ಸನ್ಮಾರ್ಗ ವಾರ್ತೆ
ಬ್ಯಾಂಕ್ ವಂಚನೆಯ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಹಿತ ಇತರ ಆರೋಪಿಗಳನ್ನು ಯಾಕೆ ಬಂದನಕ್ಕೆ ಒಳಪಡಿಸುತ್ತಿಲ್ಲ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ನಲ್ಲಿ ಉತ್ತರಿಸಲು ಸಾಲಿಸಿಟರ್ ಜನರಲ್ ನಿರಾಕರಿಸಿದಾರೆ. ಅನಿಲ್ ಅಂಬಾನಿ ಗ್ರೂಪ್ 40,000 ಕೋಟಿ ರೂಪಾಯಿಯನ್ನು ಬ್ಯಾಂಕಿಗೆ ವಂಚಿಸಿದೆ ಎಂದು ಹೇಳಿ ಅವರ ಕಂಪನಿಯ ಮಾಜಿ ಉದ್ಯೋಗಿ ಇಎಎಸ್ ಶರ್ಮ ನೀಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹತ ಈ ಉತ್ತರ ನೀಡಿದ್ದಾರೆ.
ಅನಿಲ್ ಅಂಬಾನಿ ಗ್ರೂಪ್ ಒಳಗೊಂಡಿರುವ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಯನ್ನು ಏಕೆ ಬಂಧಿಸಲಾಗಿಲ್ಲ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರು. ಆದರೆ ಬಂಧಿಸುವುದು ಬಿಡುವುದು ತನಿಖಾ ಸಂಸ್ಥೆಗಳ ನಿರ್ಧಾರ ಮತ್ತು ಅಂಥ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಅವರು ಸೆಬಿ ಹಗರಣದ ಮಾಸ್ಟರ್ ಮೈಂಡ್ ಎಂದು ಬಣ್ಣಿಸಿದ ಅನಿಲ್ ಅಂಬಾನಿ ತಲೆಮರಿಸಿಕೊಂಡಿದ್ದಾರೆ ಎಂದು ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು.
ಅನಿಲ್ ಅಂಬಾನಿ ಆಸ್ತಿಗಳಿಂದ ಹದಿನೈದು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದೆ.












