ಗಾಝಾದ ಪುನರ್ ನಿರ್ಮಾಣಕ್ಕಾಗಿ 120 ಕೋಟಿ ಡಾಲರ್ ಘೋಷಿಸಿದ ಯುಎಇ

0
349

ಸನ್ಮಾರ್ಗ ವಾರ್ತೆ

ಗಾಝಾದ ಪುನರ್ ನಿರ್ಮಾಣಕ್ಕಾಗಿ 120 ಕೋಟಿ ಡಾಲರ್ ನೀಡುವುದಾಗಿ ಯುಎಇ ಘೋಷಿಸಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ನಡೆದ ಬೋರ್ಡ್ ಆಫ್ ಪೀಸ್ ನ ಮೊದಲ ಸಭೆಯಲ್ಲಿ ವಿದೇಶಾಂಗ ಸಚಿವ ಶೇಕ್ ಅಬ್ದುಲ್ಲಾ ಬಿನ್ ಝಾಯಿದ್ ಅವರು ಈ ಘೋಷಣೆ ಮಾಡಿದ್ದಾರೆ.

ಯುಎಇ ಈಗಾಗಲೇ ಮುನ್ನೂರು ಕೋಟಿ ಡಾಲರ್ ನ ಸಹಾಯವನ್ನು ನೀಡಿದೆ. ಈಗ ನೀಡುತ್ತಿರುವ 120 ಕೋಟಿ ಡಾಲರ್ ಮೊತ್ತವು ಅದಕ್ಕಿಂತ ಹೊರತಾದದ್ದಾಗಿದೆ.

ಬೋರ್ಡ್ ಆಫ್ ಪೀಸ್ ನ ಮೂಲಕ ಗಾಝಾದ ಪುನರ್ ನಿರ್ಮಾಣಕ್ಕೆ ಮತ್ತು ಮಾನವೀಯ ಕೆಲಸದ ಉದ್ದೇಶಕ್ಕಾಗಿ ಈ ಮೊತ್ತವನ್ನು ನೀಡಲಾಗುತ್ತಾ ಇದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಈ ಸಭೆಯಲ್ಲಿ ಸೌದಿ ಅರೇಬಿಯಾ ಕತಾರ್ ಕುವೈಟ್ ಮುಂತಾದ ಅರಬ್ ರಾಷ್ಟ್ರಗಳು ಭಾಗಿಯಾಗಿದ್ದುವು ಮತ್ತು ತಲಾ ಒಂದೊಂದು ಬಿಲಿಯನ್ ಡಾಲರ್ ನೆರವನ್ನು ಘೋಷಿಸಿದವು.