ಡಾ. ಗುಲಾಂ ಜೀಲಾನಿ ಸಾಬ್ ನಿಧನ

0
551

ಸನ್ಮಾರ್ಗ ವಾರ್ತೆ

ಮಾನ್ವಿ: ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯ ಡಾ. ಗುಲಾಂ ಜೀಲಾನಿ ಸಾಬ್ ಅವರು ನಿಧನರಾಗಿದ್ದಾರೆ. ಇವರು ಸ್ಥಾನೀಯ ಜಮಾಅತ್‌ನ ಅಧ್ಯಕ್ಷರಾಗಿಯೂ ದುಡಿದಿದ್ದರು.

ಮಾನ್ವಿಯ ಚಿರಪರಿಚಿತ ಕೋಟ್ ಸಾಬ್ ಕುಟುಂಬದ ಸದಸ್ಯರಾಗಿದ್ದ ಇವರು ಸ್ಥಳೀಯ ಹುದಾ ಮಸೀದಿಯ ಇಮಾಮ್ ಕೂಡ ಆಗಿದ್ದರು. ಶುಕ್ರವಾರದಂದು ಇವರು ನೀಡುವ ಪ್ರವಚನ ಬಹಳ ಪ್ರಸಿದ್ಧವಾಗಿತ್ತು.

ವೈದ್ಯರಾಗಿ ಜನಾನುರಾಗಿಯಾಗಿ ಮತ್ತು ಮಾರ್ಗದರ್ಶಕರಾಗಿ ಮಾನ್ವಿ ತುಂಬಾ ಇವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಇವರು ಪತ್ನಿ, ಮೂವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಸಹಿತ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಅಲ್ಲಾಹನು ಮೃತರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.