ಮಂಗಳೂರು: ಚೂರಿ ಇರಿತಕ್ಕೊಳಗಾದ ದೀಕ್ಷಾ ಆರೋಗ್ಯದಲ್ಲಿ ಚೇತರಿಕೆ

0
739

ಮಂಗಳೂರು, ಜೂ 05: ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ವಿದ್ಯಾರ್ಥಿನಿ ದೀಕ್ಷಾಳಿಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ್ದ ಆರೋಪಿ ಸುಶಾಂತ್ ತನ್ನ ಕೃತ್ಯದ ಬಗ್ಗೆ ಪೊಲೀಸರೊಂದಿಗೆ ಬಾಯಿ ಬಿಟ್ಟಿರುವನೆಂದು ಮಾಹಿತಿಯಿದ್ದು, ಚೂರಿ ಇರಿದ ದಿನ ತಾನು ಯಾವುದೇ ಮಾದಕ ದ್ರವ್ಯ ಸೇವಿಸಿರಲಿಲ್ಲ., ಆಕೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದೆ ಹೋದುದರಿಂದ ಹತಾಶನಾಗಿ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಇದೇವೇಳೆ, ದೀಕ್ಷಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆಕೆಯ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡುಬರುತ್ತಿದೆ ಎಂದು ವರದಿಗಳಿವೆ.

ವೈದ್ಯರ ಸಲಹೆ ಮೇರೆಗೆ ದೀಕ್ಷಾಳಿಗೆ ಸ್ವಲ್ಪ ನೀರು ಕುಡಿಸಲಾಗಿದ್ದು, ಆಕೆಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಸಂಪರ್ಕವನ್ನು ತೆಗೆಯಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಗುರುವಾರದಂಡು ದಾದಿಯರ ಮಾತಿಗೆ ಸ್ಪಂದಿಸಿ ಮಾತನಾಡುವ ಪ್ರಯತ್ನ ಮಾಡಿದ್ದು, ಇದು ಕುಟುಂಬಸ್ಥರಲ್ಲಿ ನೆಮ್ಮದಿ ಮೂಡಿಸಿದೆ.

”