ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ವಿಧಿಸಿದ ಇನ್ಸ್ಪೆಕ್ಟರ್ ಹೆಲ್ಮೆಟ್ ಇಲ್ಲದೆ ಬೈಕಲ್ಲಿ ಹೋದರು

0
393

ಸನ್ಮಾರ್ಗ ವಾರ್ತೆ

ರಸ್ತೆ ನಿಯಮಗಳು ಪೊಲೀಸರಿಗೂ ನಾಗರಿಕರಿಗೂ ಸಮಾನ. ಇದನ್ನು ಹೇಳಿದ ಕಾರಣಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಯುವಕನೋರ್ವ ದಂಡ ತೆರಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ ಅವರ ಜೊತೆ ಬಹಿರಂಗವಾಗಿ ಯುವಕ ಮಾತಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ತಪ್ಪನ್ನು ತಿದ್ದಿಕೊಳ್ಳುವ ಬದಲು ಈ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವಕನ ಮೇಲೆ ಪ್ರಕರಣ ದಾಖಲಿಸಿ ಆರು ಸಾವಿರ ರೂಪಾಯಿ ದಂಡ ಕಟ್ಟುವಂತೆ ಮಾಡಿದ್ದಾರೆ. ಇದರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆಯ ಎರಡು ಪ್ರಕರಣಗಳನ್ನು ಈ ಯುವಕನ ಮೇಲೆ ಈ ಸಬ್ ಇನ್ಸ್ಪೆಕ್ಟರ್ ದಾಖಲಿಸಿದ್ದಾರೆ. ವಾಹನದ ನಂಬರ್ ಪ್ಲೇಟ್ ಸ್ಪಷ್ಟವಾಗಿ ನಿಯಮವನ್ನು ಪಾಲಿಸಿಲ್ಲ ಎಂದು ಹೇಳಿ ಯುವಕನ ಮೇಲೆ 5,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದೆ ಇರುವುದಕ್ಕೆ ಒಂದು ಸಾವಿರ ರೂಪಾಯಿ ಸೇರಿ 6000 ದಂಡ ಕಟ್ಟುವಂತೆ ಆದೇಶಿಸಿದ್ದಾರೆ. ಹೀಗೆ ದಂಡ ಕಟ್ಟಿದ ಬಳಿಕ ಇದೇ ಸಬ್ ಇನ್ಸ್ಪೆಕ್ಟರ್ ಹೆಲ್ಮೆಟ್ ಇಲ್ಲದೆ ಅಲ್ಲಿಂದ ಬೈಕ್ ನಲ್ಲಿ ಹೊರಟು ಹೋಗಿದ್ದಾರೆ.

ನಿಮ್ಮ ಹೆಲ್ಮೆಟ್ ಎಲ್ಲಿ ಎಂದು ದಂಡ ಕಟ್ಟಿದ ಯುವಕ ಸಬ್ ಇನ್ಸ್ಪೆಕ್ಟರ್ ರಲ್ಲಿ ಪ್ರಶ್ನಿಸುತ್ತಾನೆ . ಆದರೆ ನನ್ನ ಹೆಲ್ಮೆಟ್ ಕಳೆದು ಹೋಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಉತ್ತರಿಸುತ್ತಾರೆ. ಆದರೆ ಟ್ರಾಫಿಕ್ ನಿಯಮ ನನಗೂ ನಿಮಗೂ ಇಬ್ಬರಿಗೂ ಸಮಾನ ಅಲ್ವೇ ಎಂದು ಯುವಕ ಪ್ರಶ್ನಿಸುತ್ತಾನೆ . ಬಳಿಕ ಇಬ್ಬರ ನಡುವೆ ವಾಗ್ವಾದ ಉಂಟಾಗುತ್ತದೆ. ಯುವಕ ಈ ದೃಶ್ಯವನ್ನು ಸೆರೆ ಹಿಡಿಯುತ್ತಾನೆ. ಈ ಸಂದರ್ಭದಲ್ಲಿ ಅವರು ಯುವಕನಿಂದ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸುತ್ತಾರೆ.

ಅನೋಜ್ ಅಗ್ನಿ ಹೋತ್ರಿ ಎಂಬವರು ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ