ಸನ್ಮಾರ್ಗ ವಾರ್ತೆ
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಹತ್ಯೆಯಾಗಿದೆ ಎಂಬ ಊಹಾಪೋಹಗಳ ನಡುವೆ ಇದೀಗ ಬಿಡುಗಡೆಗೊಂಡಿರುವ ಅವರ ವಿಡಿಯೋ ಈ ಊಹಾಪೋಹವನ್ನು ಇನ್ನಷ್ಟು ಪುಷ್ಟಿಕರಿಸಿದೆ. ದೇಶವನ್ನು ಉದ್ದೇಶಿಸಿ ಅವರು ಆಡಿರುವರೆಂದು ಹೇಳಲಾದ ವಿಡಿಯೋ ಬಿಡುಗಡೆಗೊಂಡಿದ್ದು ಅದರಲ್ಲಿ ಅವರ ಕೈಗೆ ಆರು ಬೆರಳುಗಳಿರುವುದು ಗೊತ್ತಾಗಿದೆ. ಇದು ನಿಜವಾದ ವಿಡಿಯೋ ಅಲ್ಲ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಮಾಡಲಾದ ವಿಡಿಯೋ ಆಗಿದೆ ಎಂದು ಹೇಳಲಾಗುತ್ತಿದ್ದು ಅವರು ಹತ್ಯೆಗೀಡಾಗಿದ್ದಾರೆ ಎಂಬ ವಾದಕ್ಕೆ ಮತ್ತಷ್ಟು ಬಲ ಬಂದಿದೆ. ಅವರು ಸಾವಿಗೀಡಾಗಿದ್ದು ಇಸ್ರೇಲನ್ನು ಎದೆಗುಂದದಂತೆ ನೋಡಿಕೊಳ್ಳುವುದಕ್ಕಾಗಿ ಎಐ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ.
ನೆತನ್ಯಾಹು ಅವರ ವಿಡಿಯೋವನ್ನು ಅನೇಕರು ಪರಿಶೀಲನೆಗೆ ಒಡ್ಡಿದ್ದು ಅದರಲ್ಲಿ ಆರು ಬೆರಳುಗಳಿರುವುದು ದೃಢಪಟ್ಟಿದೆ. ಅವರ ಕೈಯಲ್ಲಿ ಆರು ಬೆರಳುಗಳು ಇರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್ಶಾಟ್ ಮೂಲಕ ಅನೇಕರು ಹಂಚಿಕೊಂಡಿದ್ದಾರೆ.
ಯುದ್ಧ ತೀವ್ರಗೊಳ್ಳುತ್ತಿರುವಾಗಲೇ ಇರಾನಿನ ಕ್ಷಿಪಣಿ ದಾಳಿಗೆ ನೇತನ್ಯಾವು ಹತ್ಯೆಗೀಡಾಗಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು. ಇರಾನಿನ ಸುದ್ದಿ ಸಂಸ್ಥೆಯಾದ ಫಾರ್ಸ್, ತಸ್ ನೀಮ್ ಮುಂತಾದುವು ಈ ಬಗ್ಗೆ ವರದಿ ಮಾಡಿದ್ದು ಕೆಲವು ದಿನಗಳಿಂದ ನೇತನ್ಯಾಹು ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದರಿಂದ ಈ ಸುದ್ದಿಗೆ ಬಲ ಬಂದಿತ್ತು. ಇದೀಗ ವಿಡಿಯೋ ಅದಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡಿದೆ.
ಇದೇ ವೇಳೆ ಇಸ್ರೇಲ್ ಭೇಟಿಗೆ ಬಂದಿದ್ದ ಅಮೆರಿಕಾದ ಪ್ರತಿನಿಧಿಗಳ ನಿಯೋಗದ ಜೊತೆಗಿನ ಮಾತುಕತೆಯನ್ನು ಅವರು ರದ್ದು ಪಡಿಸಿದ್ದರು. ಇದು ಕೂಡ ಅವರ ಹತ್ಯೆಯ ಸುದ್ದಿಗೆ ಬಲವನ್ನು ನೀಡಿತ್ತು. ಇದೀಗ ವಿಡಿಯೋದಲ್ಲಿ ಕಾಣಿಸುತ್ತಿರುವುದು ನಿಜವಾದ ನೆತನ್ಯಾಹು ಅಲ್ಲ ಎಂಬ ಸುದ್ದಿ ಪ್ರಸಾರವಾಗುತ್ತಿದ್ದು ಊಹಾಪೋಹಗಳು ಹಾಗೆಯೇ ಉಳಿದುಕೊಂಡಿವೆ.












