ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಯತ್ತ; ವಿಧಾನಸಭಾ ಪರಿಸರದಲ್ಲಿ ನಿಷೇಧಾಜ್ಞೆ

0
712

ಬೆಂಗಳೂರು, ಜು. 11: ಅತೃಪ್ತ ಶಾಸಕರ ರಾಜೀನಾಮೆಯಿಂದ ವಿಚಲಿತರಾಗಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ರಾಜೀನಾಮೆ ನೀಡಲಿದ್ದಾರೆ. ದೋಸ್ತಿ ಸರಕಾರದಲ್ಲಿ ಅತೃಪ್ತಿಯನ್ನು ಸೂಚಿಸಿ 16 ಶಾಸಕರು ರಾಜೀನಾಮೆ ನೀಡಿಯಾಗಿದೆ. ಇಬ್ಬರು ಸಚಿವರು ಬಿಜೆಪಿಗೆ ಬೆಂಬಲವನ್ನು ಘೋಷಿಸಿದ್ದಾರೆ. ಇನ್ನು ಸರಕಾರವನ್ನು ರಕ್ಷಿಸಲು ಕುಮಾರಸ್ವಾಮಿ ಬಳಿ ಯಾವುದೇ ಮಂತ್ರ ದಂಡವಿಲ್ಲ. ಆದ್ದರಿಂದ ಅವರು ರಾಜೀನಾಮೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಘರ್ಷಣೆಯ ಸಾಧ್ಯತೆಯನ್ನು ಗಮನಿಸಿ ಕರ್ನಾಟಕ ವಿಧಾನಸಭೆಯ ಸುತ್ತಲೂ ನಿಷೇಧಾಜ್ಞೆ ಘೋಷಿಸಲಾಗಿದೆ 11 ತಾರೀಕಿನಿಂದ 14ನೇ ತಾರೀಕಿನವರೆಗೆ ನಿಷೇಧಾಜ್ಞೆ ಘೋಷಿಸಲಾಗಿದೆ. ಮುಂಬೈ ಹೊಟೇಲಿನಲ್ಲಿದ್ದ ಅತೃಪ್ತ ಶಾಸಕ ಸೋಮಶೇಖರ್ ಬೆಂಗಳೂರಿಗೆ ಬಂದು ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈಗಲೂ ಕಾಂಗ್ರೆಸ್‍ನಲ್ಲಿದ್ದೇನೆ ಎಂದು ಹೇಳಿದ್ದಾರೆ. ಅತೃಪ್ತರಿಗೆ ಮಣೆಹಾಕಲು ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರದ ಎಲ್ಲ ಸದಸ್ಯರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಪಾಲರಿಗೆ ಕೊಟ್ಟಿಲ್ಲ. ಆದ್ದರಿಂದ ಅವರೆಲ್ಲರೂ ಈಗಲೂ ಸಚಿವರಾಗಿಯೇ ಮುಂದುವರಿದಿದ್ದಾರೆ. ಶುಕ್ರವಾರ ವಿಧಾನಸಭಾ ಅಧಿವೇಶನ ಆರಂಭವಾಗುತ್ತಿದ್ದು ಅದಕ್ಕಿಂತ ಮುಂಚೆ ರಾಜ್ಯಪಾಲರನ್ನು ಭೇಟಿಯಾಗಿ ಕುಮಾರ ಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಈಗ ಮೂವರು ಜೆಡಿಎಸ್‍ ಶಾಸಕರು, 13 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ.