ಸನ್ಮಾರ್ಗ ವಾರ್ತೆ
39 ದಿನಗಳ ಯುದ್ಧದಲ್ಲಿ ಅಮೆರಿಕ 39 ಯುದ್ಧವಿಮಾನಗಳನ್ನು ಕಳಕೊಂಡಿದೆ ಎಂದು ವರದಿಯಾಗಿದೆ. ಡ್ರೋನ್ಗಳು ಯುದ್ಧವಿಮಾನಗಳು ನಿರೀಕ್ಷಣ ವ್ಯವಸ್ಥೆ ಮುಂತಾದವುಗಳು ಸೇರಿ 39 ವಿಮಾನಗಳನ್ನು ಅಮೆರಿಕ ಕಳಕೊಂಡಿದೆ ಎಂದು ವರದಿ ತಿಳಿಸಿದೆ.
ಇದು ಅಮೆರಿಕಾದ ವಾಯುರಕ್ಷಣಾ ಸಾಮರ್ಥ್ಯಕ್ಕೆ ಇತ್ತೀಚಿನ ದಶಕಗಳಲ್ಲಿ ಎದುರಾದ ಅತಿ ದೊಡ್ಡ ಪ್ರತಿರೋಧ ಎಂಬ ಅಭಿಪ್ರಾಯವೂ ಮೂಡಿಬಂದಿದೆ.
ಐದು ವಾರಗಳ ಕಾಲ ನಡೆದ ಯುದ್ಧದಲ್ಲಿ ಅಮೆರಿಕ ಸಣ್ಣ ಮತ್ತು ದೊಡ್ಡದೆಂದು ಹೇಳಬಹುದಾದ 13000 ಅಕ್ರಮಣಗಳನ್ನು ನಡೆಸಿದೆ. ಟಿ ಡಬ್ಲ್ಯೂ ಎಸ್, ಸಿ ಬಿ ಎಸ್, ಯುಎಸ್ ಮೀಡಿಯಾ ಮುಂತಾದ ಪತ್ರಿಕೆಗಳ ವಿವಿಧ ವರದಿಗಳನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ.
39 ವಿಮಾನಗಳು ಪತನವಾಗಿರುವುದರ ಹೊರತಾಗಿ 10 ವಿಮಾನಗಳಿಗೆ ಹಾನಿ ಉಂಟಾಗಿದೆ ಎಂದು ವರದಿಯಾಗಿದೆ.












