ಸನ್ಮಾರ್ಗ ವಾರ್ತೆ
ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ದಾಳಿಯಲ್ಲಿ ಮೃತಪಟ್ಟ ಇರಾನ್ ಸರ್ವೋಚ್ಛ ನಾಯಕ ಖಾಮ್ನೆಯಿ ಅವರಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಲು ತೆಹರಾನಿನ ಗ್ರಾಂಡ್ ಮಸೀದಿಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಗ್ರಾಂಡ್ ಮಸೀದಿಯಲ್ಲಿ ಪ್ರಾರಂಭವಾದ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಪ್ರತೀಕಾರದ ಸಂಕೇತಗಳಾದ ಕೆಂಪು ಧ್ವಜವನ್ನು ಹಿಡಿದು ಜನರು ಆಗಮಿಸಿದರು. ಆರು ದಿನಗಳ ಅಂತ್ಯಕ್ರಿಯೆ ಸಮಾರಂಭದಲ್ಲಿ ನೂರು ದೇಶಗಳಿಂದ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಖಾಮ್ನೆಯಿ ಹತ್ಯೆಗೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಒತ್ತಾಯಿಸುವ ಬ್ಯಾನರ್ಗಳೊಂದಿಗೆ ಜನರು ಆಗಮಿಸುತ್ತಿದ್ದಾರೆ. ಖಾಮ್ನೆಯಿ ಅವರ ಭೌತಿಕ ದೇಹವನ್ನು ಹೊಂದಿರುವ ಶವಪೆಟ್ಟಿಗೆಯ ಕೆಳಗೆ ಇರಿಸಲಾಗಿರುವ ಶಿಶು ಶವಪೆಟ್ಟಿಗೆಯನ್ನು ನೋಡಿದಾಗ ಗ್ರಾಂಡ್ ಮಸೀದಿಗೆ ಬರುವ ಯಾರಾದರೂ ಆಘಾತಕ್ಕೊಳಕಾಗಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಜೀವನ ಎಂದರೇನು ಎಂದೂ ತಿಳಿದಿಲ್ಲದ 14 ತಿಂಗಳ ಮಗುವಿನ ಶವಪೆಟ್ಟಿಗೆಯನ್ನು ಇರಾನಿನ ರಾಷ್ಟ್ರೀಯ ಧ್ವಜದಲ್ಲಿ ಸುತ್ತಿ ಇಡಲಾಗಿದೆ. ಶಿಶುವಿನ ಶವದ ಬಳಿ ಬರುವ ಪ್ರತಿಯೊಬ್ಬರೂ ಅಳುತ್ತಾರೆ. ಫೆಬ್ರವರಿ 28ರಂದು ನಡೆದ ದಾಳಿಯಲ್ಲಿ ಖಾಮ್ನೆಯಿ ಅವರ 14 ತಿಂಗಳ ಮೊಮ್ಮಗಳು ಝಹ್ರಾ ಮಹಮ್ಮದಿ ಕೂಡ ಹತ್ಯೆಗೀಡಾಗಿದ್ದಳು. ಈ ದಾಳಿಯಲ್ಲಿ ಕೊಲ್ಲಲ್ಪಟ್ಟ ಇತರರ ಶವಗಳನ್ನು ಕೂಡ ಗ್ರಾಂಡ್ ಮಸೀದಿಯಲ್ಲಿ ಇರಿಸಲಾಗಿದೆ.
ಶೋಕಾಚರಣೆಯಲ್ಲಿ ಭಾಗವಹಿಸಲು ದೇಶಾದ್ಯಂತ ಬರುವವರಿಗೆ ಸ್ಥಳಾವಕಾಶ ಕಲ್ಪಿಸುವುದಕ್ಕಾಗಿ ತೆಹರನಿನ 5000ಕ್ಕೂ ಹೆಚ್ಚು ಶಾಲೆಗಳು ಮತ್ತು 40,000 ದಿಂದ 50,000 ತರಗತಿಯ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಇರಾನ್ ಶಿಕ್ಷಣ ಸಚಿವರು ಹೇಳಿದ್ದಾರೆ.












