ಕಾಂಗ್ರೆಸ್, ಕಮ್ಯುನಿಸ್ಟರ ಜೊತೆ ಸೇರಿ ಚುನಾವಣೆ ಸ್ಪರ್ಧಿಸಲು ತೃಣಮೂಲ ಕಾಂಗ್ರೆಸ್‍ ಸಿದ್ಧತೆ

0
499

ಕೊಲ್ಕತಾ,ಜು.3: ಪಶ್ಚಿಮ ಬಂಗಾಳದಲ್ಲಿ ಕೋಮು ಸೌಹಾರ್ದವನ್ನು ಉಳಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್, ಕಮ್ಯೂನಿಸ್ಟರು ಮತ್ತು ಕಾಂಗ್ರೆಸ್‍ನ ಸಹಾಯವನ್ನು ಬಯಸುತ್ತಿದೆ ಮತ್ತು ಕೋಮು ಸೌಹಾರ್ದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ವಿಧಾನಸಭೆಯಲ್ಲಿ ಮಂಡಿಸಲು ಅದು ನಿರ್ಧರಿಸಿದ್ದು ಇದನ್ನು ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದೆ.

ರಾಜ್ಯದಲ್ಲಿ ಕೋಮು ಸೌಹಾರ್ದ ರಕ್ಷಿಸುವ ಕುರಿತು ಚರ್ಚೆಗೆ ವಿಧಾನಸಭೆಯಲ್ಲಿ ಪ್ರಸ್ತಾವ ಮಂಡಿಸಲು ತಯಾರಿ ನಡೆದಿದೆ. ಸೋಮವಾರ ಸಂಸದೀಯ ಕಾರ್ಯ ಸಚಿವ ಪಾರ್ಥ ಚಟರ್ಜಿ ಈ ಪ್ರಸ್ತಾವವನ್ನು ಮಂಡಿಸಿದ್ದರು. ಇದರಲ್ಲಿ ಎಡಪಂಥೀಯರು ಮತ್ತು ಕಾಂಗ್ರೆಸನ್ನು ಸೇರಿಸುವ ಇಂಗಿತವನ್ನೂ ವ್ಯಕ್ತಪಡಿಸಲಾಗಿತ್ತು. ಇದೇ ವೇಳೆ ಸಂಸದೀಯ ರಾಜ್ಯ ಸಚಿವ ತಾಪಸ್ ರಾಯ್ ಸದನದಲ್ಲಿ ಅನುಚ್ಛೇದ 85ರ ಪ್ರಕಾರ ಕೋಮುವಾದವನ್ನು ತಡೆಯುವ ಕುರಿತು ಒಂದು ವಿಷಯ ಸೂಚಿಯನ್ನು ತಯಾರಿಸಿದ್ದಾರೆ. ಇದನ್ನು ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‍ಗೆ ನೀಡಲಾಗಿದೆ. ಆದರೆ ಇದರಲ್ಲಿರು ಕೆಲವು ವಿಷಯಗಳಲ್ಲಿ ಅಸಹಮತವೂ ವ್ಯಕ್ತವಾಗಿದೆ.