ಅತೃಪ್ತ ಶಾಸಕರ ಅರ್ಜಿ ಸುಪ್ರೀಂಕೋರ್ಟಿನಲ್ಲಿ ನಾಳೆ ವಿಚಾರಣೆ; ಸ್ಪೀಕರ್ ಮುಂದೆ ಹಾಜರಾಗುವಂತೆ ನಿರ್ದೇಶನ

0
577

ಹೊಸದಿಲ್ಲಿ, ಜು.11: ಹದಿನೈದು ಅತೃಪ್ತ ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟು ನಾಳೆಗೆ ಮುಂದೂಡಿದೆ. ಸ್ಪೀಕರ್ ರಾಜೀನಾಮೆ ಸ್ವೀಕರಿಸಲು ವಿಳಂಬ ಮಾಡುತ್ತಿದ್ದು, ನಮ್ಮನ್ನು ಅಮಾನತು ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಅತೃಪ್ತ ಶಾಸಕರ ಪರ ಸುಪ್ರೀಂಕೋರ್ಟಿನಲ್ಲಿ ಮುಕುಲ್ ರೊಹ್ಟಗಿ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಇದೇ ವೇಳೆ ಅತೃಪ್ತ ಶಾಸಕರು ಸ್ಪೀಕರ್ ಮುಂದೆ ಇಂದು ಸಂಜೆ ಆರು ಗಂಟೆಯೊಳಗೆ ಹಾಜರಾಗಬೇಕೆಂದು ಸುಪ್ರೀಂಕೋರ್ಟು ನಿರ್ದೇಶಿಸಿದೆ.

ಸುಪ್ರೀಂ ಕೋರ್ಟು ಆದೇಶ ಪ್ರಕಾರ ಅತೃಪ್ತ ಶಾಸಕರನ್ನು ಸಂಜೆ ಆರು ಗಂಟೆಯೊಳಗೆ ಸ್ಪೀಕರ್ ಭೇಟಿಯಾಗಬೇಕಾಗುತ್ತದೆ. ನಾಳೆ ಕೋರ್ಟು ವಿಚಾರಣೆಗೆ ಎತ್ತಿಕೊಳ್ಳುವ ವೇಳೆ ಸ್ಪೀಕರ್ ನಿರ್ಧಾರ ಸ್ಪಷ್ಟವಾಗಲಿದೆ. ಆದರೆ ಸ್ಪೀಕರ್ ಗೆ ಕೋರ್ಟು ನೇರವಾಗಿ ಆದೇಶ ನೀಡಿದೆಯೇ ಎನ್ನುವುದು ಗೊತ್ತಾಗಿಲ್ಲ. ಆದರೆ ಸ್ಪೀಕರ್ ಮುಂದೆ ಹಾಜರು ಆಗುವಾಗ ಶಾಸಕರಿಗೆ ಸೂಕ್ತ ಭದ್ರತೆ ನೀಡುವಂತೆ ಕೋರ್ಟು ಪೊಲೀಸರಿಗೆ ಆದೇಶ ನೀಡಿದೆ.