ಇರಾನ್- ಅಮೇರಿಕಾ ಮಾತುಕತೆಗೆ ಅಂಗೀಕಾರ ನೀಡಿದ ಖಾಮ್ನೆಯಿ: ವರದಿ

0
553

ಸನ್ಮಾರ್ಗ ವಾರ್ತೆ

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗೆ ಇರಾನಿನ ಸರ್ವೋಚ್ಚ ನಾಯಕ ಮುಜ್ತಬಾ ಖಾಮ್ನೆಯಿ ಅಂಗೀಕಾರ ನೀಡಿದ್ದಾರೆ ಎಂದು ವರದಿಯಾಗಿದೆ. ಇರಾನಿನ ವಿದೇಶಾಂಗ ಸಚಿವ ಅರಾಗ್ಚಿ ಮತ್ತು ಅಮೆರಿಕಾದ ಮಧ್ಯಸ್ಥಿಕೆದಾರ ಸ್ಟೀವ್ ವಿಟ್ ಕೋಫ್ ನಡುವೆ ನಡೆದಿರುವ ಚರ್ಚೆಗಳನ್ನು ಉದ್ದರಿಸಿ ಮಾಧ್ಯಮ ವರದಿಗಳು ಈ ಮಾಹಿತಿಯನ್ನು ಬಹಿರಂಗಪಡಿಸಿವೆ. ಇರಾನಿನ ಉನ್ನತ ನಾಯಕರು ಈ ಮಾತುಕತೆಗೆ ಅಂಗೀಕಾರ ನೀಡಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ ಇಸ್ರೇಲಿನ ರಾಜಧಾನಿ ಟಿಲ್ ಅವಿವ್ ಮೇಲೆ ಇರಾನ್ ಸರಣಿ ದಾಳಿ ನಡೆಸಿದೆ. ಇದರಿಂದ ನಾಲ್ಕು ಮಂದಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಕಟ್ಟಡಗಳು ಮತ್ತು ವಾಹನಗಳು ಧ್ವಂಸವಾಗಿವೆ ದಟ್ಟ ಹೊಗೆ ಎದ್ದಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.

ಯುದ್ಧ ಆರಂಭವಾದ ಬಳಿಕ ಇರಾನಿನ ಆಕ್ರಮಣದಲ್ಲಿ 4,829 ಮಂದಿಗೆ ಗಾಯಗಳಾಗಿವೆ ಎಂದು ಇಸ್ರೇಲ್ ಹೇಳಿದೆ. ಇದರಲ್ಲಿ 112 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. 12 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಇಸ್ರೇಲ್ ಹೇಳಿದೆ.

ಇರಾನ್ ಮತ್ತು ಇಸ್ರೇಲ್ ಪರಸ್ಪರ ಶತ್ರುತ್ವವನ್ನು ಕೊನೆಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರ ಬಳಿಕ ಇರಾನ್ ಮಾತುಕತೆಗೆ ಅಂಗೀಕಾರ ನೀಡಿರುವ ಸುದ್ದಿ ಬಹಿರಂಗಕ್ಕೆ ಬಂದಿದೆ ಮಾತುಕತೆಗೆ ಇರಾನ್ ಮೊದಲಾಗಿ ಮುಂದೆ ಬಂದಿದೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್ ತನ್ನ ಅಣು ಯೋಜನೆಯನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿದೆ ಮಾತ್ರ ಅಲ್ಲ ಅದರ ಕೈವಶ ಇರುವ ಸಂಸ್ಕರಿತ ಯುರೇನಿಯಂ ಅಮೆರಿಕಕ್ಕೆ ಕೊಡಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಣು ಯೋಜನೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಅಮೆರಿಕಾದ ಬಯಕೆಯಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಇದೆ ವೇಳೆ ಇರಾನಿ ನ ಪರಮೋನ್ನತ ನಾಯಕ ಮುಜ್ತಬಾ ಖಾಮ್ನೆಯಿ ಅವರನ್ನು ಅಂಗೀಕರಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.