್ಳಲಾಗಿದೆ. ಇದೇ ಮಾದರಿಯ ಹಿಂಸೆ ಮುಂದುವರಿಯುತ್ತಿದೆ. ದನದ ಮಾಂಸ ಕೈವಶ ಇರಿಸಿಕೊಂಡಿದ್ದಾರೆ ಎಂದು, ಕಳ್ಳರೆಂದು, ಲವ್‍ಜಿಹಾದ್ ಎಂದು ಜನರ ಗುಂಪು ಹೊಡೆದು ಕೊಲ್ಲುತ್ತಿದೆ. ಮುಸ್ಲಿಮರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ದನವನ್ನು ಹತ್ಯೆ ಮಾಡುವವರು ಎಂದು ಸಾರ್ವತ್ರಿಕ ಪ್ರಜ್ಞೆಯನ್ನು ಸಂಘಪರಿವಾರ ಸೃಷ್ಟಿಸಿಬಿಟ್ಟಿದ್ದು ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಕಾಲದವರೆಗೆ ದಾಳಿ ಮುಂದುವರಿಯಲಿದೆ ಎಂದು ಉವೈಸಿ ಕಳೆದ ವಾರ ಹೇಳಿದ್ದರು. ಝಾರ್ಖಂಡ್ ದಾಳಿಯ ಬಳಿಕ ಥಾಣೆಯಲ್ಲಿ ಮುಸ್ಲಿಂ ಕಾರು ಚಾಲಕನಿಗೆ ಜೈಶ್ರೀರಾಂ ಕೂಗಲು ಹೇಳಿ ದಾಳಿ ನಡೆಯಿತು. ಶುಕ್ರವಾರ ಪರಂಪರಾಗತ ಟೋಪಿ ಧರಿಸಿದ ಕಾನ್ಪುರದ ಹದಿನಾರು ವರ್ಷದ ಬಾಲಕನಿಗೆ ತಂಡವೊಂದು ಹಲ್ಲೆ ನಡೆಸಿತು ಎಂದು ಉವೈಸಿ ಹೇಳಿದರು.