ಸನ್ಮಾರ್ಗ ವಾರ್ತೆ
ಇರಾನ್ ಜೊತೆಗಿನ ಶಾಂತಿ ಒಪ್ಪಂದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಟೀಕಿಸಿದ್ದಾರೆ. ಇರಾನ್ ಜೊತೆಗಿನ ಯುದ್ಧಕ್ಕಿಂತ ಮೊದಲು ಇದ್ದ ಸ್ಥಿತಿಗೆ ಅಮೆರಿಕ ಮರಳಿದೆ ಮತ್ತು ಅದಕ್ಕಿಂತ ಕೆಟ್ಟದಾಗಿದೆ ಎಂದು ಒಬಾಮ ಹೇಳಿದ್ದಾರೆ.
ನಾವು ಇದೀಗ ಯುದ್ಧ ಮಾಡಿದ್ದೇವೆ. ಶತಕೋಟಿ ಡಾಲರ್ ಖರ್ಚು ಮಾಡಿದ್ದೇವೆ. ನಮ್ಮ ಮಿಲಿಟರಿಯ ಮೇಲೆ ಹೆಚ್ಚಿನ ಒತ್ತಡ ಹೇರಿದ್ದೇವೆ. ಬಹಳಷ್ಟು ಜನರು ಸತ್ತಿದ್ದಾರೆ. ಯುದ್ಧ ಪ್ರಾರಂಭವಾಗುವ ಮೊದಲು ನಾವು ಯಾವ ಸ್ಥಳದಲ್ಲಿ ಇದ್ದೆವೋ ಆ ಸ್ಥಳಕ್ಕೆ ಮರಳಿದ್ದೇವೆ ಎಂದು ಒಬಾಮ ಹೇಳಿದ್ದಾರೆ.
ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದದ ಅಡಿಯಲ್ಲಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದೆ ಇರಲು ಒಪ್ಪಿಕೊಂಡಿತ್ತು. ಆದರೆ ಈ ಆಡಳಿತ ನನ್ನ ಒಪ್ಪಂದದಿಂದಲೂ ಹಿಂದೆ ಸರಿದಿದೆ. ಇದು ಇರಾನ್ ಹೆಚ್ಚಿನ ಪರಮಾಣು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಕಾರಣವಾಗಲಿದೆ ಎಂದು ಒಬಾಮ ಗಮನ ಸೆಳೆದಿದ್ದಾರೆ.












