ದೇಶದಲ್ಲಿ 16 ಕೋಟಿಗೂ ಅಧಿಕ ಮಾದಕ ವ್ಯಸನಿಗಳು!

0
600

ಹೊಸದಿಲ್ಲಿ,ಜು.5: ಭಾರತದಲ್ಲಿ ಅತಿ ಹೆಚ್ಚು ಮಂದಿ ಮದ್ಯವನ್ನು ಬಳಸುತ್ತಿದ್ದಾರೆ. ನಂತರದ ಸ್ಥಾನವನ್ನು ಗಾಂಜಾ ಹೊಂದಿದೆ. ಜೊತೆಗೆ ಮತ್ತೇರಿಸುವ ಮಾತ್ರೆಗಳು ಬಳಕೆಯಾಗುತ್ತಿವೆ. ದೇಶದಲ್ಲಿ ಹದಿನಾರು ಕೋಟಿಗೂ ಹೆಚ್ಚು ಮಂದಿ ಮದ್ಯ ಉಪಯೋಗಿಸುತ್ತಿದ್ದಾರೆ ಎಂದು ಸಾಮಾಜಿಕ ನ್ಯಾಯ, ಸಶಕ್ತೀಕರಣ ಸಚಿವ ತಾವರ್ ಚಂದ್ ಗೆಹ್ಲೋಟ್ ರಾಜ್ಯಸಭೆಗೆ ತಿಳಿಸಿದ್ದಾರೆ. ಬಿಜೆಪಿ ಸಂಸದ ಆರ್‌.ಕೆ.ಸಿನ್ಹಾರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

3.1 ಕೋಟಿ ಮಂದಿ ಗಾಂಜಾ ಸೇವಿಸುತ್ತಾರೆ. ಮಾದಕವಸ್ತು ಮಾತ್ರೆಗಳನ್ನು 77 ಲಕ್ಷ ಮಂದಿ ಉಪಯೋಗಿಸುತ್ತಾರೆ. ಮದ್ಯವನ್ನು 5.7 ಕೋಟಿಗೂ ಹೆಚ್ಚು ಮಂದಿ ಉಪಯೋಗಿಸುತ್ತಾರೆ. ಈ ಸಾಲಿಗೆ ಗಾಂಜಾ ಸೇವಿಸುವವರು ಬರುತ್ತಾರೆ. ಮಾದಕವಸ್ತು ಮಾತ್ರೆಯನ್ನು ಉಪಯೋಗಿಸುವ 77 ಲಕ್ಷ ಮಂದಿಯನ್ನು ವ್ಯಸನಿಗಳೆಂದು ಲೆಕ್ಕಹಾಕಲಾಗಿದೆ. ಇವರಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ.

2018ರಲ್ಲಿ ಸಾಮಾಜಿಕ ನ್ಯಾಯ ಸಚಿವಾಲಯ ಇಡೀ ದೇಶದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ವಿವರ ಬಹಿರಂಗಗೊಂಡಿದ್ದು 10 ವರ್ಷದಿಂದ 75 ವರ್ಷ ವರೆಗಿನ 1.18 ಕೋಟಿ ಮಂದಿ ವಿವಿಧ ರೀತಿಯ ಮಾದಕವಸ್ತು ದಾಸರಾಗಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕವಸ್ತು ಉಪಯೋಗಿಸುವುದನ್ನು ಗುರುತಿಸಲು ಹತ್ತು ನಗರಗಳಲ್ಲಿ ಸರಕಾರ ಸಮೀಕ್ಷೆ ನಡೆಸುತ್ತಿದ್ದು ನವೆಂಬರ್‍‌ನಲ್ಲಿ ವಿವರ ದೊರಕಲಿದೆ. ಮಾದಕವಸ್ತು ಬಳಕೆ ಕಡಿಮೆಗೊಳಿಸಲು 2018-2025 ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಇದರಲ್ಲಿ ದೇಶದ ಅತೀ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ 127 ಜಿಲ್ಲೆಗಳಲ್ಲಿ ವಿಶೇಷ ಯೋಜನೆಯನ್ನು ಆವಿಷ್ಕರಿಸಲಾಗುವುದು ಮುಂದಿನ ಆರ್ಥಿಕ ವರ್ಷದಲ್ಲಿ ಇದಕ್ಕಾಗಿ 135 ಕೋಟಿ ರೂಪಾಯಿ ಮೀಸಲಿರಿಸಲಾಗುವುದು.