ಸನ್ಮಾರ್ಗ ವಾರ್ತೆ
ಇರಾನ್ನಲ್ಲಿ ಇಸ್ರೇಲ್ ವಿರುದ್ಧ ಕೆಲಸ ಮಾಡುವ ಯಾವುದೇ ನಾಯಕನನ್ನು ಹತ್ಯೆ ಮಾಡಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಡ್ಜ್ ಹೇಳಿದ್ದಾರೆ. ಇರಾನ್ ನ ಮಾಜಿ ಸರ್ವೋಚ್ಚ ನಾಯಕರಾದ ಅಲಿ ಖಾಮ್ನೆಯಿ ಅವರನ್ನು ನಾವೇ ಕೊಂದಿದ್ದೇವೆ ಮತ್ತು ಅವರು ಇಸ್ರೇಲನ್ನು ನಾಶ ಮಾಡಲು ಉದ್ದೇಶಿಸಿದ್ದರಿಂದ ಹೀಗೆ ಅವರ ಹತ್ಯೆ ಮಾಡಲಾಯಿತು ಎಂದು ಅವರು ಸಮರ್ಥಿಸಿದ್ದಾರೆ.. ಇದನ್ನು ಇಸ್ರೇಲ್ ನ ಚಾನೆಲ್ 13 ವರದಿ ಮಾಡಿದೆ.
ತೆಹರಾನಿನಲ್ಲಿ ಖಾಮ್ನೆಯಿ ಅವರ ಅಂತ್ಯಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ಇಸ್ರೇಲ್ ಸಚಿವ ಈ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದೀಗ ಈ ಹೇಳಿಕೆ ಬಾರಿ ವಿವಾದಕ್ಕೆ ಕಾರಣವಾಗಿದೆ.
ತೆಹರಾನಿನಲ್ಲಿ ನಡೆದ ಖಾಮ್ನೆಯಿ ಅವರ ಅಂತ್ಯಕ್ರಿಯೆ ಮತ್ತು ಅದರಲ್ಲಿ ಕೂಗಲಾದ ಘೋಷಣೆಗಳ ಬಗ್ಗೆ ಕಾಡ್ಜ್ ವ್ಯಂಗ್ಯವಾಡಿದರು . ಈ ಮಧ್ಯೆ ಖಾಮ್ನೆಯಿ ಅವರ ಅಂತ್ಯಕ್ರಿಯೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ವಿರುದ್ಧ ಜನಸಮೂಹ ಹತ್ಯೆ ಬೆದರಿಕೆಗಳನ್ನು ಕೂಗಿದೆ. ಬೀದಿಯಲ್ಲಿ ಪ್ರತಿಭಟಿಸಿದೆ. ಶೋಕ ಮೆರವಣಿಗೆಯಲ್ಲಿ ಸೇರಿದ ಭಾರಿ ದೊಡ್ಡ ಜನಸಮೂಹವು ಮತ್ತು ಟ್ರಂಪ್ ನೆತನ್ಯಾಹು ಅವರ ಚಿತ್ರಗಳಿರುವ ಜಾಹೀರಾತು ಫಲಕಗಳ ಮೇಲೆ ಕಲ್ಲುಗಳನ್ನು ಎಸೆದಿದೆ. ಸಾವಿಗೆ ಸೇಡು ತೀರಿಸಿಕೊಳ್ಳಬೇಕೆಂದು ಒತ್ತಾಯಿಸಿದೆ.












