ಕ್ಷಿಪಣಿ ಪರೀಕ್ಷಿಸಿದ ಚೀನಾ, ಕಳವಳ ವ್ಯಕ್ತಪಡಿಸಿದ ಅಮೆರಿಕ

0
303

ಸನ್ಮಾರ್ಗ ವಾರ್ತೆ

ಫೆಸಿಫಿಕ್ ಮಹಾಸಾಗರದಲ್ಲಿ ದೀರ್ಘ ಶ್ರೇಣಿಯ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಚೀನಾ ಪರೀಕ್ಷಿಸುವ ಮೂಲಕ ಅಮೆರಿಕದಲ್ಲಿ ಕಳವಳ ಹುಟ್ಟು ಹಾಕಿದೆ. ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಲಾದ ಕ್ಷಿಪಣಿಯನ್ನು ಅಮೆರಿಕ ಮತ್ತು ಇಂಡೋ ಫೆಸಿಫಿಕ್ ದೇಶಗಳು ಪ್ರಚೋದನಕಾರಿ ಮತ್ತು ಅಸ್ಥಿರಗೊಳಿಸುವ ತಂತ್ರ ಎಂದು ಹೇಳಿವೆ. ಚೀನಾ ತನ್ನ ಪರಮಾಣು ಶಸ್ತ್ರಾಗಾರದ ತ್ವರಿತ ಅಭಿವೃದ್ಧಿಯನ್ನು ತೋರಿಸ್ತಾ ಇದೆ ಎಂದು ವಾಷಿಂಗ್ಟನ್ ಆರೋಪಿಸಿದೆ.

ಈ ಪರೀಕ್ಷೆಯು ನಿಯಮಿತ ವಾರ್ಷಿಕ ಮಿಲಿಟರಿ ವ್ಯಾಯಾಮದ ಭಾಗವಾಗಿದೆ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸಿದೆ ಎಂದು ಚೀನಾ ಹೇಳಿದೆ. ಆದರೆ ಎರಡು ವರ್ಷಗಳಲ್ಲಿ ಚೀನಾದ ಎರಡನೇ ಪರೀಕ್ಷೆ ಇದಾಗಿದೆ ಎಂಬುದು ಗಮನಾರ್ಹ.

ಜಾಗತಿಕವಾಗಿ ಪರಮಾಣು ಪ್ರಸರಣವನ್ನು ತಡೆಯಲು ಪ್ರಯತ್ನಿಸುತ್ತಿರುವ ಚೀನಾವು ವಿರುದ್ಧ ದಿಕ್ಕಿನಲ್ಲಿ ಸಾಗ್ತಾ ಇದೆ ಎಂದು ಅಮೆರಿಕಾದ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗೋಟ್ ಹೇಳಿದ್ದಾರೆ.

ಚೀನಾದ ಹೆಚ್ಚುತ್ತಿರುವ ಪರಮಾಣು ಶಸ್ತ್ರಾಗಾರದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಚೀನಾದ ಮಿಲಿಟರಿ ಚಟುವಟಿಕೆಯ ಬಗ್ಗೆ ಜಪಾನ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಆಸ್ಟ್ರೇಲಿಯಾ ಕೂಡ ಟೀಕಿಸಿದೆ.

ಇದೇ ವೇಳೆ ರಷ್ಯಾದ ವಕ್ತಾರ ಡಿಮಿಟ್ರಿ ಅವರು ಈ ಪರೀಕ್ಷೆಯು ಚೀನಾದ ಸಾರ್ವಭೌಮ ಹಕ್ಕು ಮತ್ತು ಯಾರಿಗೂ ಬೆದರಿಕೆಯನ್ನು ಉಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ.

2030ರ ವೇಳೆಗೆ ಚೀನಾದ ಪರಮಾಣು ಸಿಡಿತಲೆಗಳ ಸಂಖ್ಯೆ ಸಾವಿರವನ್ನು ದಾಟಲಿದೆ ಎಂದು ಅಮೆರಿಕ ಅಂದಾಜಿಸಿದೆ.