ತೇಜಸ್ವಿ ಸೂರ್ಯ ಮತ್ತು ಮಹಿಳಾ ಮೀಸಲಾತಿ ಮಸೂದೆ: ಬೂಟಾಟಿಕೆ ಬಯಲು

0
401

✒ಅಮಾನ್

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹಳೆಯ ಟ್ವೀಟುಗಳು ಮತ್ತೆ ಮುನ್ನೆಲೆಗೆ ಬಂದಿವೆ. ಮೊನ್ನೆ ಮೊನ್ನೆ ಪಾರ್ಲಿಮೆಂಟಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಪರ ಮತ್ತು ಕ್ಷೆತ್ರ ಪುನರ್ ವಿಂಗಡನೆಯ ಪರ ಭಯಂಕರ ಸಮರ್ಥನೆ ಮಾಡಿದ್ದ ತೇಜಸ್ವಿ ಸೂರ್ಯ ಅವರು 2014ರಲ್ಲಿ ಮಹಿಳಾ ಮೀಸಲಾತಿ ಯ ಬಗ್ಗೆ ಯಾವ ನಿಲುವನ್ನು ಹೊಂದಿದ್ದರು ಅನ್ನುವುದಕ್ಕೆ ಅವರ ಹಳೆಯ ಟ್ವೀಟುಗಳು ಸಾಕ್ಷ್ಯವನ್ನು ಒದಗಿಸುತ್ತಿವೆ. ಮೊನ್ನೆ ಅವರು ಪಾರ್ಲಿಮೆಂಟಲ್ಲಿ ಮಹಿಳಾ ಮೀಸಲಾತಿಯ ಪರ ಮಾತಾಡಿದ್ದಾರೆ. ಕ್ಷೇತ್ರ ಪುನರ್ ವಿಂಗಡನೆಯ ಪರ ಮಾತಾಡಿದ್ದಾರೆ. ಇದಕ್ಕಾಗಿ ತಮಿಳುನಾಡು ಆಂಧ್ರ ಮತ್ತು ತೆಲಂಗಾಣದ ಸಂಸದರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ತೇಜಸ್ವಿ ಸೂರ್ಯ ಅವರು ಇನ್ನೂ ಸಂಸದರಾಗುವ ಮೊದಲು 2014 ಜೂನ್ ನಲ್ಲಿ ಟ್ವೀಟ್ ಮಾಡಿದ್ದರು . ಆಗ ಅವರ ತನ್ನನ್ನು ಚೌಕಿದಾರ್ ತೇಜಸ್ವಿ ಸೂರ್ಯ ಎಂದು ಗುರುತಿಸಿಕೊಂಡಿದ್ದರು. ಆ ಟ್ವಿಟ್ ನಲ್ಲಿ ಅವರು ಮಹಿಳಾ ಮೀಸಲಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು .

” ಮಹಿಳಾ ಮೀಸಲಾತಿ ಯ ಬಗ್ಗೆ ಮೋದಿ ಸರಕಾರದ ನಿಲುವನ್ನು ಹೊರತುಪಡಿಸಿ ಉಳಿದ ಅಜೆಂಡ ಅದ್ಭುತವಾಗಿದೆ. ಮಹಿಳಾ ಮೀಸಲಾತಿ ನಿಜವಾಗುವ ದಿನ ಆತಂಕದ ಮತ್ತು ಭಯಾನಕ ದಿನವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದರು.

ಆದರೆ ಈಗ ಈ ಟ್ವೀಟ್ ಹುಡುಕಿದರೆ ಸಿಗಲ್ಲ. ಯಾಕೆಂದರೆ ಅವರು ಡಿಲೀಟ್ ಮಾಡಿದ್ದಾರೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಇವರಿಗೆ ಬಿಜೆಪಿ ಟಿಕೆಟ್ ಕೊಟ್ಟ ಕೂಡಲೇ ಇವರು ಹಳೆಯ ಟ್ವೀಟ್ ಅನ್ನು ಡಿಲೀಟ್ ಮಾಡಿ ಪರಾರಿಯಾಗಿದ್ದಾರೆ. ಆದರೆ ಅನೇಕರು ಇದರ ಸ್ಕ್ರೀನ್ ಶಾಟ್ ಆಗಲೇ ತೆಗೆದಿರಿಸಿದ್ದು ಈಗ ಪುನಃ ಅದು ವೈರಲ್ ಆಗ್ತಾ ಇದೆ.

ತೇಜಸ್ವಿ ಸೂರ್ಯ ತನ್ನ ಅಗ್ಗದ ಮಾತುಗಾರಿಕೆ ಮತ್ತು ತೂಕವಿಲ್ಲದ ಹೇಳಿಕೆಯಿಂದಾಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗುತ್ತಾ ಇರುತ್ತಾರೆ. ಇದೀಗ ತನ್ನ ಬೂಟಾಟಿಕೆಯ ಮಾತುಗಳಿಂದ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಗೆ ಈಡಾಗಿದ್ದಾರೆ. ಇವರು ಮಹಿಳಾ ಮೀಸಲಾತಿಯ ವಿರೋಧಿಯಾಗಿದ್ದು ಈಗ ತನ್ನ ಪಕ್ಷವನ್ನು ಸಮರ್ಥಿಸುವುದಕ್ಕಾಗಿ ನಾಟಕ ಮಾಡ್ತಾ ಇದ್ದಾರೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳ್ತಾ ಇದ್ದಾರೆ. ನಿಲುವಿನಲ್ಲಿ ಯಾವುದೇ ಸ್ಪಷ್ಟತೆ ಇಲ್ಲದ ಮತ್ತು ಬದ್ಧತೆ ಇಲ್ಲದ ವ್ಯಕ್ತಿ ಎಂದು ಹೇಳ್ತಾ ಇದ್ದಾರೆ . ಪಾರ್ಲಿಮೆಂಟ್ ನಲ್ಲಿ ಹಿರಿಯ ಸಂಸದರಿಗೆ ಸಿಗುವುದಕ್ಕಿಂತ ಹೆಚ್ಚು ಮಹತ್ವ ಇವರಿಗೆ ಸಿಗುವುದಕ್ಕೆ ಇವರ ಜಾತಿಬಲ ಕಾರಣ ಎಂದು ಹೇಳ್ತಾ ಇದ್ದಾರೆ.

ಪಾರ್ಲಿಮೆಂಟಲ್ಲಿ ವಿರೋಧಪಕ್ಷಗಳನ್ನು ಹಣಿಯಲು ಹೋದ ತೇಜಸ್ವಿ ಸೂರ್ಯ ರನ್ನು ಈಗ ಜನರು ಅವರ ಹಳೆಯ ಟ್ವೀಟುಗಳನ್ನು ಹಾಕಿಕೊಂಡು ಹಿಗ್ಗಾಮುಗ್ಗ ಪ್ರಶ್ನೆಗಳನ್ನು ಹಾಕತೊಡಗಿದ್ದಾರೆ.