ಟೆಹ್ರಾನ್, ಜು. 15: ನಮ್ಮ ಮೇಲಿರುವ ದಿಗ್ಬಂಧನವನ್ನು ಹಿಂತೆಗೆದರೆ ಅಮೆರಿಕದೊಂದಿಗೆ ಚರ್ಚಿಸಲು ಸಿದ್ಧ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ. ನಮಗೆ ಈಗಲೂ ಚರ್ಚೆಯಲ್ಲಿ ನಂಬಿಕೆ ಇದೆ. ಅವರು ದಿಗ್ಬಂಧನವನ್ನು ಹಿಂಪಡೆಯಲಿ. ಇರಾನ್ ಮೇಲೆ ಹಾಕಿದ ಒತ್ತಡವನ್ನು ಕೊನೆಗೊಳಿಸಲಿ. 2015ರ ಅಣು ಒಪ್ಪಂದಕ್ಕೆ ಮರಳಲಿ. ಹೀಗೆ ಮಾಡಿದರೆ ಅಮೆರಿಕದೊಂದಿಗೆ ಚರ್ಚಿಸಲು ನಾವು ಸಿದ್ಧ ಎಂದು ಅವರು ಹೇಳಿದರು.
ರವಿವಾರ ಟಿವಿಯಲ್ಲಿ ಭಾಷಣ ಮಾಡಿದ ರೂಹಾನಿ ಚರ್ಚೆಗೆ ಸಿದ್ಧ ಎಂದು ತಿಳಿಸಿದರು. ಅಮೆರಿಕ ಅಣು ಒಪ್ಪಂದದಿಂದ ಹಿಂದೆ ಸರಿಯುವ ಮೊದಲು ಇರಾನ್ ತೈಲ ರಫ್ತು ಮಾಡುತ್ತಿತ್ತು. ಅದನ್ನು ನಮಗೆ ಮುಂದು ವರಿಸಲು ಸಾಧ್ಯವಾಗಬೇಕೆಂದು ಎನ್ನುವ ನಿಬಂಧನೆಯನ್ನು ಇರಾನ್ ಮುಂದಿರಿಸಿದೆ. ಇರಾನ್ ಮತ್ತು ಅಮೆರಿಕದ ನಡುವೆ ಮಾತಿನ ಚಕಮಕಿ ಮುಂದುವರಿಯುತ್ತಿರುವ ವೇಳೆಯೇ ಇರಾನ್ ಈ ಬೇಡಿಕೆಯನ್ನು ಮುಂದಿಟ್ಟಿದೆ.












